ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಯಾತ್ರಿಕರನ್ನು ಕಳುಹಿಸಿಕೊಡಿ: ಕೇಂದ್ರಕ್ಕೆ ಪಂಜಾಬ್ ಸಿಎಂ ಮನವಿ

|
Google Oneindia Kannada News

ಚಂಡೀಗಢ, ಏಪ್ರಿಲ್ 21: ಲಾಕ್‌ಡೌನ್‌ ಘೋಷಣೆ ಬಳಿಕ ಬೇರೆ ರಾಜ್ಯಗಳಿಗೆ ಅಥವಾ ಬೇರೆ ಊರುಗಳಿಗೆ ಹೋಗಿದ್ದವರು ಅಲ್ಲೆ ಸಿಕ್ಕಿಬಿದ್ದಿದ್ದಾರೆ. ಸ್ವ-ಗ್ರಾಮಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಅಲ್ಲೆ ಉಳಿದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Recommended Video

Tribes life in Quarantine Days | ಲಾಕ್ ಡೌನ್ ನಿಂದ ಬಳಲುತ್ತಿದ್ದಾರೆ ಬುಡಕಟ್ಟು ಜನ | Oneindia Kannada

ಈ ನಡುವೆ ಮಹಾರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಿಕರನ್ನು ವಾಪಸ್ ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ.

ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

ಮಹಾರಾಷ್ಟ್ರದ ಗುರುದ್ವಾರ ಶ್ರೀ ನಾಂದೇಡ್ ಸಾಹಿಬ್‌ ಗೆ ಭೇಟಿ ನೀಡಿದ್ದ ಪಂಜಾಬ್ ಮೂಲದ ಯಾತ್ರಿಕರು ಲಾಕ್‌ಡೌನ್‌ನಿಂದ ಸಿಕ್ಕಿಹಾಕಿಕೊಂಡಿದ್ದಾರೆ. ಇವರು ವಾಪಸ್ ಆಗಲು ಬಸ್ ವ್ಯವಸ್ಥೆ ಮಾಡಿ ಎಂದು ಗೃಹಮಂತ್ರಿ ಅಮಿತ್ ಶಾ ಅವರಲ್ಲಿ ಬೇಡಿಕೆಯಿಟ್ಟಿದ್ದಾರೆ.

Punjab CM Request Amit Shah To Allow Pilgrims To Return Home

ಗೃಹ ಸಚಿವರಿಗೆ ಮನವಿ ಮಾಡುವುದಕ್ಕೂ ಮೊದಲು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಈ ಕುರಿತು ಚರ್ಚಿಸಿದ್ದರು. ಆದರೆ, ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಕಷ್ಟ. ಕೇಂದ್ರದಿಂದ ಅನುಮತಿ ಸಿಕ್ಕಿರೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಉತ್ತರಿಸಿದ್ದಾರೆ.

ರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರ

ಮಹಾರಾಷ್ಟ್ರ ಸಿಎಂ ನಿರ್ಧಾರದ ಬಳಿಕ ಪಂಜಾಬ್ ಮುಖ್ಯಮಂತ್ರಿ ಕೇಂದ್ರದ ಮೊರೆ ಹೋಗಿದ್ದಾರೆ. ಆದರೆ, ಕೇಂದ್ರದಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸದ್ಯದ ಪರಿಸ್ಥಿತಿ ನೋಡಿದ್ರೆ ಬಹುಶಃ ಸಿಗುವುದು ಕಷ್ಟಸಾಧ್ಯ.

English summary
Punjab CM writes to Amit Shah to allow the stranded Punjab pilgrims to return home from Gurdwara Sri Nanded Sahib in Maharashtra by bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X