ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಗುಲಗಳಲ್ಲಿ ಪ್ರಸಾದ ವಿತರಣೆ: ಗ್ರೀನ್ ಸಿಗ್ನಲ್ ಕೊಟ್ಟ ಪಂಜಾಬ್ ಸರ್ಕಾರ

|
Google Oneindia Kannada News

ಚಂಡೀಗಡ, ಜೂನ್ 10: ದೇಶದಾದ್ಯಂತ ಅನ್ ಲಾಕ್ 1.0 ಜಾರಿಗೆ ಬಂದ ಮೇಲೆ ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಭಕ್ತರಿಗೆ ಮುಕ್ತಗೊಳಿಸಲಾಗಿದೆ. ಆದ್ರೆ, ಧಾರ್ಮಿಕ ಕೇಂದ್ರಗಳಲ್ಲಿ ಪ್ರಸಾದ ವಿತರಣೆ ಮಾಡುವುದಕ್ಕೆ ಮಾತ್ರ ಸರ್ಕಾರ ನಿಷೇಧ ಹೇರಿತ್ತು.

Recommended Video

Sriramulu taking a break at a small shop video goes viral | Oneindia Kannada

ಇದೀಗ ಧಾರ್ಮಿಕ ಕೇಂದ್ರಗಳಲ್ಲಿ, ದೇಗುಲಗಳಲ್ಲಿ ಪ್ರಸಾದ ನೀಡುವುದಕ್ಕೆ ಪಂಜಾಬ್ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಧಾರ್ಮಿಕ ಸ್ಥಳಗಳಲ್ಲಿ ಅಡುಗೆ ಮಾಡಲು, ಪ್ರಸಾದ ವಿತರಿಸಲು ಪಂಜಾಬ್ ಸರ್ಕಾರ ಅನುಮತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...

ಅಡುಗೆ ತಯಾರಿಸುವಾಗ, ಪ್ರಸಾದ ವಿತರಿಸುವಾಗ ಧಾರ್ಮಿಕ ಕೇಂದ್ರಗಳು ಕೋವಿಡ್-19 ತಡೆಗಟ್ಟಲು ಅನುಸರಿಸುವ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಾಗೇ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

Punjab Government Allows Serving Of Langars And Prasad At Religious Places

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾದ್ಮೇಲೆ, ದೇಶದಾದ್ಯಂತ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಎರಡುವರೆ ತಿಂಗಳ ಬಳಿಕ ಇದೀಗ ಧಾರ್ಮಿಕ ಸ್ಥಳಗಳನ್ನು ಸರ್ಕಾರದ ಆದೇಶ ನೀಡಿದ ಬಳಿಕ, ಮಾರ್ಗಸೂಚಿ ಅನ್ವಯ ತೆರೆಯಲಾಗಿದೆ.

English summary
Punjab Government allows serving of Langars and Prasad at Religious places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X