ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ನ ಮುಖ್ಯಮಂತ್ರಿ ಪತ್ನಿ- ಸಂಸದೆ ಕೌರ್ ಗೆ ರು. 23 ಲಕ್ಷ ಸೈಬರ್ ವಂಚನೆ

|
Google Oneindia Kannada News

ಚಂಡೀಗಢ, ಆಗಸ್ಟ್ 8: ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಿಣೀತ್ ಕೌರ್ ಅವರೇ ಸೈಬರ್ ವಂಚನೆಗೆ ಪಿಗ್ಗಿ ಬಿದ್ದು, 23 ಲಕ್ಷ ರುಪಾಯಿ ಕಳೆದುಕೊಂಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಕರೆ ಮಾಡುತ್ತಿದ್ದೇನೆ ಎಂದು ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಹೀಗೆ ಲಕ್ಷಾಂತಾರ ರುಪಾಯಿ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಂದ ಹಾಗೆ ಪ್ರಿಣೀತ್ ಕೌರ್ ಅವರು ಪಟಿಯಾಲ ಕ್ಷೇತ್ರದ ಕಾಂಗ್ರೆಸ್ ನ ಸಂಸದೆ ಕೂಡ ಹೌದು. ಆದರೆ ಒಂದು ಸಮಾಧಾನಕರ ಸಂಗತಿ ಏನೆಂದರೆ, ವಂಚನೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜಾರ್ಖಂಡ್ ನ ರಾಂಚಿಯಿಂದ ಫೋನ್ ಕರೆ ಬಂದಿದ್ದನ್ನು ಪತ್ತೆ ಹಚ್ಚಿದ ಪಂಜಾಬ್ ನ ಪೊಲೀಸ್ ತಂಡವು ವಂಚಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೇಸ್ಬುಕ್ ನಲ್ಲಿ ಕಾರು ಮಾರೋದಾಗಿ ಹೇಳಿ ಪಂಗನಾಮ ಹಾಕಿ ಮಾಯವಾದಫೇಸ್ಬುಕ್ ನಲ್ಲಿ ಕಾರು ಮಾರೋದಾಗಿ ಹೇಳಿ ಪಂಗನಾಮ ಹಾಕಿ ಮಾಯವಾದ

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೌರ್ ಅವರು ತೆರಳಿದ್ದ ವೇಳೆ ಅವರಿಗೆ ಕರೆಯೊಂದು ಬಂದಿತ್ತು. ರಾಷ್ಟ್ರೀಕೃತ ಬ್ಯಾಂಕ್ ವೊಂದರ ಮ್ಯಾನೇಜರ್ ಎಂದು ತನ್ನನ್ನು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ, ನಿಮ್ಮ ವೇತನವನ್ನು ಡೆಪಾಸಿಟ್ ಮಾಡಬೇಕು. ಅದಕ್ಕಾಗಿ ಬ್ಯಾಂಕ್ ಖಾತೆಯ ಮಾಹಿತಿ ಬೇಕಾಗಿದೆ ಎಂದು ಕೇಳಿದ್ದಾನೆ.

Punjab CM Wife- MP Preneeth Kaur Cheated By Cyber Crime With Money Of 23 Lakh

ಅದೇ ವೇಳೆ ಸಂಸದೆ ಕೌರ್ ಅವರ ಬ್ಯಾಂಕ್ ಖಾತೆಯ ಸಂಖ್ಯೆ ಪಡೆದುಕೊಂಡಿದ್ದಾನೆ. ಜತೆಗೆ ಎಟಿಎಂನ ಪಿನ್, ಸಿವಿಸಿ ಸಂಖ್ಯೆ ಹಾಗೂ ಒಟಿಪಿಯನ್ನೂ ಪಡೆದುಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ನಂತರ ಎಸ್ಸೆಮ್ಮೆಸ್ ಮೂಲಕ ಸಂದೇಶ ಬಂದಿದೆ. ಕೌರ್ ಅವರ ಖಾತೆಯಿಂದ 23 ಲಕ್ಷ ರುಪಾಯಿ ಡೆಬಿಟ್ ಆಗಿದೆ ಎಂದು ಗೊತ್ತಾಗಿದೆ. ಆ ನಂತರ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಟಿಯಾಲದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮನ್ ದೀಪ್ ಸಿಂಗ್ ಸಂಧು ಬುಧವಾರ ಮಾತನಾಡಿ, ಪಂಜಾಬ್ ನ ಪೊಲೀಸರ ತಂಡ ಆರೋಪಿಯನ್ನು ಜಾರ್ಖಂಡ್ ನಲ್ಲಿ ಬಂಧಿಸಿದ್ದು, ಅಲ್ಲಿಂದ ಕರೆತರುತ್ತಿರುವುದಾಗಿ ಹೇಳಿದ್ದಾರೆ.

English summary
Punjab cm captain Amarinder Singh's wife- Patiala MP Preneeth Kaur cheated in cyber crime with 23 lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X