ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Bhagwant Mann Swearing-in Live: ಪಂಜಾಬ್‌ನಲ್ಲಿ ಎಎಪಿ ಆಡಳಿತ ಆರಂಭ

|
Google Oneindia Kannada News

ಚಂಡೀಗಢ, ಮಾರ್ಚ್ 16; ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಆಮ್ ಆದ್ಮಿ ಪಕ್ಷದ ಆಡಳಿತ ರಾಜ್ಯದಲ್ಲಿ ಬುಧವಾರ ಆರಂಭವಾಗುತ್ತಿದೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಪಡೆದು ಎಎಪಿ ಭರ್ಜರಿ ಜಯ ದಾಖಲಿಸಿದೆ.

ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಬುಧವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಾಮಾನ್ಯವಾಗಿ ರಾಜ್ಯದ ರಾಜಧಾನಿಯಲ್ಲಿರುವ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತದೆ. ಆದರೆ ಭಗವಂತ್ ಮಾನ್ ಪ್ರಮಾಣ ವಚನ ಸಮಾರಂಭ ವಿಭಿನ್ನವಾಗಿ ನಡೆಯಲಿದೆ.

Bhagwant Mann : ಪಂಜಾಬ್ ಸಿಎಂ ಪಟ್ಟಕ್ಕೇರಲು ಸಜ್ಜಾದ 'ಕಾಮಿಡಿಯನ್' ಭಗವಂತ್ ಮಾನ್ Bhagwant Mann : ಪಂಜಾಬ್ ಸಿಎಂ ಪಟ್ಟಕ್ಕೇರಲು ಸಜ್ಜಾದ 'ಕಾಮಿಡಿಯನ್' ಭಗವಂತ್ ಮಾನ್

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸ್ವಗ್ರಾಮ ಲ್ಯಾಲ್ಲಪುರ್ ಜಿಲ್ಲೆಯ ಬಾಂಗಾದಲ್ಲಿ ಭಗವಂತ್ ಮಾನ್ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಭಗತ್ ಸಿಂಗ್ ಹುಟ್ಟೂರಿನಲ್ಲಿ‌ ಪ್ರಮಾಣವಚನ ಬೋಧಿಸಲು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸಹ ಒಪ್ಪಿಗೆ ನೀಡಿದ್ದಾರೆ.

Assembly Elections 2022 Results Live: ಮಾ.16ರಂದು ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರAssembly Elections 2022 Results Live: ಮಾ.16ರಂದು ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

Punjab CM Bhagwant Mann Swearing in  Live Updates and Highlights in Kannada

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ಹಲವು ಎಎಪಿ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ 2ನೇ ರಾಜ್ಯದಲ್ಲಿ ಎಎಪಿ ಆಡಳಿತ ಬುಧವಾರ ಆರಂಭವಾಗಲಿದೆ.

Newest FirstOldest First
2:15 PM, 16 Mar

ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ
1:29 PM, 16 Mar

ಭಗವಂತ್ ಮಾನ್ ಮಾತ್ರ ಇಂದು ಪ್ರಮಾಣ ವಚನ ಕಾರ್ಯಕ್ರಮ ಮುಕ್ತಾಯವಾಗಿದೆ.
1:27 PM, 16 Mar

ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
1:25 PM, 16 Mar

ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವೇದಿಕೆಗೆ ಆಗಮಿಸಿದ್ದು, ಕಾರ್ಯಕ್ರಮ ಆರಂಭವಾಗಿದೆ.
1:23 PM, 16 Mar

ಪ್ರಮಾಣ ವಚನದ ವೇದಿಕೆಗೆ ಆಗಮಿಸಿದ ಭಗವಂತ್ ಮಾನ್
1:15 PM, 16 Mar

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 92 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
1:03 PM, 16 Mar

ಪ್ರಮಾಣ ವಚನ ಸಮಾರಂಭ 12.30ಕ್ಕೆ ನಿಗದಿಯಾಗಿತ್ತು. ಆದರೆ 1 ಗಂಟೆಯಾದರೂ ಕಾರ್ಯಕ್ರಮ ಇನ್ನೂ ಆರಂಭವಾಗಿಲ್ಲ.
Advertisement
1:01 PM, 16 Mar

ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಮಾಡುವ ಭಗತ್ ಸಿಂಗ್ ಸ್ವಗ್ರಾಮ ಲ್ಯಾಲ್ಲಪುರ್ ಜಿಲ್ಲೆಯ ಬಾಂಗಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಎಪಿ ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
12:54 PM, 16 Mar

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಚಿವರಿಗೆ ಒಂದು ವೇದಿಕೆ. ಆಪ್‌ನ ಜಿಲ್ಲಾಧ್ಯಕ್ಷರು, ವಿಶೇಷ ಆಹ್ವಾನಿತರಿಗೆ ಮತ್ತೊಂದು ವೇದಿಕೆ ನಿರ್ಮಿಸಲಾಗಿದೆ.
12:53 PM, 16 Mar

ಪ್ರಮಾಣ ವಚನ ಸಮಾರಂಭಕ್ಕೆ ಮೂರು ಹಂತದ ವೇದಿಕೆ ನಿರ್ಮಾಣ ಮಾಡಲಾಗಿದೆ. ಮುಖ್ಯ ವೇದಿಕೆಯಲ್ಲಿ ಪ್ರಮಾಣ ವಚನ ನಡೆಯಲಿದೆ.
12:48 PM, 16 Mar

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 92, ಕಾಂಗ್ರೆಸ್ 18, ಬಿಜೆಪಿ 2, ಇತರರು 1 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
12:44 PM, 16 Mar

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಭಗವಂತ್‌ ಮಾನ್ ಅಭಿನಂದಿಸಿದ್ದಾರೆ.
Advertisement
12:37 PM, 16 Mar

ಪಂಜಾಬ್‌ನಲ್ಲಿ ಬುಧವಾರದಿಂದ ಆಮ್‌ ಆದ್ಮಿ ಪಕ್ಷದ ಆಡಳಿತ ಆರಂಭವಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
12:31 PM, 16 Mar

ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆರಂಭವಾಗಲಿದೆ.
12:29 PM, 16 Mar

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
12:20 PM, 16 Mar

ಎಎಪಿಗೆ ಶುಭ ಹಾರೈಸಿದ ಗಾಯಕ ಗುರದಾಸ್ ಮಾನ್
12:17 PM, 16 Mar

ದೇಶದ ವಿವಿಧ ರಾಜ್ಯಗಳ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಂಜಾಬ್ ಸಿಎಂ ಪ್ರಮಾಣ ವಚನ ಸಮಾರಂಭಕ್ಕಾಗಿ ಆಗಮಿಸಿದ್ದಾರೆ.
12:04 PM, 16 Mar

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿರುವ ಭಗವಂತ್‌ ಮಾನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
11:47 AM, 16 Mar

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಕನಸು ನನಸು ಮಾಡಲು ಇಡೀ ಪಂಜಾಬ್ ರಾಜ್ಯ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದೆ ಎಂದು ನಿಯೋಜಿತ ಸಿಎಂ ಭಗವಂತ್ ಮಾನ್ ಹೇಳಿದರು.
11:13 AM, 16 Mar

ಮೊದಲ ಬಾರಿಗೆ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ದೆಹಲಿ ಬಳಿಕ ಎಎಪಿ ಅಧಿಕಾರದಲ್ಲಿರುವ 2ನೇ ರಾಜ್ಯ ಪಂಜಾಬ್ ಆಗಲಿದೆ.
11:01 AM, 16 Mar

ಇಂದು ಪಂಜಾಬ್‌ಗೆ ಬಹುಮುಖ್ಯವಾದ ದಿನ. ರಾಜ್ಯದ ಜನರೆಲ್ಲರೂ ಸಹ ಇಂದು ಒಗ್ಗಟ್ಟಾಗಿ ಹೊಸ ಸರ್ಕಾರಕ್ಕೆ ಶುಭ ಹಾರೈಸುತ್ತಿದ್ದಾರೆ. ನಾನು ಸಹ ಪಮಾಣ ವಚನ ಕಾರ್ಯಕ್ರಮಕ್ಕಾಗಿ ಬಾಂಗಾಕ್ಕೆ ತೆರಳುತ್ತಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
10:24 AM, 16 Mar

ಇಂದು ಪಂಜಾಬ್ ಇತಿಹಾಸದಲ್ಲೇ ಮಹತ್ವದ ದಿನವಾಗಿದೆ ಎಂದು ರಾಘವ್ ಚಡ್ಡಾ ಹೇಳಿದರು.
10:01 AM, 16 Mar

ಮಧ್ಯಾಹ್ನ 12.30ಕ್ಕೆ ಭಗವಂತ್ ಮಾನ್ ಸಿಂಗ್ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
9:36 AM, 16 Mar

ಪಂಜಾಬ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಎಎಪಿ ಭಗವಂತ್ ಮಾನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.
9:21 AM, 16 Mar

ಪ್ರಮಾಣ ವಚನ ಸಮಾರಂಭದ ಭದ್ರತೆಗಾಗಿ 8 ರಿಂದ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ.
9:05 AM, 16 Mar

ಸುಮಾರು 100 ಎಕರೆ ಜಾಗದಲ್ಲಿ ಪ್ರಮಾಣ ವಚನ ಸಮಾರಂಭಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದೆ. ಗಣ್ಯರು ಸೇರಿದಂತೆ ಇತರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
8:53 AM, 16 Mar

ಸುಮಾರು 1 ಲಕ್ಷ ಜನರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಬಹುದು ಎಂದು ಅಂದಾಜಿಸಲಾಗಿದೆ.
8:42 AM, 16 Mar

ಭಗವಂತ್ ಮಾನ್ ಮಾತ್ರ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಬೇರೆ ಯಾವುದೇ ಶಾಸಕರು ಸಂಪುಟ ಸೇರುತ್ತಿಲ್ಲ.
8:33 AM, 16 Mar

ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಗವಂತ್ ಮಾನ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
8:28 AM, 16 Mar

ಭಗತ್ ಸಿಂಗ್ ಸ್ವಗ್ರಾಮ ಲ್ಯಾಲ್ಲಪುರ್ ಜಿಲ್ಲೆಯ ಬಾಂಗಾದಲ್ಲಿ ಭಗವಂತ್ ಮಾನ್ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.
READ MORE

English summary
Bhagwant Mann Swearing in Live Updates in Kannada: AAP's Bhagwant Mann to take oath as Punjab chief minister on March 16. Check Live updates, news and Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X