• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವಜೋತ್ ಸಿಂಗ್‌ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗುವ ಸಾಧ್ಯತೆ

|
Google Oneindia Kannada News

ಚಂಡೀಗಢ, ಜು.15: ನವಜೋತ್ ಸಿಂಗ್ ಸಿಧುರನ್ನು ಶೀಘ್ರದಲ್ಲೇ ಕಾಂಗ್ರೆಸ್ ಪಂಜಾಬ್ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷಕ್ಕೆ ಯಾವುದೇ ತೊಂದರೆ ಉಂಟಾಗದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆ ದೀರ್ಘಕಾಲದಿಂದ ವಾಕ್ಸಮರ ನಡೆಸುತ್ತಿರುವ ನವಜೋತ್ ಸಿಂಗ್ ಸಿಧು, ಸುನೀಲ್ ಜಕ್ಕರ್ ಸ್ಥಾನವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ನವಜೋತ್‌ 8 ಲಕ್ಷ ವಿದ್ಯುತ್‌ ತೆರಿಗೆ ಬಾಕಿ: ಪಂಜಾಬ್‌ ಸಿಎಂ ವಿರುದ್ದ ಅಕಾಲಿದಳ ತರಾಟೆನವಜೋತ್‌ 8 ಲಕ್ಷ ವಿದ್ಯುತ್‌ ತೆರಿಗೆ ಬಾಕಿ: ಪಂಜಾಬ್‌ ಸಿಎಂ ವಿರುದ್ದ ಅಕಾಲಿದಳ ತರಾಟೆ

ಹಾಗೆಯೇ ಇನ್ನಿಬ್ಬರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಈ ಪೈಕಿ ಒಬ್ಬರು ದಲಿತ ಸಮುದಾಯದವರು ಮತ್ತೋರ್ವರು ಹಿಂದೂ ಧರ್ಮಕ್ಕೆ ಸೇರಿದವರಾಗಿರಲಿದ್ದಾರೆ ಎನ್ನಲಾಗಿದೆ.


ರಾಜಿ ಮಾಡಿಕೊಳ್ಳುವಿಕೆಯ ಭಾಗವಾಗಿ ಅಮರಿಂದರ್ ಸಿಂಗ್ ಮಂತ್ರಿ ಮಂಡಳಿಯನ್ನು ಸಹ ಕೆಲವು ಬದಲಾವಣೆ ತರುವ ಸಾಧ್ಯತೆಯಿದೆ. ಚರಣಜಿತ್ ಚನ್ನಿ ಮತ್ತು ಗುರ್‌ಪ್ರೀತ್ ಕಾಂಗರ್ ವಜಾಗೊಳ್ಳುವ ಸಾಧ್ಯತೆಯಿದೆ. ವಿಧಾನಸಭೆ ಸ್ಪೀಕರ್ ರಾಣಾ ಕೆ.ಪಿ.ಸಿಂಗ್, ಶಾಸಕ ಮತ್ತು ದಲಿತ ಮುಖಂಡ ರಾಜ್ ಕುಮಾರ್ ವರ್ಕಾ ಸಂಪುಟ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ರಚಿಸಿದ ಮೂವರು ಸದಸ್ಯರ ಸಮಿತಿಗೆ ಶಾಸಕರು ಕಳೆದ ತಿಂಗಳು ಮಂಡಿಸಿದ ಬೇಡಿಕೆಗಳಲ್ಲಿ ದಲಿತ ಸಮುದಾಯದ ಪ್ರಾತಿನಿಧ್ಯವೂ ಒಂದು. ಸಮಿತಿಯು ತನ್ನ ಚರ್ಚೆಯ ಭಾಗವಾಗಿ ಎರಡೂ ನಾಯಕರನ್ನು ಭೇಟಿ ಮಾಡಿದೆ.

ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಒಂದು ವಾರದ ನಂತರ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು ನಡುವಿನ ರಾಜಿ ಸುದ್ದಿ ಬಂದಿದೆ. ಸಭೆಯ ನಂತರ ಅಮರಿಂದರ್ ಸಿಂಗ್ "ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರ" ವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Navjot Singh Sidhu is likely to be appointed as chief of the Congress' Punjab unit shortly, sources said Thursday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X