ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗ್ರೂರ್‌ ಸಂಸದ ಸ್ಥಾನಕ್ಕೆ ಭಗವಂತ್‌ ಮಾನ್‌ ರಾಜೀನಾಮೆ

|
Google Oneindia Kannada News

ಚಂಡೀಗಢ, ಮಾರ್ಚ್ 14: ಪಂಜಾಬ್‌ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌, ಸೋಮವಾರ ದೆಹಲಿಗೆ ತೆರಳಿ ತನ್ನ ಸಂಗ್ರೂರ್‌ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಪಂಜಾಬ್ ಮುಖ್ಯಮಂತ್ರಿಯಾಗುವ ಮುನ್ನ ಭಗವಂತ್ ಮಾನ್ ಇಂದು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಸೋಮವಾರ ದೆಹಲಿ ತಲುಪಲಿದ್ದಾರೆ. ಮಾರ್ಚ್ 16ರಂದು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಶಹೀದ್ ಭಗತ್ ಸಿಂಗ್ ಗ್ರಾಮದಲ್ಲಿ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕಾಮೆಡಿಯನ್‌ ಮಾನ್‌ ವಿರೋಧಿಗಳ ವಿರುದ್ಧ ಜೋಕ್‌ಗಳ ಸುರಿಮಳೆ!ಕಾಮೆಡಿಯನ್‌ ಮಾನ್‌ ವಿರೋಧಿಗಳ ವಿರುದ್ಧ ಜೋಕ್‌ಗಳ ಸುರಿಮಳೆ!

ತಾನು ಸಂಗ್ರೂರ್‌ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿದ ಭಗವಂತ್‌ ಮಾನ್‌ ಈ ಬಗ್ಗೆ ಕೂ ಮಾಡಿದ್ದಾರೆ. "ಇಂದು ದೆಹಲಿಗೆ ತೆರಳಿ ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂಗ್ರೂರಿನ ಜನ ನನಗೆ ಇಷ್ಟು ವರ್ಷ ಪ್ರೀತಿ ಕೊಟ್ಟಿದ್ದಾರೆ, ಧನ್ಯವಾದಗಳು," ಎಂದು ಭಗವಂತ್‌ ಮಾನ್‌ ಹೇಳಿದ್ದಾರೆ.

Punjab Assembly Elections: Bhagwant Mann to Resign Post of Sangrur MP

"ಈಗ ನನಗೆ ಇಡೀ ಪಂಜಾಬ್‌ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು, ಕೆಲವೇ ತಿಂಗಳುಗಳಲ್ಲಿ ಲೋಕಸಭೆಯಲ್ಲಿ ಮತ್ತೆ ಅವರ ಧ್ವನಿ ಕೇಳಲಿದೆ ಎಂದು ಸಂಗ್ರೂರಿನ ಜನರಿಗೆ ಭರವಸೆ ನೀಡುತ್ತೇನೆ," ಎಂದು ಕೂಡಾ ಭಗವಂತ್‌ ಮಾನ್‌ ತಿಳಿಸಿದ್ದಾರೆ. ಭಗವಂತ್‌ ಮಾನ್‌ 2019 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

Bhagwant Mann: ಎಎಪಿ ಸಿಎಂ ಅಭ್ಯರ್ಥಿ ಭಗವಂತ್‌ 58,206 ಅಂತರದಲ್ಲಿ ಭರ್ಜರಿ ಗೆಲುವುBhagwant Mann: ಎಎಪಿ ಸಿಎಂ ಅಭ್ಯರ್ಥಿ ಭಗವಂತ್‌ 58,206 ಅಂತರದಲ್ಲಿ ಭರ್ಜರಿ ಗೆಲುವು

ಮುಖ್ಯಮಂತ್ರಿಯಾಗುವ ಮುನ್ನ ರಾಜೀನಾಮೆ

ಭಗವಂತ್‌ ಮಾನ್‌ ಮುಖ್ಯಮಂತ್ರಿಯಾಗುವ ಮೊದಲು ಈ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ರಾಜೀನಾಮೆ ನೀಡಲು ಭಗವಂತ್‌ ಮಾನ್‌ ಮುಂದಾಗಿದ್ದಾರೆ. 48 ವರ್ಷದ ಭಗವಂತ್ ಮಾನ್ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. ಮಾರ್ಚ್ 16 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿಯ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 117 ರಲ್ಲಿ 92 ಸ್ಥಾನಗಳನ್ನು ಗೆದ್ದಿದೆ. ಭಗವಂತ್‌ ಮಾನ್‌ ಧುರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ ಅವರನ್ನು 58,206 ಮತಗಳಿಂದ ಸೋಲಿಸಿದ್ದಾರೆ.

ಪ್ರಮಾಣ ವಚನಕ್ಕೆ ಭರದಿಂದ ಸಿದ್ಧತೆ

ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಒಂದು ಲಕ್ಷ ಜನರು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಈ ಕಾರಣಕ್ಕೆ ಆಡಳಿತವೂ ಹೆಚ್ಚುವರಿ ಸಿದ್ಧತೆಯಲ್ಲಿ ನಿರತವಾಗಿದೆ.

ಪ್ರಮಾಣ ವಚನ ಸ್ವೀಕಾರ ನಡೆಯುವ ಸ್ಥಳದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ಪಂಗಡ ನಿರ್ಮಿಸಲಾಗಿದೆ. ಭಗವಂತ್‌ ಮಾನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ, ಬಂಗಾ, ನವನ್‌ಶಹರ್ ಮುನ್ಸಿಪಲ್ ಕೌನ್ಸಿಲ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು, ನೈರ್ಮಲ್ಯ ನಿರೀಕ್ಷಕರು ಮತ್ತು ನೈರ್ಮಲ್ಯ ಕಾರ್ಯಕರ್ತರು ಸ್ವಚ್ಛತೆಯ ವ್ಯವಸ್ಥೆ ಮತ್ತು ಮ್ಯೂಸಿಯಂ ಅನ್ನು ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದಾರೆ. ಅದೇ ಸಮಯದಲ್ಲಿ, ತಹಸಿಲ್ ಆಡಳಿತವು ಟೆಂಟ್‌ಗಳು, ಕುರ್ಚಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುವಲ್ಲಿ ತೊಡಗಿದೆ.

ಆರೋಗ್ಯ ಇಲಾಖೆಗಳಿಗೂ ಎಚ್ಚರಿಕೆ

ಮತ್ತೊಂದೆಡೆ, ಪ್ರಮಾಣ ವಚನ ಸಮಾರಂಭದಲ್ಲಿ ಆರೋಗ್ಯ ಸಿಬ್ಬಂದಿಗಳಿಗೂ ಎಚ್ಚರಿಕೆಯನ್ನು ನೀಡಲಾಗಿದೆ. ವೈದ್ಯಕೀಯ ಸೌಲಭ್ಯಗಳಿಗಾಗಿ ವೈದ್ಯರ ತಂಡಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಶಹೀದ್-ಎ-ಆಜಂ ಭಗತ್ ಸಿಂಗ್ ಸ್ಮಾರಕದ ಎರಡೂ ಗೇಟ್‌ಗಳಲ್ಲಿ 24 ಗಂಟೆಗಳ ಕಾಲ ನಿಗಾವನ್ನು ಇಡಲಾಗುತ್ತಿದೆ. ಪೊಲೀಸ್‌ ನಿಯೋಜನೆ ಹೆಚ್ಚಳ ಮಾಡಲಾಗಿದೆ. ಖಟ್ಕರ್‌ಕಲನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಒಂದು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ, ಬಿಎಸ್‌ಇಬಿ ಬೋರ್ಡ್ ಖಟ್ಕರ್‌ಕಲನ್, ಸರ್ಕಾರಿ ಹೈಸ್ಕೂಲ್ ಖಟ್ಕರ್‌ಕಲನ್, ಭಾಯಿ ಸಂಗತ್ ಸಿಂಗ್ ಖಾಲ್ಸಾ ಕಾಲೇಜುಗಳ ಸ್ಥಳವಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

Recommended Video

ಕಾಂಗ್ರೆಸ್ ಪಾದಯಾತ್ರೆನ ಬೀದಿ ನಾಟಕಕ್ಕೆ ಹೊಲಿಸಿಬಿಟ್ಟರು ಸದಾನಂದ ಗೌಡ್ರು! | Part 2 | Oneindia Kannada

English summary
Punjab Assembly Elections: Bhagwant Mann to Resign Post of Sangrur MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X