ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಕಲಿ ಕೇಜ್ರಿವಾಲ್' ಹೇಳಿಕೆ: ಪಂಜಾಬ್‌ ಸಿಎಂ ತಿರುಗೇಟು

|
Google Oneindia Kannada News

ಚಂಡೀಗಢ, ನವದೆಹಲಿ, ನವೆಂಬರ್ 24: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿರುವುದನ್ನು ಕಾಂಗ್ರೆಸ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇಂದು ತಳ್ಳಿ ಹಾಕಿದ್ದಾರೆ. ಎಎಪಿ ಮುಖ್ಯಸ್ಥರು, ಪಂಜಾಬ್‌ನಲ್ಲಿ ಆಮ್ ಆದ್ಮಿ ಯಾರೆಂಬುದರ ಬಗ್ಗೆ ಸುಳಿವಿಲ್ಲ ಎಂದು ಅವರು ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ. ಜೊತೆಗೆ ಪಂಜಾಬ್‌ನಲ್ಲಿ ಎಎಪಿ ಭರವಸೆ ನೀಡಿದ್ದನ್ನು ಈಗಾಗಲೇ ಮಾಡಿದೆ ಎಂದು 'ನಕಲಿ ಕೇಜ್ರಿವಾಲ್' ಹೇಳಿಕೆಗೆ ಪಂಜಾಬ್‌ ಸಿಎಂ ಚನ್ನಿ ತಿರುಗೇಟು ಕೊಟ್ಟಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನ ಜನರನ್ನು ಸೆಳೆಯಲು ಹಲವಾರು ಭರವಸೆಗಳನ್ನು ನೀಡಿದ್ದಾರೆ. ಜೊತೆಗೆ ಮುಂಬರುವ ಚುನಾವಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಪ್ರಚಾರದ ವೇಳೆ ಕೇಜ್ರಿವಾಲ್ ಪಂಜಾಬ್‌ನಲ್ಲಿ ನಕಲಿ ಕೇಜ್ರಿವಾಲ್ ಓಡುಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಸಿಎಂ ಚನ್ನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಈ ಬಗ್ಗೆ ಇಂದು ಪ್ರಶ್ನಿಸಿದ್ದಕ್ಕೆ ಚನ್ನಿ ಅವರು ನನ್ನನ್ನು "ನಕಲಿ ಆಮ್ ಆದ್ಮಿ" ಎಂದು ಕರೆದು ತಪ್ಪು ಮಾಡಿದ್ದಾರೆ ಎಂದು ಹೇಳಿದರು. ಅವರು ಈಗ ಇದ್ದಾರೆ. ಜೊತೆಗೆ ಸೋಮವಾರ ಎಎಪಿ, ಚನ್ನಿ ಒಬ್ಬ "ನಕಲಿ ಕೇಜ್ರಿವಾಲ್" ಎಂದು ಟ್ವೀಟ್ ಮಾಡಿತ್ತು.

ಸಿಎಂ ಚನ್ನಿ ಅವರು ಅರವಿಂದ್ ಕೇಜ್ರಿವಾಲ್ ಅವರಂತೆ ಜನರಿಗೆ ಉಚಿತ ವಿದ್ಯುತ್, ನೀರು ಮತ್ತು ಬಡವರಿಗೆ ಬಸ್ ಸೇವೆಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಂಜಾಬ್‌ನಲ್ಲಿ ಕೇಜ್ರಿವಾಲ್ ಅವರು ಜನರಿಗೆ ನೀಡಿದ ಭರವಸೆಗಳಳೊಂದಿಗೆ ಎಎಪಿ ಮೋಸಗಾರ. ಇದರ ಬಗ್ಗೆ ಎಚ್ಚರವಿರಲಿ ಎಂದು ಹೇಳಲಾಗಿತ್ತು.

Punjab CM Channis response to Delhi CM

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್‌ಗೆ ಉಚಿತ ವಿದ್ಯುತ್ ಮತ್ತು ನೀರು ನೀಡುವುದಾಗಿ ಮುಖ್ಯಮಂತ್ರಿ ಚನ್ನಿ ಅಧಿಕಾರ ವಹಿಸಿಕೊಳ್ಳುವ ತಿಂಗಳ ಮೊದಲು ಕೇಜ್ರಿವಾಲ್ ಭರವಸೆ ನೀಡಿದ್ದರು. ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಪಂಜಾಬ್ ಮುಖ್ಯಮಂತ್ರಿ ಜನರಿಗೆ ಉಚಿತ ವಿದ್ಯುತ್ ಮತ್ತು ನೀರಿನ ಭರವಸೆ ನೀಡಿದ್ದರು. ಕರ್ತಾರ್‌ಪುರಕ್ಕೆ ರಸ್ತೆ ತೆರೆದ ನಂತರ, ಅವರು ಉಚಿತ ಬಸ್ ಪ್ರಯಾಣವನ್ನು ಘೋಷಿಸಿದರು. ಆದರೆ ಇಂದು ಆಮ್ ಆದ್ಮಿ ಪಕ್ಷ ಭರವಸೆ ನೀಡಿದ್ದೆಲ್ಲವನ್ನೂ ರಾಜ್ಯ ಸರ್ಕಾರ ಮೊದಲೇ ಮಾಡಿದೆ ಎಂದು ಚನ್ನಿ ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಸಿಎಂ ಆಗಿ ನಾಲ್ಕು ತಿಂಗಳು ಆಗಿದೆ. ನಾಲ್ಕು ವರ್ಷ ಕೆಲಸ ಮಾಡುತ್ತೇನೆ. ನಿದ್ದೆ ಮಾಡಲ್ಲ ಅಧಿಕಾರಿಗಳಿಗೂ ನಿದ್ದೆ ಮಾಡಲು ಬಿಡುವುದಿಲ್ಲ, ವ್ಯವಸ್ಥೆ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ 'ನಾ ಖಾವೂಂಗಾ ನಾ ಖಾನೇ ದೂಂಗಾ' ಸಂದೇಶವನ್ನು ಇವರೂ ಪ್ರತಿಧ್ವನಿಸಿದರು.

Punjab CM Channis response to Delhi CM

ಇತ್ತ ಪಂಜಾಬ್‌ನಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಪಕ್ಷದ ಸಂಘಟನೆ ಹಾಗೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ಪಂಜಾಬ್‌ನ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಪಂಜಾಬ್‌ನ ಅಮೃತಸರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, 2-3 ಕಾಂಗ್ರೆಸ್ ಸಂಸದರು ಸಹ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಹಲವು ಕಾಂಗ್ರೆಸ್ಸಿಗರು ನಮ್ಮೊಂದಿಗೆ ಸೇರಲು ಬಯಸುತ್ತಿದ್ದಾರೆ. ಅವರು ಆಮ್ ಆದ್ಮಿ ಪಕ್ಷದ ಭಾಗವಾಗಲು ಬಯಸುತ್ತಿದ್ದಾರೆ. ಮಾತ್ರವಲ್ಲದೆ 25 ಶಾಸಕರು ಮತ್ತು 2-3 ಸಂಸದರು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಜೊತೆಗೆ ಪಂಜಾಬ್‌ನಲ್ಲಿ 'ನಕಲಿ ಕೇಜ್ರಿವಾಲ್' ಓಡಾಡುತ್ತಿದ್ದಾರೆ. ಅವರು ನಮ್ಮಂತೆ ಉಚಿತ ವಿದ್ಯುತ್, ನೀರು ಒದಗಿಸುವ ಭರವಸೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದ್ದರು. ಇದಕ್ಕೆ ಚನ್ನಿ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Aam Aadmi Party chief Arvind Kejriwal's regular forays into Punjab were brushed away by Congress Chief Minster Charanjit Singh Channi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X