ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಲೂಧಿಯಾನ ಕೋರ್ಟ್‌ನಲ್ಲಿ ಸ್ಫೋಟ, 2 ಸಾವು

|
Google Oneindia Kannada News

ಚಂಡೀಗಢ್, ಡಿಸೆಂಬರ್ 23; ಪಂಜಾಬ್ ರಾಜ್ಯದ ಲೂಧಿಯಾನದ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಗುರುವಾರ ಮಧ್ಯಾಹ್ನ 12.22ರ ಸುಮಾರಿಗೆ ಲೂಧಿಯಾನ ನ್ಯಾಯಾಲಯದ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ನ್ಯಾಯಾಲಯದ 2ನೇ ಮಹಡಿಯಲ್ಲಿರುವ ಬಾತ್‌ ರೂಂನಲ್ಲಿ ಸ್ಫೋಟ ಸಂಭವಿಸಿದೆ.

ಪಂಜಾಬ್ ಚುನಾವಣೆ: ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧೆ ಎಂದ ಅಮರಿಂದರ್ ಸಿಂಗ್ಪಂಜಾಬ್ ಚುನಾವಣೆ: ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧೆ ಎಂದ ಅಮರಿಂದರ್ ಸಿಂಗ್

ಸ್ಫೋಟದ ತೀವ್ರತೆಗೆ ಬಾತ್‌ ರೂಂ ಅಕ್ಕಪಕ್ಕದ ಕೊಠಡಿಗಳ ಗೋಡೆಗೆ ಹಾನಿಯಾಗಿದೆ. ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ.

Breaking: ದೆಹಲಿ ಕೋರ್ಟ್‌ನಲ್ಲಿ ಸ್ಫೋಟ, ಒಬ್ಬರಿಗೆ ಗಾಯBreaking: ದೆಹಲಿ ಕೋರ್ಟ್‌ನಲ್ಲಿ ಸ್ಫೋಟ, ಒಬ್ಬರಿಗೆ ಗಾಯ

Punjab: Blast in Ludhiana court complex; 2 dead, several injured

ಲೂಧಿಯಾನದ ನ್ಯಾಯಾಲಯ ನಗರದ ಹೃದಯಭಾಗದಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಸಮೀಪವೇ ಇದೆ. ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Breaking News: ಪಠಾಣ್‌ಕೋಟ್ ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟBreaking News: ಪಠಾಣ್‌ಕೋಟ್ ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಕ್ಕೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಇದೆ. 25 ಸಿಆರ್‌ಪಿಎಫ್ ಮತ್ತು ದ್ರೋಣ್ ಧ್ವಂಸ ಮಾಡುವ ಪಡೆಯನ್ನು ಗಡಿಯಲ್ಲಿ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ, "ನಾನು ಲೂಧಿಯಾನಕ್ಕೆ ಭೇಟಿ ನೀಡುತ್ತೇನೆ. ಚುನಾವಣೆ ಹತ್ತಿರವಾಗುತ್ತಿರುವಾಗ ಕೆಲವು ಸಮಾಜ ಘಾತಕ ಶಕ್ತಿಗಳು ಇಂತಹ ದುಷ್ಕೃತ್ಯ ನಡೆಸುತ್ತಿವೆ. ಸರ್ಕಾರ ಅಲರ್ಟ್ ಆಗಿದೆ" ಎಂದರು.

ಲೂಧಿಯಾನ ಎಸ್ಪಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, "ನ್ಯಾಯಾಲಯದ 2ನೇ ಮಹಡಿಯಲ್ಲಿರುವ ದಾಖಲೆಗಳ ರೂಂ ಸಮೀಪ ಸ್ಫೋಟ ಸಂಭವಿಸಿದೆ. ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ತಂಡದವರು ಚಂಡೀಗಢ್‌ನಿಂದ ಆಗಮಿಸುತ್ತಿದ್ದಾರೆ" ಎಂದು ಹೇಳಿದರು.

Recommended Video

ಮೊಹಮ್ಮದ್ ಸಿರಾಜ್ ಅವರನ್ನು ಹಾಡಿ ಹೊಗಳಿದ ಸಚಿನ್ ತೆಂಡೂಲ್ಕರ್ | Oneindia Kannada

English summary
Explosion in Ludhiana district court complex, Panjab. Two dead and 4 others injured. Court complex is located near the district commissioner's office in the heart of Ludhiana city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X