ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಪಂಜಾಬ್‌ ಕಾಂಗ್ರೆಸ್‌ನಲ್ಲಿ ರಾಣಾ ವಿರುದ್ಧ ಮತ್ತೆ ಬಂಡಾಯ

|
Google Oneindia Kannada News

ಚಂಡೀಗಢ, ಜನವರಿ 19: ರಾಜ್ಯ ಸಚಿವ ರಾಣಾ ಗುರ್ಜಿತ್ ಸಿಂಗ್ ಪಕ್ಷದಿಂದ ಉಚ್ಚಾಟಿಸುವಂತೆ ಕೋರಿ ಪಂಜಾಬ್‌ನ ನಾಲ್ವರು ಕಾಂಗ್ರೆಸ್ ನಾಯಕರು ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಹಲವು ಕ್ಷೇತ್ರಗಳಲ್ಲಿ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪ ಕೂಡಾ ಮಾಡಿದ್ದಾರೆ.

ಕಾಂಗ್ರೆಸ್ ಕಪುರ್ತಲಾ ಕ್ಷೇತ್ರದಿಂದ ರಾಜ್ಯ ಸಚಿವ ರಾಣಾ ಗುರ್ಜಿತ್ ಸಿಂಗ್ ಕಣಕ್ಕಿಳಿಸಿದೆ. ಕಾಂಗ್ರೆಸ್ ಹಾಲಿ ಶಾಸಕ ನವತೇಜ್ ಸಿಂಗ್ ಚೀಮಾರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದ ನಂತರ ಅವರ ಪುತ್ರ ರಾಣಾ ಇಂದರ್ ಪ್ರತಾಪ್ ಸಿಂಗ್ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

 ಪಂಜಾಬ್‌ ಚುನಾವಣೆ: ಮಾಜಿ ಸೇನಾ ಮುಖ್ಯಸ್ಥ ಜೆಜೆ ಸಿಂಗ್ ಬಿಜೆಪಿ ಸೇರ್ಪಡೆ ಪಂಜಾಬ್‌ ಚುನಾವಣೆ: ಮಾಜಿ ಸೇನಾ ಮುಖ್ಯಸ್ಥ ಜೆಜೆ ಸಿಂಗ್ ಬಿಜೆಪಿ ಸೇರ್ಪಡೆ

ಚೀಮಾ, ಜಲಂಧರ್ ಉತ್ತರ ಶಾಸಕ ಅವತಾರ್ ಸಿಂಗ್ ಜೂನಿಯರ್, ಫಗ್ವಾರಾ ಶಾಸಕ ಬಲ್ವಿಂದರ್ ಸಿಂಗ್ ಧಲಿವಾಲ್ ಮತ್ತು ಮಾಜಿ ಶಾಸಕ ಸುಖಪಾಲ್ ಸಿಂಗ್ ಖೈರಾ ಈ ಪತ್ರ ಬರೆದಿದ್ದಾರೆ. "ರಾಣಾ ಗುರ್ಜಿತ್ ಸಿಂಗ್ ದೋಬಾ ಪ್ರದೇಶದ ವಿವಿಧ ಕ್ಷೇತ್ರಗಳಾದ ಸುಲ್ತಾನ್‌ಪುರ ಲೋಧಿ, ಫಗ್ವಾರಾ, ಭೋಲಾತ್, ಜಲಂಧರ್ ಉತ್ತರ, ಬಂಗಾದಲ್ಲಿ ಉದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಅನ್ನು ದುರ್ಬಲಗೊಳಿಸುತ್ತಿದ್ದಾರೆ," ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

Punjab Assembly Poll 2022: Four Congress Leaders Seek Rana Gurjeet Singh’s Expulsion From Party

"ಪಕ್ಷದ ನಾಯಕತ್ವಕ್ಕೆ ತಿಳಿಸಿದರೂ ಪ್ರಯೋಜನವಿಲ್ಲ"

"ರಾಜ್ಯ ಸಚಿವ ರಾಣಾ ಗುರ್ಜಿತ್ ಸಿಂಗ್‌ರ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ನಾವು ಪಕ್ಷದ ರಾಜ್ಯ ನಾಯಕತ್ವಕ್ಕೆ ತಿಳಿಸುತ್ತಿದ್ದರೂ, ದುರದೃಷ್ಟವಶಾತ್ ಪಕ್ಷವು ರಾಣಾ ಗುರ್ಜಿತ್ ಸಿಂಗ್‌ ವಿರುದ್ಧ ಮ ಕೈಗೊಳ್ಳುವ ಬದಲು ಅವರಿಗೆ ಪಂಜಾಬ್‌ ಚುನಾವಣೆಗೆ ಟಿಕೆಟ್‌ ನೀಡಿದೆ," ಎಂದು ಚೀಮಾ ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಈ ಪ್ರತಿಯನ್ನು ಪಕ್ಷಕ್ಕೂ ಕಳುಹಿಸಲಾಗಿದೆ. ನಾಯಕರಾದ ರಾಹುಲ್ ಗಾಂಧಿ, ಹರೀಶ್ ಚೌಧರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಪ್ರತಿಯನ್ನು ನೀಡಲಾಗಿದೆ.

2018 ರಲ್ಲಿ ಮರಳು ಗಣಿಗಾರಿಕೆ ಹರಾಜಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ನಂತರ ಅಮರಿಂದರ್ ಸಿಂಗ್ ನೇತೃತ್ವದ ಆಡಳಿತದಲ್ಲಿ ರಾಜೀನಾಮೆ ನೀಡಿದ್ದ ರಾಣಾ ಗುರ್ಜಿತ್ ಸಿಂಗ್‌ರನ್ನು ಕಳೆದ ವರ್ಷ ಚರಂಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದ ನಂತರ ಮತ್ತೆ ಸಚಿವರನ್ನಾಗಿ ಮಾಡಲಾಯಿತು. ಆದರೆ ಈ ಬಗ್ಗೆ ಆರೋಪ ಮಾಡಿರುವ ಚೀಮಾ, "ರಾಜ್ಯದಲ್ಲಿ ಮರಳು ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಂಜಾಬ್ ಸಂಪುಟದಿಂದ 2018 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಣಾ ಗುರ್ಜಿತ್ ಸಿಂಗ್, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಸಾಮರ್ಥ್ಯವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ," ಎಂದು ದೂರಿದ್ದಾರೆ.

ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಭಗವಂತ್‌ ಮನ್‌ ಯಾರು? ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಭಗವಂತ್‌ ಮನ್‌ ಯಾರು?

"ಸಚಿವರಾಗಿ ಮರು ನೇಮಕಗೊಂಡ ನಂತರ, ರಾಣಾ ಗುರ್ಜಿತ್ ಸಿಂಗ್, ದುರಹಂಕಾರವನ್ನು ತೋರಿಸುತ್ತಾ, ಸುಲ್ತಾನ್‌ಪುರದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ನವತೇಜ್ ಸಿಂಗ್ ಚೀಮಾ ವಿರುದ್ಧ ತಮ್ಮ ಪುತ್ರ ರಾಣಾ ಇಂದರ್ ಪರ್ತಪ್ ಸಿಂಗ್ ಅವರನ್ನು ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿದ್ದಾರೆ,"' ಎಂದು ಪತ್ರದಲ್ಲಿ ಬರೆಯಲಾಗಿದೆ. ಇದು ಪಕ್ಷದ ಶಿಸ್ತಿನ "ಘೋರ ಉಲ್ಲಂಘನೆ" ಎಂದು ಕೂಡಾ ಹೇಳಿದ್ದಾರೆ.

Recommended Video

ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್:ತಡಬಡಾಯಿಸಿದ ಮೋದಿ ಮಾಡಿದ್ದೇನು? | Oneindia Kannada

"ಅವರು ವಿರೋಧ ಪಕ್ಷಗಳ, ವಿಶೇಷವಾಗಿ ಬಿಜೆಪಿಯ ಕೈಗೊಂಬೆಯಂತೆ ಆಟವಾಡುತ್ತಿದ್ದಾರೆ. ಬಿಜೆಪಿಯ ಕೈಗೊಂಬೆಯಾದ ಕಾರಣ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಮದ್ಯದ ವ್ಯವಹಾರ ಮತ್ತು ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ನೆಲೆಗೊಂಡಿರುವ ಸಕ್ಕರೆ ಕಾರ್ಖಾನೆಗಳ ಹಿನ್ನಲೆ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ," ಎಂದು ಚೀಮಾ ಆರೋಪ ಮಾಡಿದ್ದಾರೆ. "ಆದ್ದರಿಂದ, ರಾಣಾ ಗುರ್ಜಿತ್ ಸಿಂಗ್‌ರನ್ನು ಕಪುರ್ತಲಾ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ತಕ್ಷಣವೇ ಹಿಂತೆಗೆದುಕೊಳ್ಳಲು ಮತ್ತು ಪಕ್ಷವನ್ನು ದುರ್ಬಲಗೊಳಿಸುತ್ತಿರುವ ಅಂತಹ ನಾಯಕರಿಗೆ ಬಲವಾದ ಸಂದೇಶವನ್ನು ಕಳುಹಿಸಲು ನಾವು ವಿನಂತಿಸುತ್ತೇವೆ. ರಾಣಾರನ್ನು ಪಕ್ಷದ ಸದಸ್ಯತ್ವದಿಂದ ವಜಾಗೊಳಿಸಬೇಕು," ಎಂದು ಒತ್ತಾಯ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Punjab Assembly Poll 2022: Four Congress leaders seek Rana Gurjeet Singh's expulsion from party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X