ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಮೇಲಿನ ಹಲ್ಲೆ ಖಂಡಿಸಿ, ತನ್ನ ಹೆಸರು ಬದಲಿಸಿದ ಪಂಜಾಬ್ ಡಿಜಿಪಿ

|
Google Oneindia Kannada News

ಚಂಡಿಗಢ, ಏಪ್ರಿಲ್ 27: ಕೊರೊನಾ ವೈರಸ್‌ ವಿರುದ್ಧ ಹೋರಾಟದಲ್ಲಿ ದೇಶದ ಹಲವು ಕಡೆ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಪಂಜಾಬ್‌ನ ಪಟಿಯಾಲ ಮಾರುಕಟ್ಟೆ ಬಳಿ ಲಾಕ್‌ಡೌನ್‌ ವೇಳೆ ಕಾರ್ಯನಿರತವಾಗಿದ್ದ ಎಎಸ್ಐ ಅವರ ಕೈ ಕತ್ತರಿಸಿದ ಘಟನೆ ನಡೆದಿತ್ತು.

ಇದೀಗ, ಈ ಘಟನೆ ಖಂಡಿಸಿ ಪಂಜಾಬ್ ಡಿಜಿಪಿ ತನ್ನ ಬ್ಯಾಡ್ಜ್ ಮೇಲೆ ಹೆಸರು ಬದಲಿಸಿಕೊಂಡಿದ್ದಾರೆ. ಪಂಜಾಬ್ ಡಿಜಿಪಿ ದಿನಕರ್ ಗುಪ್ತ, ತನ್ನ ಬ್ಯಾಡ್ಜ್ ಮೇಲೆ ಹಲ್ಲೆಗೊಳಗಾದ ಎಎಸ್ಐ ಹರ್ಜಿತ್ ಸಿಂಗ್ ಹೆಸರು ಹಾಕಿಕೊಂಡಿದ್ದಾರೆ.

ಲಾಕ್‌ಡೌನ್‌ ಕರ್ತವ್ಯದಲ್ಲಿ ಹಲ್ಲೆಗೊಳಗಾಗಿದ್ದ ಪಂಜಾಬ್‌ ಪೊಲೀಸ್‌ಗೆ ಬಡ್ತಿಲಾಕ್‌ಡೌನ್‌ ಕರ್ತವ್ಯದಲ್ಲಿ ಹಲ್ಲೆಗೊಳಗಾಗಿದ್ದ ಪಂಜಾಬ್‌ ಪೊಲೀಸ್‌ಗೆ ಬಡ್ತಿ

''ಪೊಲೀಸ್ ಸಿಬ್ಬಂದಿ ಮತ್ತು ಇತರೆ ಕೊರೊನಾ ವಾರಿಯರ್ಸ್ ಮೇಲೆ ನಡೆದ ಹಲ್ಲೆಗಳ ವಿರುದ್ಧದ ಸಂಕೇತವಾಗಿ ಎಎಸ್ಐ ಹರ್ಜಿತ್ ಸಿಂಗ್ ಅವರ ಹೆಸರು ಹಾಕಿಕೊಂಡಿದ್ದೇನೆ. ನಾನು ಹರ್ಜಿತ್ ಸಿಂಗ್ ಬೆಂಬಲಿಸುತ್ತಿದ್ದೇನೆ. ಇಂತಹ ಘಟನೆಗಳು ನಡೆಯಬಾರದು'' ಎಂದು ಡಿಜಿಪಿ ಹೇಳಿದ್ದಾರೆ.

ಘಟನೆಯ ವಿವರ

ಏಪ್ರಿಲ್ 12 ರಂದು ಪಂಜಾಬಿನ ಪಟಿಯಾಲ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಕರ್ಫ್ಯೂ ಪಾಸ್ ಪರಿಶೀಲಿಸುತ್ತಿದ್ದ ಸಹಾಯಕ ಸನ್ ಇನ್ಸ್ ಪೆಕ್ಟರ್(ಎಎಸ್ಐ) ಹರ್ಜೀತ್ ಸಿಂಗ್ ಅವರು ನಿಹಾಂಗ್ ಗಳನ್ನು ಪಾಸ್ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ನಿಹಾಂಗ್ ಗುಂಪು ತಮ್ಮ ಬಳಿ ಇದ್ದ ಕತ್ತಿಯಿಂದ ಇನ್ಸ್ ಪೆಕ್ಟರ್ ಕೈ ಕತ್ತರಿಸಿದ್ದರು. ಬಳಿಕ, ಅವರನ್ನು ಬಂಧಿಸಿ ಕೇಸ್ ದಾಖಲಿಸಲಾಗಿತ್ತು.

Punjab DGP Changes His Name To Support ASI Harjeeet Singh

ಇನ್ನು ಲಾಕ್‌ಡೌನ್‌ ವೇಳೆ ಧೈರ್ಯದಿಂದ ಕಾರ್ಯನಿರ್ವಹಿಸಿದ್ದನ್ನು ಗುರುತಿಸಿ ಅಸಿಸ್ಟಂಟ್ ಸಬ್‌ ಇನ್ಸ್ ಪೆಕ್ಟರ್ ಸ್ಥಾನದಿಂದ ಸಬ್ ಇನ್ಸ್ ಪೆಕ್ಟರ್ ಸ್ಥಾನಕ್ಕೆ ಬಡ್ತಿ ನೀಡಿ ಪಂಜಾಬ್‌ ಮುಖ್ಯಮಂತ್ರಿ ಕಚೇರಿ ಪ್ರಕಟ ಮಾಡಿತ್ತು.

English summary
Punjab DGP Dinkar Gupta changes his name on his badge to 'Harjeet Singh' for today, in support of ASI Harjeeet Singh whose hand was dismembered in an attack in Patiala on Apr12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X