ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ: ಕಾಂಗ್ರೆಸ್‌ಗೆ ಕ್ಯಾಪ್ಟನ್, ಹಿಂದೂ ಮತ ಕ್ರೋಢೀಕರಣದ್ದೇ ಚಿಂತೆ

|
Google Oneindia Kannada News

ಚಂಡೀಗಢ, ಅಕ್ಟೋಬರ್ 25: ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಯಿಂದ ದೂರವಾಗಿ ಬಿಜೆಪಿ ಸಖ್ಯ ಬೆಳೆಸುತ್ತಿರುವುದು ಈಗ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಅಮರಿಂದರ್ ಸಿಂಗ್ ಹೊಸ ರಾಜಕೀಯ ಪಕ್ಷ ಆರಂಭಿಸುತ್ತಾರೆ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎನ್ನುವುದು ಈಗಾಗಲೇ ಖಾತ್ರಿಯಾಗಿದೆ.
ಆರಂಭಿಕವಾಗಿ ಕಾಂಗ್ರೆಸ್ ಅಷ್ಟು ಗಂಭೀರವಾಗಿ ಪರಿಗಣಿಸದಿದ್ದರೂ ಕ್ಯಾಪ್ಟರ್ ಹಾಗೂ ಬಿಜೆಪಿ ಸಖ್ಯವು ಈಗ ಹೊಸ ತಲೆನೋವಿಗೆ ಕಾರಣವಾಗಿದೆ.

ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಹಿಂದೂ ಮತಗಳನ್ನು ಅಮರಿಂದರ್ ಹಾಗೂ ಬಿಜೆಪಿ ಸಂಪೂರ್ಣವಾಗಿ ಒಡೆಯಲಿದೆ ಎನ್ನುವ ಚರ್ಚೆಗಳು ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿದೆ.

Punjab Election: Congress Convinced Captain Amarinder Trying To Wean Away Hindu Voters

ಇದಕ್ಕೆ ಪೂರಕವೆಂಬಂತೆ ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ, ಇನ್ನೊಂದೆಡೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ನಡೆಯು ಕ್ಯಾಪ್ಟನ್‌ಗೆ ನೆರವಾಗುವ ರೀತಿಯಲ್ಲೇ ಇದೆ ಎಂದು ಚರ್ಚೆಗಳು ನಡೆಯುತ್ತಿದೆ.

ಅಮರಿಂದರ್ ಸಿಂಗ್ ಪಂಜಾಬ್‌ನ ನಗರ ಪ್ರದೇಶಗಳಲ್ಲಿ ಬಹಳ ಖ್ಯಾತಿಯನ್ನು ಹೊಂದಿದ್ದಾರೆ, ಈಗ ಬಿಜೆಪಿ ಜತೆ ಸಖ್ಯ ಹಾಗೂ ನವಜೋತ್‌ಸಿಂಗ್ ಸಿಧು ಹೇಳಿಕೆ ಅಮೆರಿಂದರ್ ಸಿಂಗ್ ರಾಜಕೀಯ ಭವಿಷ್ಯಕ್ಕೆ ಇನ್ನಷ್ಟು ನೆರವಾಗಲಿದೆ ಎನ್ನುವ ಚರ್ಚೆಗಳು ನಡೆಯುತ್ತಿದೆ.

ವಿಶೇಷವೇನೆಂದರೆ ಇತ್ತೀಚೆಗೆ ಕೇಂದ್ರ ಸರ್ಕಾರವು ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿಯನ್ನು ಬದಲಾಯಿಸಿತ್ತು ಇದಕ್ಕೆ ಕಾಂಗ್ರೆಸ್ ವಿರೋಧಿಸಿದ್ದವು, ಆದರೆ ಬಿಜೆಪಿ ಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ನಡೆಯನ್ನು ಸ್ವಾಗತಿಸಿದ್ದರು.

ಈ ನಡೆಯು ಪಾಕಿಸ್ತಾನಿ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಗಲಿದೆ ಎನ್ನುವುದು ಸಾಕಷ್ಟು ಜನರ ವಾದವಾಗಿದೆ. ಇದಕ್ಕೆ ಪೂರಕವೆನ್ನುವಂತೆ ಕ್ಯಾಪ್ಟನ್ ಕೂಡ ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ. ಇದು ಪಾಕಿಸ್ತಾನ ವಿರುದ್ಧದ ಸ್ಪಷ್ಟ ನೀತಿಗಾಗಿ ಪಂಜಾಬ್‌ ಹಿಂದೂಗಳು ಬಿಜೆಪಿ ಹಿಂದೆ ನಿಲ್ಲಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಕೇಳಿಬರುತ್ತಿದೆ.

ನವಜೋತ್‌ಸಿಂಗ್ ಸಿಧು ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಜನರಲ್ ಅವರನ್ನು ಹೋಗಿ ಅಪ್ಪಿಕೊಂಡಿದ್ದು ಹಾಗೂ ವಿಚಾರಗಳ ಮೇಲಿರುವ ಮೃಧು ಧೋರಣೆಯ್ನನೇ ಅಮರಿಂದರ್ ಸಿಂಗ್ ಹಾಗೂ ಬಿಜೆಪಿ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇದು ಈಗ ಕಾಂಗ್ರೆಸ್‌ಗೆ ಇದು ಚಿಂತೆಯಾಗಿ ಪರಿಣಮಿಸಿದೆ, ನಗರ ಪ್ರದೇಶಗಳಲ್ಲಿ ಶೇ.38ರಷ್ಟು ಹಿಂದೂಗಳ ಮತಗಳಿವೆ, ಈ ಮತಗಳೇನಾದರೂ ಅಮರಿಂದರ್ ಸಿಂಗ್ ಹಾಗೂ ಬಿಜೆಪಿ ಒಡೆದರೆ ಅವರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದರೂ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಲು ಸಾಧ್ಯವಾಗಬಹುದು.

ರೈತ ಹೋರಾಟವನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸಿನಲ್ಲಿದ್ದ ಕಾಂಗ್ರೆಸ್‌ಗೆ ಈಗ ಕ್ಯಾಪ್ಟನ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ| ಅಮರಿಂದರ್‌ ಸಿಂಗ್‌ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಬೆನ್ನಲ್ಲೇ, 'ಅವರೊಂದಿಗೆ ಮೈತ್ರಿ ಮಾಡಿಕೊಳ್ಳು ಸಿದ್ಧ' ಎಂದು ಬಿಜೆಪಿ ಹೇಳಿದೆ ಹಾಗೂ ಅವರನ್ನು 'ದೇಶಭಕ್ತ' ಎಂದು ಹೊಗಳಿದೆ.

ಕ್ಯಾಪ್ಟನ್‌ ಘೋಷಣೆ ಬಗ್ಗೆ ಬುಧವಾರ ಮಾತನಾಡಿದ ಪಂಜಾಬ್‌ ಬಿಜೆಪಿ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌, 'ಅಮರೀಂದರ್‌ ಸಿಂಗ್‌ ದೇಶಭಕ್ತರಾಗಿದ್ದು, ದೇಶ ಮೊದಲು ಎನ್ನುವ ಎಲ್ಲರನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿದೆ' ಎಂದರು.

ಇನ್ನು ರೈತರ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸಿದರೆ ಬಿಜೆಪಿ ಜೊತೆ ಸೇರುವುದಾಗಿ ಅಮರೀಂದರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್‌, 'ಅವರು ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಳಿದ್ದಾರೆ. ಇದಕ್ಕಾಗಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು. ಅಮರಿಂದರ್‌ ಮುಖ್ಯ ಮಂತ್ರಿಯಾಗುವ ಮೊದಲು ಸೈನಿಕರಾಗಿದ್ದರು ಹಾಗಾಗಿ ಅವರು ದೇಶ ಮೊದಲು ಎನ್ನುವ ಭಾವನೆಯನ್ನು ಹೊಂದಿದ್ದಾರೆ. ಬಿಜೆಪಿಯು ಸಹ ದೇಶ ಮೊದಲು ಎನ್ನುವ ತತ್ವದ ಮೇಲೆ ಕೆಲಸ ಮಾಡುತ್ತದೆ. ಹಾಗಾಗಿ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ' ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಗರಂ: ಪಂಜಾಬ್‌ ಕಾಂಗ್ರೆಸ್‌ ಪ್ರಭಾರಿ ಹರೀಶ್‌ ರಾವತ್‌ ಪ್ರತಿಕ್ರಿಯಿಸಿ, 'ಅಮರೀಂದರ್‌ ಅವರದ್ದು ಅತಿ ಕೆಟ್ಟನಿರ್ಧಾರ' ಎಂದು ಟೀಕಿಸಿದ್ದಾರೆ. 'ಅವರ ಈ ನಿರ್ಧಾರದಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಮತದಾರರು ಚೆನ್ನಿ ಸರ್ಕಾರದ ಕೆಲಸವನ್ನು ಗಮನಿಸಿ ಮತ ಹಾಕಲಿದ್ದಾರೆ. ಉತ್ತಮ ಸ್ಥಾನದಲ್ಲಿದ್ದ ಅಮರಿಂದರ್‌ ಅವರ ಈ ನಿರ್ಧಾರ ಅತ್ಯಂತ ಕೆಳಮಟ್ಟದ್ದು' ಎಂದು ಹೇಳಿದ್ದಾರೆ.

'ಅಮರಿಂದರ್‌ ಅವರ ಈ ನಿರ್ಧಾರ ಅವರ ರಾಜಕೀಯ ಜೀವನವನ್ನು ನಾಶ ಮಾಡುತ್ತದೆ. ಒತ್ತಡಕ್ಕೆ ಸಿಲುಕಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಹೊಸ ಪಕ್ಷದಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ' ಎಂದು ಪಂಜಾಬ್‌ ಉಪ ಮುಖ್ಯಮಂತ್ರಿ ಸುಖ್‌ಜಿಂದರ್‌ ಸಿಂಗ್‌ ರಂಧಾವಾ ಹೇಳಿದ್ದಾರೆ.

ಕ್ಯಾ. ಅಮರಿಂದರ್ ಪಂಜಾಬ್‌ ವಿಕಾಸ್‌ ಪಕ್ಷ: ಕಾಂಗ್ರೆಸ್‌ಗೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿರುವ ಪಂಜಾಬ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ಸಿಂಗ್‌, ಶೀಘ್ರವೇ ಹೊಸ ಪಕ್ಷವೊಂದನ್ನು ರಚಿಸಲಿದ್ದರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಪಕ್ಷದ ಹೆಸರು ಪಂಜಾಬ್‌ ವಿಕಾಸ್‌ ಪಕ್ಷ ಎಂದಾಗಿರಲಿದೆ ಎನ್ನಲಾಗಿದೆ.

ಅಮರೀಂದರ್‌ ಸಿಂಗ್‌, ಬಿಜೆಪಿ(BJP) ಸೇರುವ ವದಂತಿ ಇತ್ತಾದರೂ ಅದನ್ನು ಅವರೇ ಸ್ಪಷ್ಟವಾಗಿ ತಳ್ಳಿಹಾಕಿದ್ದರು. ತಕ್ಷಣಕ್ಕೆ ಬಿಜೆಪಿ ಸೇರುವುದು ತಮ್ಮ ಮೂಲ ಉದ್ದೇಶವನ್ನಾ ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಹೊಸ ಪಕ್ಷ ಸ್ಥಾಪನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಸಿಂಗ್‌ ಬಂದಿದ್ದಾರೆ ಎನ್ನಲಾಗಿದೆ.

English summary
Former Punjab chief minister Captain Amarinder Singh’s announcement to float a new party and ally with the BJP has set tongues wagging about his intentions ahead of the 2022 assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X