ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣೆ: ಪ್ರಚಾರ, ಪ್ರಣಾಳಿಕೆ ಸಮಿತಿ ರಚಿಸಿದ ಸೋನಿಯಾ ಗಾಂಧಿ

|
Google Oneindia Kannada News

ನವದೆಹಲಿ, ಜನವರಿ 14: ಫೆಬ್ರವರಿ 14ರಂದು ಒಂದೇ ಹಂತದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಪ್ರಚಾರ ಹಾಗೂ ಪ್ರಣಾಳಿಕೆ ಸಮಿತಿಯನ್ನು ಕಾಂಗ್ರೆಸ್ ಪಕ್ಷ ರಚಿಸಿದ್ದು, ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ.

ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ನೇತೃತ್ವದ ಪ್ರಚಾರ ಸಮಿತಿ ಮತ್ತು ಸಂಸದ ಪರ್ತಪ್ ಸಿಂಗ್ ಬಾಜ್ವಾ ನೇತೃತ್ವದ ಪ್ರಣಾಳಿಕೆ ಸಮಿತಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದಾರೆ.

 ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು?; ಸಿಧು 'ಪಂಜಾಬ್ ಮಾದರಿ’ಯಲ್ಲಿ ಸಿಎಂ ಚನ್ನಿ ನಾಪತ್ತೆ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು?; ಸಿಧು 'ಪಂಜಾಬ್ ಮಾದರಿ’ಯಲ್ಲಿ ಸಿಎಂ ಚನ್ನಿ ನಾಪತ್ತೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, 20 ಸದಸ್ಯರ ಪ್ರಣಾಳಿಕೆ ಸಮಿತಿಯನ್ನು ರಚಿಸಿದ್ದು, ಸಂಸದ ಪರ್ತಪ್ ಸಿಂಗ್ ಬಾಜ್ವಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ, ಮನ್‌ಪ್ರೀತ್ ಬಾದಲ್ ಸಹ-ಅಧ್ಯಕ್ಷರಾಗಿ ಮತ್ತು ಪಕ್ಷದ ಸಂಸದ ಅಮರ್ ಸಿಂಗ್ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.

Punjab Election 2022: Aicc President Sonia Gandhi Formed Campaign and Manifesto Committee

ಪಂಜಾಬ್ ಉಪ ಮುಖ್ಯಮಂತ್ರಿ ಒಪಿ ಸೋನಿ, ರಾಣಾ ಗುರ್ಜಿತ್, ಜೈವೀರ್ ಶೆರ್ಗಿಲ್, ಜೆಎಸ್ ಧಲಿವಾಲ್, ಅನಿಲ್ ವಿಜ್, ಕೆ.ಕೆ. ಅಗರ್ವಾಲ್, ಮಂಜು ಬನ್ಸಾಲ್, ವಿಜಯ್ ಕಲ್ರಾ ಮತ್ತು ಸುರ್ಜಿತ್ ಸ್ವೈಚ್ ಅವರು ಪ್ರಣಾಳಿಕೆ ಸಮಿತಿಯಲ್ಲಿ ಸೇರಿದ್ದಾರೆ.

ಇದೇ ವೇಳೆ ಸೋನಿಯಾ ಗಾಂಧಿ ಅವರು ಸುನಿಲ್ ಜಾಖರ್ ನೇತೃತ್ವದ 25 ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಅಮರ್‌ಪ್ರೀತ್ ಸಿಂಗ್ ಲಾಲಿ ಸಹ-ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಸಂಸದ ರವನೀತ್ ಬಿಟ್ಟು ಸಂಚಾಲಕರಾಗಿದ್ದಾರೆ.

ಪ್ರಚಾರ ಸಮಿತಿಯಲ್ಲಿ ವಿಜಯ್ ಇಂದರ್ ಸಿಂಗ್ಲಾ, ಭರತ್ ಭೂಷಣ್ ಅಶು, ಅಮರಿಂದರ್ ರಾಜಾ ವಾರಿಂಗ್, ಪರ್ಗತ್ ಸಿಂಗ್, ಹರ್ದಿಪ್ ಕಿಂಗ್ರಾ, ಇಮ್ಯಾನ್ಯುಲ್ ಮಸಿಹ್ ಮತ್ತು ಚರಣ್ ಸಿಂಗ್ ಇದ್ದಾರೆ.

Punjab Election 2022: Aicc President Sonia Gandhi Formed Campaign and Manifesto Committee

ಇನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರು, ಪಂಜಾಬ್‌ನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳು ಮತ್ತು ರಾಜ್ಯ ಕಾಂಗ್ರೆಸ್‌ನ ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಎರಡೂ ಸಮಿತಿಗಳಿಗೆ ಶಾಶ್ವತ ಸದಸ್ಯರಾಗಿರುತ್ತಾರೆ.

ಫೆಬ್ರವರಿ 14ರಂದು ಮತದಾನ
ಪಂಜಾಬ್ ಸೇರಿದಂತೆ ಗೋವಾ, ಮಣಿಪುರ್, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ.

ಪಂಜಾಬ್‌ನಲ್ಲಿ ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

English summary
The Congress has formed a Campaign and manifesto committee for the Punjab assembly elections, which will be held on February 14 at a single stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X