• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ: ಸಿಎಂ ಮಾನ್‌ಗೆ ನವಜೋತ್ ಸಿಂಗ್ ಸಿಧು ಸಲಹೆ

|
Google Oneindia Kannada News

ಚಂಡೀಗಢ ಮೇ 18: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಹಿರಿಯ ನಾಯಕ ನವಜೋತ್ ಸಿಂಗ್ ಸಿಧು ಕೆಲ ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ. ಗೋಧಿಯ ಮೇಲಿನ ಬೋನಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಗಳ ನಡುವೆಯೇ ನವಜೋತ್ ಸಿಂಗ್ ಸಿಧು ಬುಧವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ಕೆಲ ಸಲಹೆಗಳನ್ನು ನಿಡಿದ್ದಾರೆ. ರೈತರು ಪಂಜಾಬ್‌ನ ಬೆನ್ನೆಲುಬು, ಅವರೊಂದಿಗೆ ಘರ್ಷಣೆ ಮಾಡಬೇಡಿ ಎಂದು ಹೇಳಿದ್ದಾರೆ.

 ದೆಹಲಿಯಲ್ಲಿ ತೆರವು ಕಾರ್ಯಚರಣೆ: ಎಎಪಿ ಶಾಸಕರ ಪ್ರತಿಭಟನೆ ದೆಹಲಿಯಲ್ಲಿ ತೆರವು ಕಾರ್ಯಚರಣೆ: ಎಎಪಿ ಶಾಸಕರ ಪ್ರತಿಭಟನೆ

ಸರಣಿ ಟ್ವೀಟ್‌ಗಳಲ್ಲಿ ಸಿಧು ಸಿಎಂ ಭಗವಂತ್ ಮಾನ್ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಎಚ್ಚರಿಸಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷದ ಐಟಿ ಸೆಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನಾ ನಿರತ ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್‌ನ ಜನಸಂಖ್ಯೆಯ ಶೇ 60% ರಷ್ಟಿರುವ ಮತ್ತು ರಾಜ್ಯದ ಆರ್ಥಿಕತೆಯ ಬೆನ್ನೆಲುಬು ಆಗಿರುವ ರೈತರನ್ನು ಕಡೆಕಣಿಸಬೇಡಿ ಎಂದು ಸಿಧು ಮುಖ್ಯಮಂತ್ರಿ ಮಾನ್‌ಗೆ ಒತ್ತಾಯಿಸಿದ್ದಾರೆ.

ಮಾನ್‌ಗೆ ಸಿಧು ಸಲಹೆ; ಪಂಜಾಬ್ ಮುಖ್ಯಮಂತ್ರಿಗೆ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಿ. ಇದರಿಂದ ಶೇ 70% ಕ್ಕಿಂತ ಹೆಚ್ಚು ಸಮಸ್ಯೆಗಳು ಮಾಯವಾಗುತ್ತವೆ. ರೈತರ ವಿರುದ್ಧದ ಹೋರಾಟದಲ್ಲಿ ಯಾರೂ ಗೆದ್ದಿಲ್ಲ ಎಂದು ಸಿಧು ಸಲಹೆ ನೀಡಿದರು.

Punjab Farmers protest: Navjot Singh Sidhu advises CM Bhagwant Mann

ಮುಖ್ಯಮಂತ್ರಿಗಳ ಹೇಳಿಕೆ; ಮಂಗಳವಾರ ಚಂಡೀಗಢ-ಮೊಹಾಲಿ ಗಡಿಯಲ್ಲಿ ರೈತರು ವಿವಿಧ ಬೇಡಿಕೆಗಳ ಮೇಲೆ ರಾಜ್ಯ ರಾಜಧಾನಿಗೆ ಹೋಗುವುದನ್ನು ನಿಲ್ಲಿಸಿದ ಬಳಿಕ ಬುಧವಾರವೂ ರೈತರು ಪ್ರತಿಭಟನೆಯನ್ನು ಮುಂದುವರೆಸಿದರು.

ಆದರೆ ಮುಖ್ಯಮಂತ್ರಿ ಮನ್ ಪ್ರತಿಭಟನೆಯನ್ನು ಅನಪೇಕ್ಷಿತ ಎಂದು ಕರೆದರು. ರೈತರು ಕೇವಲ ಘೋಷಣೆಗಳನ್ನು ನಿಲ್ಲಿಸಬೇಕು ಮತ್ತು ಪಂಜಾಬ್‌ನಲ್ಲಿ ಕ್ಷೀಣಿಸುತ್ತಿರುವ ನೀರಿನ ಮಟ್ಟವನ್ನು ಪರಿಶೀಲಿಸಲು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಒತ್ತಾಯಿಸಿದರು.

ನಾನು ಆ ರೈತರನ್ನು ಭೇಟಿಯಾಗಲು ಸಿದ್ಧನಿದ್ದೇನೆ, ಆದರೆ ಮುರ್ದಾಬಾದ್ ಎಂದು ಜಪಿಸುವುದು ಮಾರ್ಗವಲ್ಲ. ಎಲ್ಲವೂ ಮುರ್ದಾಬಾದ್ ಆಗಲು ಸಾಧ್ಯವಿಲ್ಲ. ನಾನೊಬ್ಬ ರೈತನ ಮಗ. ಬಾಸ್ಮತಿ ಮತ್ತು ಮೂಂಗ್ ದಾಲ್ ಬೆಳೆ ಬಗ್ಗೆ ನನಗೂ ತಿಳಿದಿದೆ ಎಂದು ಮಾನ್ ಹೇಳಿದರು.

English summary
Panjab Congress leader Navjot Singh Sidhu Sidhu suggestions to Punjab cm Bhagwant Mann amid protests by farmers in the state over various demands including bonus on wheat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X