ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆಗೆ ದಶಸೂತ್ರ ತಯಾರಿಸಿದ ಆಮ್ ಆದ್ಮಿ ಪಕ್ಷ

|
Google Oneindia Kannada News

ಮೊಹಾಲಿ, ಜನವರಿ 12: ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷ ಪಂಜಾಬ್ ಅಭಿವೃದ್ಧಿಗೆ 10 ಸೂತ್ರಗಳನ್ನು ಸಿದ್ಧಪಡಿಸಿದೆ. ಉದ್ಯೋಗ ಸೃಷ್ಟಿಯೇ ಪ್ರಮುಖವಾಗಿರಲಿದ್ದು, ಜತೆಗೆ 10 ಭರವಸೆಗಳನ್ನು ನೀಡಿದ್ದು, ಮಾದರಿ ಪಂಜಾಬ್‌ ನಿರ್ಮಾಣ ಮಾಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಹೇಳಿದ್ದಾರೆ.

ಮೊಹಾಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಅಂಶಗಳ ಯೋಜನೆಗಳ ಮೂಲಕ ಪಂಜಾಬ್ ಅನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಪಂಜಾಬ್ ಅನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸಿಎಂ ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ: ಸಿಧುಪಂಜಾಬ್‌ನಲ್ಲಿ ಸಿಎಂ ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ: ಸಿಧು

ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್‌ನಲ್ಲಿ ಆಳವಾಗಿ ಬೇರೂರಿರುವ ಡ್ರಗ್‌ ಮಾಫಿಯಾವನ್ನು ತೊಡೆದು ಹಾಕುತ್ತೇವೆ ಎಂದು ಹೇಳಿರುವ ಕೇಜ್ರಿವಾಲ್‌ ಪಂಜಾಬ್‌ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.

Punjab Elections: AAP Announces 10-Point Agenda, To Focus On Jobs

'ಪಂಜಾಬ್‌ನಿಂದ ಉದ್ಯೋಗಕ್ಕಾಗಿ ಕೆನಡಾಗೆ ಹೋಗಿರುವ ಯುವಕರು ಮುಂದಿನ ಐದು ವರ್ಷದಲ್ಲಿ ಮತ್ತೆ ಪಂಜಾಬ್‌ಗೆ ಮರಳಬೇಕು. ಈ ರೀತಿಯಾದ ಸಮೃದ್ಧ ಪಂಜಾಬ್‌ ನಿರ್ಮಾಣ ಮಾಡಲಿದ್ದೇವೆ' ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಕೇಜ್ರಿವಾಲ್‌ ಅವರ 10 ಅಂಶಗಳ ಪಂಜಾಬ್‌ ಮಾಡೆಲ್‌ನಲ್ಲಿ ಉದ್ಯೋಗದ ಭರವಸೆ, ಮಹಿಳೆಯರಿಗೆ 1000 ರೂ. ಮಾಸಾಶನ ಹಾಗೂ ರೈತರ ಸಮಸ್ಯೆಗೆ ಮುಕ್ತಿ ಮುಂತಾದ ಭರವಸೆಗಳಿವೆ.

 ಎಬಿಪಿ-ಸಿ ವೋಟರ್ ಸಮೀಕ್ಷೆ: ಪಂಜಾ‌ಬ್‌ನಲ್ಲಿ ಅಕಾಲಿದಳ ಕಿಂಗ್‌ಮೇಕರ್‌ ಎಬಿಪಿ-ಸಿ ವೋಟರ್ ಸಮೀಕ್ಷೆ: ಪಂಜಾ‌ಬ್‌ನಲ್ಲಿ ಅಕಾಲಿದಳ ಕಿಂಗ್‌ಮೇಕರ್‌

ರಾಜ್ಯಾದ್ಯಂತ 16,000 ಮೊಹಲ್ಲಾ ಕ್ಲೀನಿಕ್‌ ಸ್ಥಾಪನೆ ಮಾಡಿ, ಪ್ರತೀ ಪಂಜಾಬಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. 24 X 7 ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಫೆಬ್ರವರಿ 14 ಕ್ಕೆ ಮತದಾನ ನಡೆಯಲಿದೆ. ಮಾರ್ಚ್ 20 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಗಾಗಿ ಪಕ್ಷ ಶ್ರಮಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಇನ್ನು ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಬಗ್ಗೆ ಪ್ರಸ್ತಾಪಿಸಿ, ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿಗೆ ಮಾತ್ರವಲ್ಲ ಪಂಜಾಬ್‌ನ ಪ್ರತಿಯೊಬ್ಬರ ರಕ್ಷಣೆ ಬಗ್ಗೆಯೂ ನಾವು ಖಾತರಿ ಪಡಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಮುಂದಿನ ವಾರ ಆಮ್ ಆದ್ಮೀ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ನಾವು ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಹಾಗೆಯೇ ಪಂಜಾಬ್‌ನಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಕಾನೂಸು ಸುವ್ಯವಸ್ಥೆ ಕುಸಿದಿದೆ. ಬಾಂಬ್‌ ಬ್ಲಾಸ್ಟ್‌, ಪ್ರಧಾನ ಮಂತ್ರಿಗಳ ಭದ್ರಲಾ ಲೋಪ ಉಂಟಾಗಿದೆ. ಎಎಪಿ ಪ್ರತಿಯೊಬ್ಬರ ಸುರಕ್ಷತೆ ಬಗ್ಗೆ ಗಮನ ಕೊಡಲಿದೆ ಎಂದು ಹೇಳಿದರು.

ಪಂಜಾಬ್ ಅಭಿವೃದ್ಧಿಗಾಗಿ 10 ಅಂಶಗಳ ಕಾರ್ಯಕ್ರಮದ ಪಟ್ಟಿ ಬಿಡುಗಡೆ ಮಾಡಿದ ಕೇಜ್ರಿವಾಲ್, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ನಿಜಕ್ಕೂ ಆಶಾದಾಯಕವಾಗಿವೆ ಎಂದು ಹೇಳಿದರು.

ಪ್ರಮುಖವಾಗಿ ಪಂಜಾಬ್ ಯುವ ಸಮುದಾಯ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ಈ ವೇಳೆ ತಿಳಿಸಿದರು.

10 ಅಂಶಗಳೇನು?

* ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದು
* ಶೈಕ್ಷಣಿಕ ಕ್ರಾಂತಿ
* ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ
* 24x7 ಉಚಿತ ವಿದ್ಯುತ್‌
* ಮಹಿಳೆಯರಿಗೆ 1000 ರೂ. ಮಾಸಾಶನ
* ಎಲ್ಲರಿಗೂ ಉದ್ಯೋಗ
* ರೈತರ ಸಮಸ್ಯೆಗಳಿಗೆ ಪರಿಹಾರ
* ಉದ್ಯಮ ಸ್ನೇಹಿ ಸರ್ಕಾರ.
* ಡ್ರಗ್‌ ಮಾಫಿಯಾಗೆ ಅಂತ್ಯ ಹಾಡುವುದು
* ಶಾಂತಿಯುತ ಪಂಜಾಬ್‌

Recommended Video

Virat Virat Kohli ಶ್ರೇಷ್ಠ ಆಟಗಾರ ಆಗಿದ್ದರೂ ಈ ವಿಚಾರದಲ್ಲಿ ಹಿಂದೆ | Oneindia Kannada

ರಾಜ್ಯವನ್ನು ಬಹುವಾಗಿ ಕಾಡುತ್ತಿರುವ ಮಾದಕವಸ್ತು ಕಳ್ಳಸಾಗಾಣಿಕೆ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಹೇರಲಾಗುವುದು ಎಂದು ಕೇಜ್ರಿವಾಲ್ ಪಂಜಾಬ್ ಮತದಾರರಿಗೆ ಭರವಸೆ ನೀಡಿದ್ದಾರೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ಒಂದೇ ಹಂತದ ಮತದಾನ ನಡೆಯಲಿದೆ. ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.

English summary
Aam Aadmi Party national convener and Delhi chief minister Arvind Kejriwal on Wednesday presented the AAP’s Punjab Model, comprising a 10-point agenda that focuses on generating employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X