ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನಮಲ್ಲ ನವಜೋತ್ ಸಿಧು ಡಿಮಾಂಡ್ ಗೆ ಕಾಂಗ್ರೆಸ್ ಬೇಸ್ತು!

|
Google Oneindia Kannada News

Recommended Video

ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಮತ | Oneindia Kannada

ಚಂಡೀಗಢ, ಜೂನ್ 20: ಪಂಜಾಬ್ ನಲ್ಲಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಮುಖ್ಯಮಂತ್ರಿಗಳ ಬಳಿ ಹೊಸ ಬೇಡಿಕೆಯನ್ನು ಇಟ್ಟಿರುವ ಸಿಧು, ಉಪಮುಖ್ಯಮಂತ್ರಿ ಪದವಿಯ ಜೊತೆಗೆ, ಇಂಧನ ಖಾತೆಯನ್ನೂ ನೀಡಬೇಕೆಂದು ಡಿಮಾಂಡ್ ಮಾಡಿದ್ದಾರೆ.

ಕ್ಯಾಪ್ಟನ್ ಅಮರಿಂದರ್ ವಿರುದ್ಧ ತಿರುಗಿಬಿದ್ದಿದ್ದ ನವಜೋತ್ ಸಿಂಗ್ ಸಿಧುಗೆ ಹಿಂಬಡ್ತಿಕ್ಯಾಪ್ಟನ್ ಅಮರಿಂದರ್ ವಿರುದ್ಧ ತಿರುಗಿಬಿದ್ದಿದ್ದ ನವಜೋತ್ ಸಿಂಗ್ ಸಿಧುಗೆ ಹಿಂಬಡ್ತಿ

ಕ್ಯಾಪ್ಟನ್ ಮತ್ತು ಸಿಧು ನಡುವಿನ ಭಿನ್ನಮತ ಶಮನಗೊಳಿಸಲು, ಸಚಿವ ಸ್ಥಾನ ಕೊಡುವುದಾಗಿ ಸಿಧುಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದರು.

Punjab Congress crisis: Navjot Singh Sidhu demands DCM and Power Ministry

ಸಿಕ್ಕಿದ್ದೇ ಚಾನ್ಸ್ ಎಂದು ಉಪಮುಖ್ಯಮಂತ್ರಿ ಹುದ್ದೆಗೆ ಡಿಮಾಂಡ್ ಮಾಡಿರುವ ಸಿಧುಗೆ ಆ ಹುದ್ದೆ ಕೊಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಜೊತೆಗೆ, ಇಂಧನ ಖಾತೆಯನ್ನೂ ನೀಡುವುದಾಗಿ ರಾಹುಲ್ ಗಾಂಧಿ, ಸಿಧುಗೆ ಮಾತು ಕೊಟ್ಟಿದ್ದರು. ಈಗ, ಸಚಿವ ಸ್ಥಾನ ಸಿಕ್ಕರೆ ಮಾತ್ರ, ಅಧ್ಯಕ್ಷ ಹುದ್ದೆಯನ್ನು ಒಪ್ಪಿಕೊಳ್ಳುವುದಾಗಿ ಸಿಧು ಹೇಳಿದ್ದಾರೆ.

ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ನೀಡಿದರೇ ಸಿಧು?ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ನೀಡಿದರೇ ಸಿಧು?

ಪಂಜಾಬ್ ಘಟಕದ ಅಧ್ಯಕ್ಷರಾದ ಸುನೀಲ್ ಜಾಖರ್ ಆ ಹುದ್ದೆಗೆ ರಾಜೀನಾಮೆ ನೀಡಿದ ಕೂಡಲೇ, ಸಿಧು ಅಧ್ಯಕ್ಷ ಹುದ್ದೆಯ ಡಿಮಾಂಡ್ ಶುರುಮಾಡಿಕೊಂಡಿದ್ದಾರೆ.

ಸುನೀಲ್, ಕಳೆದ ಚುನಾವಣೆಯಲ್ಲಿ ಗುರುದಾಸಪುರ ಕ್ಷೇತ್ರದಲ್ಲಿ ಬಿಜೆಪಿಯ ಸನ್ನಿ ಡಿಯೋಲ್ ವಿರುದ್ದ ಸೋತ ನಂತರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎಐಸಿಸಿಯಲ್ಲಿ ಆಯಕಟ್ಟಿನ ಹುದ್ದೆ ನೀಡುವುದಾಗಿ ರಾಹುಲ್ ನೀಡಿದ್ದ ಆಫರ್ ಗೆ ಸಿಧು ನೋ ಎಂದಿದ್ದರು.

English summary
The rift in Punjab Congress continues: Navjot Singh Sidhu demands DCM and Power Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X