ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ ಟವರ್‌ಗೆ ಹಾನಿ ಮಾಡದಂತೆ ರೈತರಲ್ಲಿ ಪಂಜಾಬ್ ಸಿಎಂ ಮನವಿ

|
Google Oneindia Kannada News

ಚಂಡೀಗಢ, ಡಿಸೆಂಬರ್ 25: ಮೊಬೈಲ್ ಟವರ್‌ಗೆ ಹಾನಿ ಮಾಡದಂತೆ ಪಂಜಾಬ್ ಮುಖ್ಯಮಂತ್ರಿ ಪ್ರತಿಭಟನಾ ನಿರತ ರೈತರಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್‌ನ ಪ್ರದೇಶಗಳಲ್ಲಿ ಪ್ರತಿಭಟನಾ ನಿರತ ರೈತರು ಮೊಬೈಲ್ ಟವರ್‌ಗಳಿಗೆ ಇರುವ ಸಪ್ಲೈ ತೆಗೆದುಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಭಟನಾ ನಿರತ ರೈತರ ಬಳಿ ಮನವಿ ಮಾಡಿದ್ದು, ಯಾವುದೇ ಹಾನಿ ಮಾಡದಂತೆ ಕೇಳಿಕೊಂಡಿದ್ದಾರೆ.

Punjab CM Appeals To Farmers Not To Damage Mobile Towers

ಕೊರೊನಾ ಸಮಯದಲ್ಲಿ ದೂರವಾಣಿ ಸಂಪರ್ಕ ಇಲ್ಲವಾದರೆ ಸಮಸ್ಯೆಗಳು ಉಲ್ಬಣಿಸುತ್ತದೆ. ಅಲ್ಲದೇ ದೆಹಲಿ ಗಡಿಯಲ್ಲಿ ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿರುವ ರೈತರ ಹೇಗೆ ಶ್ರದ್ಧೆ ಮತ್ತು ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೋ ಹಾಗೆಯೇ ನೀವು ಕೂಡ ಶಿಸ್ತು ಕಾಪಾಡಿ ಎಂದು ಹೇಳಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರ, ಮೋಗ ಪ್ರದೇಶಗಳಲ್ಲಿ ರೈತರು ಹಲವು ಮೊಬೈಲ್ ಟವರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಲ್ಲದೆ ಟೆಲಿಕಾಂ ಆಪರೇಟರ್‌ನ್ನು ಗುರಿಯಾಗಿದಿ ಈ ಕೆಲಸ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ.

English summary
Amid reports of disconnection of power supply to various mobile towers across Punjab, Chief Minister Amarinder Singh on Friday appealed to protesting farmers not to inconvenience the public with such actions but to continue to exercise the same restraint as they had been showing over the past several months of their agitation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X