ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಸಿಧು, ಸಿಎಂ ಚನ್ನಿ ಎಲ್ಲೆಲ್ಲಿ ಸ್ಪರ್ಧೆ?

|
Google Oneindia Kannada News

ಚಂಡೀಗಢ, ಜನವರಿ 15: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 86 ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆ ಮಾಡಿದೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದರೆ, ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಇನ್ನು ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಡೇರಾ ಬಾಬಾ ನಾನಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ರಾಜ್ಯ ಸಾರಿಗೆ ಸಚಿವ ರಾಜಾ ಅಮರಿಂದರ್ ವಾರಿಂಗ್ ಅವರು ಗಿಡ್ದರ್‌ಬಾಹಾದಿಂದ ಸ್ಪರ್ಧಿಸಿದ್ದಾರೆ.

ಮೊಗಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರಿಗೆ ಟಿಕೆಟ್ ನೀಡಲಾಗಿದೆ. ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರನ್ನು ಮಾನ್ಸಾದಿಂದ ಕಣಕ್ಕಿಳಿಸಲಾಗಿದೆ.

Punjab Congress candidate list: CM Channi to Contest from Chamkaur Sahib, Navjot Sidhu Contest from Amritsar East

ಮಜಿತಾ - ಜಗವಿಂದರ್ ಪಾಲ್ ಸಿಂಗ್ (ಜಗ್ಗ ಮಜಿತಾ)

ಅಮೃತಸರ ಪಶ್ಚಿಮ - ರಾಜ್ ಕುಮಾರ್ ವೆರ್ಕಾ

ಫತೇಘರ್ ಸಾಹಿಬ್ - ಕುಲ್ಜೀತ್ ನಗ್ರಾ

ಭಟಿಂಡಾ ಅರ್ಬನ್ - ಮನ್‌ಪ್ರೀತ್ ಸಿಂಗ್ ಬಾದಲ್

ಸಂಗ್ರೂರ್ - ವಿಜಯ್ ಇಂದರ್ ಸಿಂಗ್ಲಾ

ಫತೇಘರ್ ಚುರಿಯನ್ - ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ

ಘೋಷಿಸಲಾದ ಇತರ ಸ್ಥಾನಗಳ ಪೈಕಿ, ಮುಖ್ಯಮಂತ್ರಿ ತನ್ನ ಸಹೋದರನಿಗೆ ಬಯಸಿದ್ದ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಗುರುಪ್ರೀತ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ.

ಸಚಿವ ಬ್ರಹ್ಮ್ ಮೊಹಿಂದ್ರಾ ಅವರ ಪುತ್ರ ಮೋಹಿತ್ ಅವರು ಪಟಿಯಾಲ (ಗ್ರಾಮೀಣ) ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಕಾಂಗ್ರೆಸ್‌ ರಾಜ್ಯಸಭಾ ಸಂಸದ ಪ್ರತಾಪ್‌ ಸಿಂಗ್‌ ಬಾಜ್ವಾ ಅವರು ಗುರುದಾಸ್‌ಪುರದ ಖಾಡಿಯನ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಎಎಪಿಯಿಂದ ಕಣಕ್ಕಿಳಿದಿದ್ದ ರೂಪಿಂದರ್ ಕೌರ್ ಮಾಲೌಟ್ ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ.

ಕಳೆದ ತಿಂಗಳು ಬಿಜೆಪಿ ಸೇರಲು ತೊರೆದ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ನಂತರ ಕಾಂಗ್ರೆಸ್‌ಗೆ ಮರಳಿದರು. ಆದರೆ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಲಡ್ಡಿ ಶ್ರೀ ಹರಗೋಬಿಂದಪುರದ (ಮೀಸಲು ಸ್ಥಾನ) ಶಾಸಕರಾಗಿದ್ದು, ಇದೀಗ ಮನ್ದೀಪ್ ಸಿಂಗ್ ರಂಗರ್ ನಂಗಲ್ ಅವರಿಗೆ ಟಿಕೆಟ್ ನೀಡಲಾಗಿದೆ.

ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಸುಖಪಾಲ್ ಸಿಂಗ್ ಖೈರಾ ಅವರಿಗೆ ಭೋಲಾತ್ ಟಿಕೆಟ್ ನೀಡಲಾಗಿದೆ.

ಈಗಾಗಲೇ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಮತ್ತು ಎಎಪಿಯಿಂದ ಪ್ರಬಲ ಸವಾಲುಗಳನ್ನು ನಿರೀಕ್ಷಿಸಲಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ತಾನು ಸಂಪೂರ್ಣವಾಗಿ ಅಧಿಕಾರ ನಡೆಸುವ ಕೆಲವೇ ಕೆಲವು ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.

ಪಂಜಾಬ್‌ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

English summary
Punjab Assembly Election 2022: Punjab Congress President Navjot Singh Sidhu will contest from Amritsar East while state Chief Minister Charanjit Singh Channi Contest from Chamkaur Sahib.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X