ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಖಿತಾ ತೋಮರ್ ಕೊಲೆ ಪ್ರಕರಣ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಹರಿಯಾಣ, ಮಾರ್ಚ್ 26: ಕಳೆದ ಅಕ್ಟೋಬರ್‌ನಲ್ಲಿ 21 ವರ್ಷದ ಯುವತಿಯನ್ನು ಗುಂಡಿಟ್ಟು ಕೊಂದಿದ್ದ ಇಬ್ಬರು ಆರೋಪಿಗಳಿಗೆ ಹರಿಯಾಣದ ಫರಿದಾಬಾದ್ ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.

ಕಳೆದ ಅಕ್ಟೋಬರ್‌ನಲ್ಲಿ ಬಲ್ಲಾಬ್‌ಘರ್ ನಲ್ಲಿ ನಿಖಿತಾ ತೋಮರ್ ಎಂಬ ಯುವತಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ಪ್ರಕರಣ ಸಂಬಂಧ ತೌಸಿಫ್ ಹಾಗೂ ಆತನ ಸಹವರ್ತಿ ರೆಹಾನ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಪಿತೂರಿ, ಅಪಹರಣ, ನರಹತ್ಯೆ ಆರೋಪದಲ್ಲಿ ಇಬ್ಬರಿಗೂ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಿಗೆ ಶಸ್ತ್ರಾಸ್ತ್ರ ಸಾಗಾಟ ಮಾಡಿದ ಆರೋಪದಲ್ಲಿ ಮೊಹಮದ್ ಅಜರುದ್ದಿನ್ ಎಂಬ ಮೂರನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಮಾಡದ ತಪ್ಪಿಗೆ 20 ವರ್ಷ ಸೆರೆವಾಸ; ಸುಳ್ಳು ಆರೋಪದಿಂದ ಕೊನೆಗೂ ಮುಕ್ತಿಮಾಡದ ತಪ್ಪಿಗೆ 20 ವರ್ಷ ಸೆರೆವಾಸ; ಸುಳ್ಳು ಆರೋಪದಿಂದ ಕೊನೆಗೂ ಮುಕ್ತಿ

ಕಳೆದ ಅಕ್ಟೋಬರ್ 26ರಂದು ನಿಖಿತಾ ತೋಮರ್ ಎಂಬ ಯುವತಿಯನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಅಂದು ಸಂಜೆಯೇ ತೌಸಿಫ್‌ನನ್ನು ಬಂಧಿಸಲಾಗಿತ್ತು. ಮಾರನೇ ದಿನ ರೆಹಾನ್ ಹಾಗೂ ಮುಂದಿನ ದಿನ ಅಜರುದ್ದಿನ್‌ನನ್ನು ಬಂಧಿಸಲಾಗಿತ್ತು. ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಖಿತಾ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಸಮಯ ಬಲವಂತವಾಗಿ ಆಕೆಯನ್ನು ವಾಹನದಲ್ಲಿ ಎಳೆದುಕೊಂಡು ಹೋಗಿ ಕೊಲೆ ಮಾಡಲಾಗಿತ್ತು. ಇವೆಲ್ಲವೂ ಸಿಸಿ ಟಿ.ವಿಯಲ್ಲಿ ದಾಖಲಾಗಿತ್ತು.

Nikita Tomar Murder Convicts Sentenced To Life Imprisonment

ತಮ್ಮ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿ ಧರ್ಮ ಬದಲಾಯಿಸುವಂತೆ ತೌಸಿಫ್ ಒತ್ತಾಯಿಸುತ್ತಿದ್ದನು ಎಂದು ಯುವತಿ ಮನೆಯವರು ದೂರಿದ್ದರು. ಎಸ್‌ಐಟಿ ಈ ಪ್ರಕರಣದ ತನಿಖೆ ಕೈಗೊಂಡು 700 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿತ್ತು. ನಿಖಿತಾ ಸಾವಿಗೆ ನ್ಯಾಯ ಸಿಗುವಂತೆ ಒತ್ತಾಯಿಸಿ ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಇಬ್ಬರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

English summary
Fast track court in Haryana’s Faridabad on Friday sentenced two men to life imprisonment for shooting a 21 year old college student at point-blank range outside her college in Ballabhgarh in October last year,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X