India
  • search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೃತಸರದ ಗೋಲ್ಡನ್ ಟೆಂಪಲ್‌ನ ಹೊರಗೆ ಖಲಿಸ್ತಾನ್ ಪರ ಘೋಷಣೆ

|
Google Oneindia Kannada News

ಅಮೃತಸರ ಜೂನ್ 6: ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ಜರ್ನೈಲ್ ಭಿಂದ್ರನ್‌ವಾಲೆ ಅವರ ಪರ ಘೋಷಣೆಗಳನ್ನು ಕೂಗಲಾಗಿರುವುದು ಇಂದು ಬೆಳಕಿಗೆ ಬಂದಿದೆ. ಜೊತೆಗೆ ಜನರ ಗುಂಪಿನಿಂದ ಖಲಿಸ್ತಾನ್ ಪೋಸ್ಟರ್‌ಗಳನ್ನು ಎತ್ತಿ ಹಿಡಿದಿರುವುದು ವರದಿಯಾಗಿದೆ.

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಸರ್ಕಾರ ರಚನೆಯಾದಾಗಿನಿಂದ ಟೀಕೆಗೆ ಗುರಿಯಾಗುತ್ತಲಿದೆ. ಈ ವರ್ಷದ ಮಾರ್ಚ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯದಲ್ಲಿ ಸರ್ಕಾರ ರಚಿಸಿತು. ಅದಾದ ಬಳಿಕ ಪಂಜಾಬ್‌ನಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಂದಾಗಿ ಸುದ್ದಿಯಲ್ಲಿದೆ.

ಸಿಧು ಮೂಸೆವಾಲ ಹತ್ಯೆ, 3ನೇ ಆರೋಪಿ ಬಂಧನಸಿಧು ಮೂಸೆವಾಲ ಹತ್ಯೆ, 3ನೇ ಆರೋಪಿ ಬಂಧನ

 'ಖಲಿಸ್ತಾನ್ ಬೆಂಬಲಿಗರು ರಾಜ್ಯಕ್ಕೆ ಪ್ರವೇಶ'

'ಖಲಿಸ್ತಾನ್ ಬೆಂಬಲಿಗರು ರಾಜ್ಯಕ್ಕೆ ಪ್ರವೇಶ'

ಪಂಜಾಬ್ ಅನ್ನು ಕೆಟ್ಟ ಬೆಳಕಿನಲ್ಲಿ ಇರಿಸಿದ ಮೊದಲ ಪ್ರಮುಖ ಘಟನೆಯೆಂದರೆ ಮೊಹಾಲಿಯಲ್ಲಿರುವ ರಾಜ್ಯ ಪೊಲೀಸ್‌ನ ಗುಪ್ತಚರ ವಿಭಾಗದ ಪ್ರಧಾನ ಕಛೇರಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ (RPG) ದಾಳಿ ಮಾಡಿರುವುದು. ಇದರಿಂದ ಎಎಪಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಯಿತು. ಇದಾದ ಬಳಿಕ ಎರಡನೇ ಘಟನೆಯೆಂದರೆ 28 ವರ್ಷದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನ ಅವರ ಹತ್ಯೆಯಾಗಿರುವುದು.

ಇದರ ಮಧ್ಯೆ ಗಮನಾರ್ಹ ವಿಚಾರ ಅಂದರೆ ಪಂಜಾಬ್‌ನಲ್ಲಿ ಹಾಸ್ಯನಟ-ರಾಜಕಾರಣಿ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಖಲಿಸ್ತಾನ್ ಬೆಂಬಲಿಗರು ರಾಜ್ಯದಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಿಂದ ಹೊರಹಾಕಿದ್ದಾರೆ ಎನ್ನುವುದು ವಿಪಕ್ಷಗಳ ದಾಳಿಗೆ ಪ್ರಮುಖ ಕಾರಣವಾಗಿದೆ.

ಖಲಿಸ್ತಾನ್ ಪರ ಘೋಷಣೆ

ಅಮೃತಸರದ ದೇವಾಲಯದ ಸಂಕೀರ್ಣದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಆಪರೇಷನ್ ಬ್ಲೂ ಸ್ಟಾರ್‌ನ 38 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೋಲ್ಡನ್ ಟೆಂಪಲ್‌ನ ಹೊರಗಿನ ಇಂದು ಖಲಿಸ್ತಾನ್ ಪರ ಘೋಷಣೆ ಕೂಗಲಾಗಿದೆ. ಇದು ಎಎಪಿ ಸರ್ಕಾರದ ವಿರುದ್ಧ ವಿಪಕ್ಷಗಳ ದಾಳಿಗೆ ಮತ್ತೊಂದು ಬಹುದೊಡ್ಡ ಕಾರಣವಾಗಿದೆ.

ಆಪರೇಷನ್ ಬ್ಲೂ ಸ್ಟಾರ್ 38 ವರ್ಷಗಳನ್ನು ಪೂರೈಸಿದೆ. ಆಪರೇಷನ್ ಬ್ಲೂ ಸ್ಟಾರ್ ದೇಶದ ಇತಿಹಾಸದಲ್ಲಿ ಸೇನೆಯು ನಡೆಸಿದ ಅತಿದೊಡ್ಡ ಮತ್ತು ರಕ್ತಸಿಕ್ತ ದೇಶೀಯ ಕಾರ್ಯಾಚರಣೆಯಾಗಿದೆ. ಇದರ ಅಡಿಯಲ್ಲಿ, ಅಮೃತಸರದ ಗೋಲ್ಡನ್ ಟೆಂಪಲ್ ಅನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು 1984 ರಲ್ಲಿ ಜೂನ್ 1 ರಿಂದ ಜೂನ್ 8 ರವರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು.

1984 ರಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಹಾನಿಗೊಳಗಾದ ಗುರು ಗ್ರಂಥ ಸಾಹಿಬ್ನ ಪವಿತ್ರ ರೂಪವನ್ನು ಶ್ರೀ ಅಕಾಲ್ ತಖ್ತ್ ಬಳಿಯ ಗುರುದ್ವಾರ ಶಹೀದ್ ಬಾಬಾ ಗುರುಬಕ್ಷ್ ಸಿಂಗ್ನಲ್ಲಿ ಇರಿಸಲಾಗಿದೆ ಎಂದು ಎಸ್ಜಿಪಿಸಿಯ ಹರ್ಜಿಂದರ್ ಸಿಂಗ್ ಧಾಮಿ ಹೇಳಿದರು. ಜೂನ್ 2 ರಿಂದ ಜೂನ್ 6 ರವರೆಗೆ ಇದನ್ನು ನೋಡಲು ಅವಕಾಶ ನೀಡಲಾಗಿದೆ.

 ಬಿಗಿ ಭದ್ರತೆಗೆ ಸಿಎಂ ಸೂಚನೆ

ಬಿಗಿ ಭದ್ರತೆಗೆ ಸಿಎಂ ಸೂಚನೆ

ಕಳೆದ ವಾರ, ಮಾನ್ ಅವರು ಆಪರೇಷನ್ ಬ್ಲೂ ಸ್ಟಾರ್ ವಾರ್ಷಿಕೋತ್ಸವದ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು ಮತ್ತು ಶಾಂತಿಯನ್ನು ಕಾಪಾಡಲು ಪೊಲೀಸರನ್ನು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು. ರಾಜ್ಯಾದ್ಯಂತ ಜೂನ್ 6 ರ ಮೊದಲು ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಅವರು ಪೊಲೀಸ್ ಮತ್ತು ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಇಂದು ಅಮೃತಸರ ಗೋಲ್ಡ್‌ನ್ ಟೆಂಬಲ್‌ನಲ್ಲಿ ಖಲಿಸ್ತಾಣ್ ಪರ ಘೋಷಣೆಗಳನ್ನು ಕೂಗಲಾಗಿದೆ.

 ಪಂಜಾಬ್‌ನಲ್ಲಿ ನಡೆದ ಅಪರಾಧಗಳ ಪಟ್ಟಿ-

ಪಂಜಾಬ್‌ನಲ್ಲಿ ನಡೆದ ಅಪರಾಧಗಳ ಪಟ್ಟಿ-


ಜೂನ್ 5- ಅಹಮದ್‌ಗಢದ ಬಳಿ ಶಿರಚ್ಛೇದಿತ ವ್ಯಕ್ತಿ ಪತ್ತೆ

ಜೂನ್ 3- ಮೊಗಾದ ಬಹನಿ ಕಲಾನ್‌ನಲ್ಲಿ ಕತ್ತಿಗಳು ಮತ್ತು ಇತರ ಹರಿತವಾದ ಆಯುಧಗಳಿಂದ ಹಲ್ಲೆಗೊಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು

ಜೂನ್ 1- ಲುಧಿಯಾನ ಬಳಿಯ ಹೆದ್ದಾರಿಯ ಲಧೋವಲ್ ಟೋಲ್ ತಡೆಗೋಡೆಯ ಬಳಿ ಮೂವರು ವ್ಯಕ್ತಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪೆಪ್ಸು ರಸ್ತೆ ಸಾರಿಗೆ ಸಂಸ್ಥೆಯ (ಪಿಆರ್‌ಟಿಸಿ) ಬಸ್‌ನ ಕಂಡಕ್ಟರ್‌ನಿಂದ 10,000 ಮತ್ತು ಚಿನ್ನದ ಸರವನ್ನು ದೋಚಿದರು.

ಮೇ 30- ಪಟಿಯಾಲಾ ಜಿಲ್ಲೆಯ ಭುನೇರ್‌ಹೆರಿ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಕೊಲ್ಲಲಾಯಿತು.

ಮೇ 29- ಗಾಯಕ-ರಾಜಕಾರಣಿ ಸಿದ್ದು ಮೂಸೆವಾಲಾ ಅವರ ಬರ್ಬರ ಹತ್ಯೆ

ಮೇ 9- ಮೊಹಾಲಿಯ ಸೆಕ್ಟರ್ 77 ನಲ್ಲಿರುವ ರಾಜ್ಯ ಪೊಲೀಸ್‌ನ ಗುಪ್ತಚರ ವಿಭಾಗದ ಪ್ರಧಾನ ಕಛೇರಿಯಲ್ಲಿ ರಾಕ್‌ಜೆಟ್-ಚಾಲಿತ ಗ್ರೆನೇಡ್ (RPG) ಅನ್ನು ಹಾರಿಸಲಾಯಿತು

ಏಪ್ರಿಲ್ 29- ಪಂಜಾಬ್‌ನ ಪಟಿಯಾಲದಲ್ಲಿ ಹಿಂಸಾಚಾರದಿಂದ ಒಬ್ಬ ಪೊಲೀಸ್ ಅಧಿಕಾರಿ ಸೇರಿಂದರೆ ಕನಿಷ್ಠ ಇಬ್ಬರು ಗಾಯಗೊಂಡರು.

English summary
It has been revealed today that pro-Khalistan slogans have been shouted at the entrance of the Golden Temple in Amritsar. This has helped the opposition parties launch an attack on the AAP government. Here is List of crimes in Punjab after AAP came to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X