ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದ ಪಂಜಾಬ್‌ನ ಯುವತಿಯರು

|
Google Oneindia Kannada News

ಮೋಗಾ (ಪಂಜಾಬ್), ಜುಲೈ 6: ತಮ್ಮ ವಿರುದ್ಧದ ಸುಳ್ಳು ಆರೋಪಗಳಿಂದ ಬಿಡುಗಡೆ ಹೊಂದಲು ಸಹಾಯ ಮಾಡುವಂತೆ ಕೋರಿ ಪಂಜಾಬ್‌ನ ಮೋಗಾ ನಗರದ ಇಬ್ಬರು ಯುವತಿಯರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕುಡಿಯಲು ನೀರಿಲ್ಲ, ದಯಾಮರಣ ಕೋರಿ ಪದವೀಧರನಿಂದ ಪ್ರಧಾನಿಗೆ ಪತ್ರ ಕುಡಿಯಲು ನೀರಿಲ್ಲ, ದಯಾಮರಣ ಕೋರಿ ಪದವೀಧರನಿಂದ ಪ್ರಧಾನಿಗೆ ಪತ್ರ

'ನಮ್ಮ ಮೇಲೆ ಕಬೂತರ್ ಬಾಜಿ (ಪಾರಿವಾಳದ ಬಾಜಿ ಆಟ) ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಸುದೀರ್ಘ ಸಮಯದಿಂದ ಭಯದಿಂದಲೇ ಬದುಕುತ್ತಿದ್ದೇವೆ. ನಮಗೆ ನ್ಯಾಯ ಸಿಗದೆ ಇದ್ದರೆ ಇಡೀ ಕುಟುಂಬಕ್ಕೆ ದಯಾಮರಣ ನೀಡಿ' ಎಂದು ಇಬ್ಬರೂ ಪತ್ರದಲ್ಲಿ ಅಹವಾಲು ಸಲ್ಲಿಸಿದ್ದಾರೆ.

punjab girls letter with blood to president ram nath kovind

'ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ನಮ್ಮ ವಿರುದ್ಧ ಕಬೂತರ್ ಬಾಜಿ ಮತ್ತು ವಂಚನೆ ಹಾಗೂ ಮೋಸದ ಎರಡು ಸುಳ್ಳು ಪ್ರಕರಣಗಳನ್ನು ನಮ್ಮ ವಿರುದ್ಧ ದಾಖಲಿಸಿದ್ದಾರೆ. ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದರೂ ಪೊಲೀಸರು ನಮ್ಮ ಅಹವಾಲಿಗೆ ಕಿವಿಗೊಡುತ್ತಿಲ್ಲ' ಎಂದು ನಿಶಾ ಕೌರ್ ಮತ್ತು ಅಮನ್ ಜೋತ್ ಕೌರ್ ಆರೋಪಿಸಿದ್ದಾರೆ.

ನೋಟು ಅಮಾನ್ಯೀಕರಣದಿಂದ ದಿವಾಳಿ: ದಯಾಮರಣಕ್ಕೆ ಅರ್ಜಿ ನೋಟು ಅಮಾನ್ಯೀಕರಣದಿಂದ ದಿವಾಳಿ: ದಯಾಮರಣಕ್ಕೆ ಅರ್ಜಿ

'ನಮಗೆ ನ್ಯಾಯ ಸಿಗದೇ ಹೋದರೆ ಇಡೀ ಕುಟುಂಬಕ್ಕೆ ದಯಾಮರಣವನ್ನಾದರೂ ಕರುಣಿಸಿ ಎಂದು ಬೇಡಿಕೆ ಸಲ್ಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

ಈ ಇಬ್ಬರು ಯುವತಿಯರ ಆರೋಪಗಳನ್ನು ಮೋಗಾ ಡಿಎಸ್‌ಪಿ ಕುಲ್ಜಿಂದರ್ ಸಿಂಗ್ ನಿರಾಕರಿಸಿದ್ದಾರೆ.

English summary
Two Punjab girls wrote a litter with their blood to President Ram Nath Kovind seeking help in false cases filed against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X