ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು?; ಸಿಧು ‘ಪಂಜಾಬ್ ಮಾದರಿ’ಯಲ್ಲಿ ಸಿಎಂ ಚನ್ನಿ ನಾಪತ್ತೆ

|
Google Oneindia Kannada News

ಚಂಡೀಗಢ, ಜನವರಿ 12: ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದ್ದರೂ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುರವರ ಪತ್ರಿಕಾಗೋಷ್ಠಿಯ ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಭಾವಚಿತ್ರಗಳು ಇಲ್ಲದಿರುವುದು ಪಂಜಾಬ್ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸಿವೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ನವಜೋತ್ ಸಿಂಗ್ ಸಿಧುರವರ ಪ್ರಕಾರ, ಅಧಿಕಾರವನ್ನು ಮತ್ತೆ ಜನರ ಕೈಗೆ ತರುವುದಾಗಿ ತಮ್ಮ 'ಪಂಜಾಬ್ ಮಾದರಿ'ಯನ್ನು ಬಿಡುಗಡೆ ಮಾಡಿದ್ದು, ಇದು ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕುಗಳಿಗೆ ದಾರಿ ಮಾಡಿಕೊಟ್ಟಿದೆ.

ಪತ್ರಿಕಾಗೋಷ್ಠಿ ಬ್ಯಾನರ್‌ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ನವಜೋತ್ ಸಿಂಗ್ ಸಿಧುರವರ ಭಾವಚಿತ್ರಗಳನ್ನು ಮಾತ್ರ ಒಳಗೊಂಡಿತ್ತು.

Punjab CM Charanjit Singh Channi Missing as Navjot Singh Sidhu Rolls Out Punjab Model

ಕುತೂಹಲಕಾರಿ ಅಂಶವೆಂದರೆ, ಸೋನಿಯಾ ಗಾಂಧಿಯವರು ಪಂಜಾಬ್ ಚುನಾವಣೆಗಾಗಿ "ಪ್ರಣಾಳಿಕೆ ಸಮಿತಿ'ಯನ್ನು ರಚಿಸಿದ್ದರೂ ನವಜೋತ್ ಸಿಂಗ್ ಸಿಧು ತಮ್ಮ 'ಪಂಜಾಬ್ ಮಾದರಿ'ಯನ್ನು ಬಿಡುಗಡೆ ಮಾಡಿದರು. ಪಕ್ಷದ ಪಂಜಾಬ್ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿ ಅವರ ಪಂಜಾಬ್ ಮಾದರಿಯನ್ನು ರೂಪಿಸಲಾಗಿದೆ ಎಂದು ಸಿಧು ಹೇಳಿದ್ದಾರೆ.

ಮದ್ಯ, ಮರಳು ಗಣಿಗಾರಿಕೆ, ಕೇಬಲ್ ಟಿವಿ, ಸಾರಿಗೆ ಇತ್ಯಾದಿಗಳ ನೀತಿಗಳನ್ನು ಅನಾವರಣಗೊಳಿಸಿದ ಪಿಸಿಸಿ ಅಧ್ಯಕ್ಷ ಸಿಧು, ರಾಜ್ಯ ಮತ್ತು ಅದರ ಜನರು ಬದಲಾವಣೆಯ ಸಾಧ್ಯತೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಮತ್ತು ಪಿಸಿಸಿ ಘೋಷಿಸಿದ ಯೋಜನೆಗಳ ಸಾಮರ್ಥ್ಯವನ್ನು ಬಿಚ್ಚಿಡಬೇಕು ಎಂದು ಪ್ರತಿಪಾದಿಸಿದರು.

ಈ ಬಾರಿ ಪಂಜಾಬ್ ಜನರು ತಮ್ಮ ಮುಖ್ಯಮಂತ್ರಿಯನ್ನು ಭವಿಷ್ಯದ ಅಜೆಂಡಾದ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ. ಈ ಬದಲಾವಣೆಗಳು ಜನರ ಭೂದೃಶ್ಯವನ್ನು ಪರಿವರ್ತಿಸುತ್ತದೆ ಮತ್ತು ನಮ್ಮನ್ನು ಸಮೃದ್ಧ ಪಂಜಾಬ್‌ಗೆ ಕರೆದೊಯ್ಯುತ್ತದೆ ಎಂದು ಹೇಳಿದರು.

Punjab CM Charanjit Singh Channi Missing as Navjot Singh Sidhu Rolls Out Punjab Model

ರಾಜ್ಯದ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಮತ್ತು ಗರಿಷ್ಠ ಆದಾಯವನ್ನು ಗಳಿಸುವುದು ಇದರ ಗುರಿಯಾಗಿದೆ. ಇದರಿಂದ ಜನರ ಅಭಿವೃದ್ಧಿಗೆ ಹೂಡಿಕೆ ಮಾಡಬಹುದು ಎಂದು ನವಜೋತ್ ಸಿಂಗ್ ಸಿಧು ತಿಳಿಸಿದರು.

ತಮ್ಮ ಪಂಜಾಬ್ ಮಾದರಿಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆ ಮಾಡಿಕೊಡಬೇಕು ಮತ್ತು ಅದನ್ನು ಪಕ್ಷವು ಅಳವಡಿಸಿಕೊಳ್ಳಬೇಕು ಎಂದು ನವಜೋತ್ ಸಿಂಗ್ ಸಿಧು ತಿಳಿಸಿದ್ದು, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಇದು "ವೈಯಕ್ತಿಕ ಮಾದರಿ'ಯಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಕ್ತಾರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮುಂಬರುವ ಚುನಾವಣೆಗೆ ಪಂಜಾಬ್‌ನಲ್ಲಿ ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಸುನೀಲ್ ಜಾಖರ್ ಒಟ್ಟಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಫೆಬ್ರವರಿ 14ರಂದು ಮತದಾನ
ಪಂಜಾಬ್ ಸೇರಿದಂತೆ ಗೋವಾ, ಮಣಿಪುರ್, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ.

Recommended Video

KL Rahul ನಾಯಕತ್ವದ ಏಕದಿನ ಸರಣಿಗೆ ಆಟಗಾರರೇ‌ ಇಲ್ಲ | Oneindia Kannada

ಪಂಜಾಬ್‌ನಲ್ಲಿ ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

English summary
Punjab CM Charanjit Singh Channi and former party State president Sunil Jakhar’s photographs Absence at PCC chief Navjot Singh Sidhu’s presser on Tuesday indicates fissures in the party remain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X