• search
 • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಲೆ, ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಿಸಿದ ಅಸ್ಸಾಂ, ಪಂಜಾಬ್

|

ಚಂಡಿಗಢ, ಮೇ 7: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಹೊರಬಂದು ಶಾಲೆ ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರಗಳು ಚಿಂತಿಸುತ್ತಿದೆ. ದೇಶಾದ್ಯಂತ ದಿನದಿಂದ ದಿನಕ್ಕೆ ಸೋಂಕು ಹರಡುತ್ತಿರುವ ಹಿನ್ನೆಲೆ, ಮುಂಜಾಗ್ರತೆ ಕ್ರಮವಾಗಿ ಸದ್ಯಕ್ಕೆ ಶಾಲೆ-ಕಾಲೇಜುಗಳು ತೆರೆಯದಂತೆ ನೋಡಿಕೊಳ್ಳುತ್ತಿದೆ.

   ಅಪ್ಪನಿಗಿಂತ ನಾನೇನ್ ಕಮ್ಮಿನಾ ಅನ್ನೋ ರೀತಿ ಕೆಲಸ ಮಾಡ್ತಿದ್ದಾರೆ ಶಾಸಕ ಜಮೀರ್ ಖಾನ್ ಪುತ್ರ | Oneindia Kannada

   ಕೆಲವು ರಾಜ್ಯಗಳಲ್ಲಿ 10 ಮತ್ತು 12ನೇ ತರಗತಿಗಳಿಗೆ ನಡೆಯಬೇಕಿದ್ದ ಪರೀಕ್ಷೆ ರದ್ದಾಗಿದೆ. ಇದೀಗ, ಅಸ್ಸಾಂ ಮತ್ತು ಪಂಜಾಬ್‌ ಸರ್ಕಾರ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಬೇಸಿಗೆ ರಜೆ ನೀಡಲು ತೀರ್ಮಾನಿಸಿದೆ.

   ಇಂದೋರ್‌ನಲ್ಲಿ 31 ಪೊಲೀಸರಿಗೆ ಕೊರೊನಾ ಸೋಂಕು ದೃಢ

   ಮೇ 1ರಿಂದ ಮೇ 31ರವರೆಗೂ ಅಸ್ಸಾಂನಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಚಿವ ಹಿಮಂತ್ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

   ಆ ಕಡೆ ಪಂಜಾಬ್‌ ರಾಜ್ಯದಲ್ಲೂ ಮೇ 15 ರಿಂದ ಜೂನ್ 15ರ ವರೆಗೂ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.

   ನಿಗದಿತ ದಿನಾಂಕಕ್ಕಿಂತಲೂ ಮೊದಲೇ ಈ ಎರಡು ರಾಜ್ಯಗಳು ಬೇಸಿಗೆ ರಜೆ ಪ್ರಕಟ ಮಾಡಲಾಗಿದೆ. ಇನ್ನು ಪಂಜಾಬ್‌ನಲ್ಲಿ ಈವರೆಗೂ 1526 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 27 ಜನರು ಸಾವನ್ನಪ್ಪಿದ್ದಾರೆ.

   ಅಸ್ಸಾಂನಲ್ಲಿ 46 ಜನರಿಗೆ ಸೋಂಕು ಪತ್ತೆಯಾಗಿತ್ತು. ಈವರೆಗೂ 35 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ.

   English summary
   Punjab and Assam Government has decided to declare summer vacation in schools colleges and universities
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X