ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಕ್ಯಾಬಿನೆಟ್ ಸಭೆ: ಇಂದು ತೆಗೆದುಕೊಂಡ ಪ್ರಮುಖ 5 ನಿರ್ಧಾರಗಳು

|
Google Oneindia Kannada News

ಚಂಡೀಗಢ, ಮೇ 02: ಚುನಾವಣಾ ಪೂರ್ವ ಭರವಸೆಗಳ ಸರಮಾಲೆಯನ್ನು ಈಡೇರಿಸುವ ಭಗವಂತ್ ಮಾನ್ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಸೋಮವಾರ ಚಂಡೀಗಢದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ 26454 ನೇಮಕಾತಿಗಳನ್ನು ಅನುಮೋದಿಸಿದೆ ಎಂದು ಘೋಷಿಸಿದ್ದಾರೆ.

'ಒಬ್ಬ ಶಾಸಕ, ಒಬ್ಬ ಪಿಂಚಣಿ' ಯೋಜನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ, ಪಂಜಾಬ್ ಸರ್ಕಾರವು ಶಾಸಕರ ಆದಾಯ ತೆರಿಗೆಯನ್ನು ಪಾವತಿಸುವುದಿಲ್ಲ. ಆಮ್ ಆದ್ಮಿ ಪಕ್ಷದ (ಎಎಪಿ) ದೀರ್ಘಾವಧಿಯ ಮನೆ ಮನೆಗೆ ಪಡಿತರ ವಿತರಣೆ ಯೋಜನೆ ಮತ್ತೊಂದು ದೊಡ್ಡ ನಿರ್ಧಾರವಾಗಿದೆ.

ಮುಕ್ತಸರ ಜಿಲ್ಲೆಯಲ್ಲಿ ಮೃದು ಬೆಳೆ ವೈಫಲ್ಯಕ್ಕೆ 41.8 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಲಾಗಿದ್ದು, ಈ ಪೈಕಿ ರೈತರಿಗೆ 38.08 ಕೋಟಿ ರೂ. ಹಾಗೂ ಕೃಷಿ ಕಾರ್ಮಿಕರಿಗೆ 03.81 ಕೋಟಿ ರೂ. ನೀಡಲಾಗುತ್ತದೆ. ಜೊತೆಗೆ ಪಂಜಾಬ್ ಸರ್ಕಾರ ಸಣ್ಣ ಸಾಗಣೆದಾರರಿಗೆ ಶುಲ್ಕವನ್ನು ಠೇವಣಿ ಮಾಡುವ ಸಮಯವನ್ನು 3 ತಿಂಗಳು ವಿಸ್ತರಿಸಲು ನಿರ್ಧರಿಸಿದೆ. ಸಾರಿಗೆದಾರರು ಶುಲ್ಕವನ್ನು ಕಂತುಗಳಲ್ಲಿ ಠೇವಣಿ ಮಾಡಬಹುದು ಎಂದು ಸರ್ಕಾರ ಹೇಳಿದೆ.

Punjab Cabinet Meeting: Top 5 Decisions Taken Today

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಿಎಂ ಮಾನ್ ತಮ್ಮ ಸಂಪುಟದ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು ಮತ್ತು "ಕೇವಲ ಘೋಷಣೆ ಮಾತ್ರವಲ್ಲ, ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ" ಎಂದು ಬರೆದಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪಂಜಾಬ್ ಕ್ಯಾಬಿನೆಟ್‌ನ ಮಹತ್ವದ ನಿರ್ಧಾರಗಳನ್ನು ಬರೆದಿದ್ದಾರೆ....

1) ಹಲವು ಇಲಾಖೆಗಳಲ್ಲಿ 26,454 ನೇಮಕಾತಿಗಳಿಗೆ ಅನುಮೋದನೆ

2) ಒಬ್ಬ ಶಾಸಕ (ಎಂಎಲ್‌ಎ), ಒಂದು ಪಿಂಚಣಿ ಅನುಮೋದಿಸಲಾಗಿದೆ

Punjab Cabinet Meeting: Top 5 Decisions Taken Today

3) ಮನೆ-ಮನೆಗೆ ಪಡಿತರ ವಿತರಣೆ ಯೋಜನೆಗೆ ಅನುಮೋದನೆ

4) ಮುಕ್ತಸರ ಜಿಲ್ಲೆಯಲ್ಲಿ ಬೆಳೆ ವೈಫಲ್ಯಕ್ಕೆ 41.8 ಕೋಟಿ ಪರಿಹಾರ ಅನುಮೋದನೆ, ರೈತರಿಗೆ 38.08 ಕೋಟಿ ಮತ್ತು ಕೃಷಿ ಕಾರ್ಮಿಕರಿಗೆ 03.81 ಕೋಟಿ ನೀಡಲಾಗುವುದು.

5) ಸಣ್ಣ ಸಾಗಣೆದಾರರಿಗೆ ಶುಲ್ಕವನ್ನು ಠೇವಣಿ ಮಾಡುವ ಸಮಯವನ್ನು 3 ತಿಂಗಳವರೆಗೆ ವಿಸ್ತರಿಸಲಾಗಿದೆ, ಕಂತುಗಳಲ್ಲಿ ಠೇವಣಿ ಕಟ್ಟಬಹುದಾಗಿದೆ.

English summary
Bhagwant Man's Punjab government today made 5 major decisions to fulfill its pre-election promise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X