ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್: ಶೇ.81ರಷ್ಟು ಕೊರೊನಾ ಸೋಂಕಿತರಲ್ಲಿ ರೂಪಾಂತರಿ ವೈರಸ್!

|
Google Oneindia Kannada News

ಚಂಡೀಘರ್, ಮಾರ್ಚ್ 23: ಪಂಜಾಬ್‌ನಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೊಸ ಆತಂಕವನ್ನು ಸೃಷ್ಟಿಸುತ್ತಿದೆ. 401 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಈ ಪೈಕಿ ಶೇ.81ರಷ್ಟು ಸೋಂಕಿತರಲ್ಲಿ ಇಂಗ್ಲೆಂಡ್ ಮೂಲದ ರೂಪಾಂತರಿ ವೈರಸ್ ಪತ್ತೆಯಾಗಿದೆ.

ಜನವರಿ 1 ರಿಂದ ಮಾರ್ಚ್ 10ರವರೆಗೂ 401 ಕೊರೊನಾವೈರಸ್ ಸೋಂಕಿತರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೊವಿಡ್-19 ಸೋಂಕಿನ ಮಾದರಿ ತಪಾಸಣೆಯ ವರದಿ ಹೊಸ ಆತಂಕ ಹುಟ್ಟು ಹಾಕಿದೆ. 401 ಮಾದರಿಯಲ್ಲಿ 326 ಸೋಂಕಿತರು ಇಂಗ್ಲೆಂಡ್ ಮೂಲದ ರೂಪಾಂತರ ವೈರಸ್ B.1.1.7 ತಳಿಯು ಪತ್ತೆಯಾಗಿದೆ ಎಂದು ರಾಜ್ಯ ಕೊವಿಡ್-19 ತಜ್ಞರ ಸಮಿತಿ ಮುಖ್ಯಸ್ಥ ಡಾ. ಕೆ.ಕೆ. ತಲ್ವಾರ್ ತಿಳಿಸಿದ್ದಾರೆ.

ರೂಪಾಂತರ ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಕೊವಿಶೀಲ್ಡ್ ಲಸಿಕೆಯು ಪರಿಣಾಮಕಾರಿ ಆಗಿದೆ ಎಂದು ಕೊವಿಡ್-19 ತಜ್ಞರ ಸಮಿತಿ ಮುಖ್ಯಸ್ಥ ತಲ್ವಾರ್ ಅವರು ಮಾಹಿತಿ ನೀಡಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.

Punjab: 81 percent of Coronavirus Samples Shows New UK Variant Virus

ಶರವೇಗದಲ್ಲಿ ಹರಡುವ ರೂಪಾಂತರಿ ವೈರಸ್:

ಕೊರೊನಾವೈರಸ್ ಸಾಮಾನ್ಯ ತಳಿಯೊಂದಿಗೆ ಹೋಲಿಕೆ ಮಾಡಿದಾಗ ಇಂಗ್ಲೆಂಡ್ ಮೂಲದ ರೂಪಾಂತರಿ ವೈರಸ್ ಹೆಚ್ಚು ಕ್ಷಿಪ್ರಗತಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಇಂಗ್ಲೆಂಡಿನಲ್ಲಿ ಶೇ.98ರಷ್ಟು ಸೋಂಕಿತರಲ್ಲಿ ಇದೇ B.1.1.7 ತಳಿಯ ರೂಪಾಂತರಿ ವೈರಸ್ ಪತ್ತೆಯಾಗಿದೆ. ಸ್ಪೇನಿನಲ್ಲಿ ಶೇ.90ರಷ್ಟು ಇದೇ ತಳಿಯ ವೈರಸ್ ಪತ್ತೆಯಾಗಿದೆ. ಇಂಗ್ಲೆಂಡ್ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರ ಪ್ರಕಾರ, ಈ ಕೊವಿಡ್-19 ತಳಿಯು ಸಾಮಾನ್ಯ ರೋಗಾಣುವಿಗಿಂತ ಶೇ.70ರಷ್ಟು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ.

ಸೋಂಕು ಹರಡುವಿಕೆ ಸರಪಳಿ ಕತ್ತರಿಸಲು ಲಸಿಕೆ ಅಗತ್ಯ:

ಪಂಜಾಬ್‌ನಲ್ಲಿ ಕೊರೊನಾವೈರಸ್ ರೂಪಾಂತರಿ ಸೋಂಕು ಹರಡುವಿಕೆ ವೇಗವನ್ನು ನಿಯಂತ್ರಿಸಬೇಕು. ಸೋಂಕು ಹರಡುವಿಕೆಯ ಈ ಸರಪಳಿಯನ್ನು ಕತ್ತರಿಸುವುದಕ್ಕೆ ಪ್ರಜೆಗಳಲ್ಲೆ ಲಸಿಕೆ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

English summary
Punjab: 81 percent of Coronavirus Samples Shows New UK Variant Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X