ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತ-ಪಾಕಿಸ್ತಾನ ಸ್ನೇಹದಿಂದ ವ್ಯಾಪಾರ ವೃದ್ಧಿಯಾಗಲಿದೆ' ನವಜೋತ್ ಸಿಂಗ್ ಸಿಧು

|
Google Oneindia Kannada News

ನಿನ್ನೆ ಅಮೃತಸರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಧು, "ಪಾಕಿಸ್ತಾನದೊಂದಿಗೆ ನಮ್ಮ ಸ್ನೇಹವನ್ನು ಹೆಚ್ಚಿಸಿದರೆ ನಮ್ಮ ವ್ಯವಹಾರವೂ ಹೆಚ್ಚಾಗುತ್ತದೆ. ಈ ಹಿಂದೆ ನಮ್ಮ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದಿಂದ ಪಾಕಿಸ್ತಾನಕ್ಕೆ ಶಾಂತಿ-ಸ್ನೇಹ ಬಸ್ ಸೇವೆಯನ್ನು ಪ್ರಾರಂಭಿಸಿದ್ದರು. ಅವರ ಯೋಜನೆಯನ್ನು ನಾನು ಮೆಚ್ಚುತ್ತೇನೆ" ಎಂದಿದ್ದಾರೆ.

ದೆಹಲಿಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಸಬೇಕು ಜೊತೆಗೆ ಹಲವಾಡು ಬೇಡಿಕೆಗಳೊಂದಿಗೆ ಇಂದು ಸಿಧು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯ ಮುಂದೆ ಪ್ರತಿಭಟನೆಯಲ್ಲಿ ಭಾಗಿಯಾದರು.

"ಕರಾಚಿ ಗಡಿ ತೆರೆದಿದ್ದರೆ, ಅವರು ವ್ಯಾಪಾರಕ್ಕಾಗಿ ಅಟ್ಟಾರಿ ಗಡಿಯನ್ನು ಏಕೆ ತೆರೆಯಬಾರದು? ಕೇಂದ್ರ ಸರ್ಕಾರ ಇದನ್ನು ತೆರೆದರೆ, ಅದು ಪಂಜಾಬ್‌ನ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಸ್ವಾಮಿನಾಥನ್ ವರದಿಯ ಪ್ರಕಾರ, ಕನಿಷ್ಠ ಬೆಂಬಲ ಬೆಲೆ ರೈತರಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ" ಎಂದು ಸಿದ್ದು ಪ್ರತಿಪಾದಿಸಿದರು.

ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಲಿಖಿತ ವ್ಯಾಪಾರ ಸಮರ ಜಾರಿಯಲ್ಲಿದೆ. ಮೊದಲು ಪಾಕಿಸ್ತಾನಕ್ಕೆ ಪಾಠ ಕಲಿಸಲು ಅದರ ಜತೆಗಿನ ಎಲ್ಲ ರಫ್ತು ವಹಿವಾಟನ್ನು ಭಾರತ ನಿಲ್ಲಿಸಿತು. ಪಾಕ್‌ಗೆ ನೀಡಿದ್ದ 'ಅತ್ಯಾಪ್ತ ರಾಷ್ಟ್ರ' ಸ್ಥಾನಮಾನ ರದ್ದುಪಡಿಸಿತು. ಬಳಿಕದ ತಿಂಗಳುಗಳಲ್ಲಿ ನಿಧಾನವಾಗಿ ಗಡಿಯಲ್ಲಿ ನಡೆಯುವ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬರಲಿದೆ ಎನ್ನುವಷ್ಟರಲ್ಲಿಯೇ ಜಮ್ಮು- ಕಾಶ್ಮೀರದಲ್ಲಿದ್ದ ಆರ್ಟಿಕಲ್‌ 370ಯನ್ನು ಭಾರತ ರದ್ದುಪಡಿಸಿತು. ಇದು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕೆಣಕಿದೆ. ಭಯೋತ್ಪಾದನೆಯನ್ನು ರಫ್ತು ಮಾಡಲು ಕಾಶ್ಮೀರವನ್ನು ಅವಲಂಬಿಸಿದ್ದ ಪಾಕ್‌, ಇದರಿಂದ ಹತಾಶಗೊಂಡು ಭಾರತದೊಂದಿಗೆ ಎಲ್ಲ ಬಗೆಯ ವ್ಯಾಪಾರ ವಹಿವಾಟನ್ನು ಬಂದ್‌ ಮಾಡುವುದಾಗಿ ಘೋಷಿಸಿದೆ.

 Navjot Singh Sidhu says India-Pakistan friendship will grow business

ಆದರೆ ಇಂಥ ವ್ಯಾಪಾರ ಸ್ಥಗಿತದಿಂದ ಭಾರತದಿಂದ ಹೆಚ್ಚು ನಷ್ಟವಾಗುತ್ತಿರುವುದು ಪಾಕಿಸ್ತಾನಕ್ಕೇ. 2018ರಲ್ಲಿ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ ಸಂಗ್ರಹಿಸಿದ ಡೇಟಾ ಪ್ರಕಾರ, ಎರಡೂ ದೇಶಗಳ ನಡುವಿನ ವಾಣಿಜ್ಯ ವಹಿವಾಟಿನ ಮೊತ್ತ 280 ಕೋಟಿ ಡಾಲರ್‌. ಇದರಲ್ಲಿ ಭಾರತದ ರಫ್ತಿನ ಮೊತ್ತ 230 ಕೋಟಿ ಡಾಲರ್‌ ಹಾಗೂ ಪಾಕಿಸ್ತಾನದ ಪಾಲು 50 ಕೋಟಿ ಡಾಲರ್‌. ಅಂದರೆ, ಪಾಕಿಸ್ತಾನ ನಮಗೆ ಕಳಿಸುವುದಕ್ಕಿಂತ ಐದು ಪಟ್ಟು ಹೆಚ್ಚು ವಸ್ತುಗಳನ್ನು ನಾವು ಅಲ್ಲಿಗೆ ರಫ್ತು ಮಾಡುತ್ತಿದ್ದೇವೆ. ವ್ಯಾಪಾರ ಬಂದ್‌ನಿಂದ ಇಷ್ಟನ್ನು ಅದು ಕಳೆದುಕೊಳ್ಳುತ್ತಿದೆ.

ಪಾಕಿಸ್ತಾನದ ಮೇಲೆ ಭಾರತ ಅವಲಂಬಿಸಿರುವುದಕ್ಕಿಂತಲೂ ಹೆಚ್ಚಾಗಿ ಭಾರತದ ಮೇಲೆ ಪಾಕಿಸ್ತಾನ ಅವಲಂಬಿಸಿದೆ. ಭಾರತದ ಒಟ್ಟಾರೆ ರಫ್ತಿನಲ್ಲಿ 0.73% ಮಾತ್ರವೇ ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ ಪಾಕಿಸ್ತಾನದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ಭಾರತದ ಪಾಲು 1.62%. ಆಮದು ವಿಚಾರಕ್ಕೆ ಬಂದರೆ, ಭಾರತ ಇನ್ನಷ್ಟು ಸ್ವಾವಲಂಬಿ. 2018ರಲ್ಲಿ ಭಾರತಕ್ಕೆ ಆದ ಒಟ್ಟಾರೆ ಆಮದಿನಲ್ಲಿ ಪಾಕಿಸ್ತಾನದ ಪಾಲು 0.09%ದಷ್ಟಿದ್ದರೆ, ಪಾಕಿಸ್ತಾನದ ಒಟ್ಟಾರೆ ಆಮದಿನಲ್ಲಿ ಭಾರತದ ಪಾಲು 3.9%ದಷ್ಟಿತ್ತು. ಭಾರತಕ್ಕೆ ಪಾಕಿಸ್ತಾನದಿಂದ ಬರುವ ಸಾಮಗ್ರಿಗಳಲ್ಲೆಲ್ಲ ಹೆಚ್ಚು ಪ್ರಮಾಣದಲ್ಲಿ ಬರುವುದೆಂದರೆ ಸಿಮೆಂಟ್‌.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

ಪಾಕ್‌ನಿಂದ ಭಾರತ ಪಡೆಯುವ ಇನ್ಯಾವುದೇ ಸಾಮಗ್ರಿಯ ಪ್ರಮಾಣ ಭಾರತದ ಆಮದಿನ 10% ದಾಟುವುದಿಲ್ಲ. ಭಾರತದಿಂದ ಪಾಕಿಸ್ತಾನ ತರಿಸಿಕೊಳ್ಳುವ 40 ಬಗೆಯ ಅವಶ್ಯಕ ವಸ್ತುಗಳ ಪ್ರಮಾಣ ಆ ದೇಶದ ಒಟ್ಟು ಆಮದಿನ 10%ಗಿಂತಲೂ ಅಧಿಕ. ಇದರಲ್ಲಿ 17 ಅವಶ್ಯಕ ವಸ್ತುಗಳು ಭಾರತದಿಂದ ಪಾಕ್‌ ಪಡೆಯುವ ಒಟ್ಟಾರೆ ಸಾಮಗ್ರಿಯ ನಾಲ್ಕನೇ ಒಂದು ಭಾಗದಷ್ಟಿವೆ. ಅಂದರೆ ವ್ಯಾಪಾರ ನಿರ್ಬಂಧ ಮುಂದುವರಿಸಿದರೆ ಈ ಅವಶ್ಯಕ ಸಾಮಗ್ರಿಗಳು ಅಲ್ಲಿ ದುಬಾರಿಯಾಗಲಿವೆ. ಹೀಗಾಗಿ ಭಯೋತ್ಪಾದನೆ ಮೂಲಕ ಭಾರತ ಗಡಿ ಭಾಗದಲ್ಲಿ ನೂರಾರು ಯೋಧರ ಸಾವಿಗೆ ಕಾರಣವಾದ ಪಾಕ್‌ಗೆ ಪಾಠ ಕಲಿಸಲು ಭಾರತ ಮುಂದಾಗಿರುವ ಸಿಧು ಈ ಹೇಳಿಕೆ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿಭಟನೆ ವೇಳೆ ನಿರುದ್ಯೋಗ, ಅಕ್ರಮ ಮರಳುಗಾಋಇಕೆ ತಡೆಗೆ ಒತ್ತಾಯಿಸಿದ್ದಾರೆ.

English summary
Punjab Pradesh Congress Committee president Navjot Singh Sidhu on Saturday said that India-Pakistan friendship will increase trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X