ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಧು ಕ್ರಮೇಣವಾಗಿ ಪಂಜಾಬ್ ಜನರೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೆ: ಕಾಂಗ್ರೆಸ್ ಸಂಸದ

|
Google Oneindia Kannada News

ಚಂಡೀಗಢ, ಫೆಬ್ರವರಿ 21: ಪಂಜಾಬ್‌ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕ್ರಮೇಣವಾಗಿ ಜನರ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಕಳೆದ ಐದು ವರ್ಷಗಳಿಂದ ಜನರ ನಡುವೆ ಇರಲಿಲ್ಲ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧವೇ ಕಟುವಾದ ಟೀಕೆ ಜನರನ್ನು ಅಸಮಾಧಾನಗೊಳಿಸಿದೆ. ಇದು ವಿಧಾನಸಭಾ ಚುನಾವಣೆಯ ಗೆಲುವಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸಿಧು ಬಗ್ಗೆ ಜನರಲ್ಲಿ ಅಸಮಾಧಾನವಿದೆ, ಕಳೆದ ಐದು ವರ್ಷಗಳಿಂದ ಪಂಜಾಬ್ ಜನತೆಗಾಗಿ ಸಮಯವನ್ನು ಮೀಸಲಿಟ್ಟಿಲ್ಲ, ಜನರು ಅವರು ಮಾತನಾಡುವ ರೀತಿಯನ್ನೂ ಕೂಡ ಇಷ್ಟ ಪಡುತ್ತಿಲ್ಲ ಎಂದರು.

Navjot Singh

ಡ್ರಗ್ಸ್ ಹಾಗೂ ಅತ್ಯಾಚಾರ ಸೇರಿದಂತೆ ಹಲವಾರು ರಾಜ್ಯಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿರುವ ಸಿಧು ಅವರ ಭಾಷೆ ಬಳಕೆ ಕುರಿತು ಅಸಮಾಧಾನವಿದೆ.

ಸಿಧು ದೊಡ್ಡ ನಾಯಕ, ಬಹಳಷ್ಟು ಮಂದಿ ಅವರನ್ನು ನೋಡುತ್ತಾರೆ, ಅವರನ್ನು ಅನುಸರಿಸುತ್ತಾರೆ, ವಿರೋಧ ಪಕ್ಷಗಳು ಸೇರಿದಂತೆ ನಾಯಕರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಬಾರದು. ಅಂತಹ ನಾಯಕನ ಭಾಷಣದಲ್ಲಿ ಶಿಸ್ತು ಇರಬೇಕು ಏಕೆಂದರೆ ಅವರು ರಾಜ್ಯ ಮತ್ತು ದೇಶವನ್ನು ಮುನ್ನಡೆಸಬೇಕು ಎಂದರು.

ಪಂಜಾಬ್ ಚುನಾವಣೆ ಬಳಿಕ ಬಿಜೆಪಿಯೊಂದಿಗೆ ಶಿರೋಮಣಿ ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದ ಅಕಾಲಿದ, ಕೃಷಿ ಬಿಲ್ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮಧ್ಯೆ ಒಡಕು ಉಂಟಾಗಿತ್ತು.

ಈ ಬಗ್ಗೆ ಮಾತನಾಡಿದ ಬಿಕ್ರಮ್ ಮಜಿಥಿಯಾ, 'ನನ್ನ ಹೋರಾಟ ಪಂಜಾಬ್ ಜನರಿಗಾಗಿ. ಅಮೃತಸರ ಪೂರ್ವ ಭಾಗದ ಅಭಿವೃದ್ಧಿಯ ಅಗತ್ಯವಿದೆ. ಇದು ಅತ್ಯಂತ ಹಿಂದುಳಿದಿದ್ದು, ಬಡವರಿಗೆ ಕಲ್ಯಾಣ ಯೋಜನೆಗಳು ಸಿಗುತ್ತಿಲ್ಲ.

ಈ ಚುನಾವಣೆಯಲ್ಲಿ ಸತ್ಯ ಗೆಲ್ಲುತ್ತದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಜಿಥಿಯಾ, 'ಅಹಂಕಾರವನ್ನು ಸೋಲಿಸಲಾಗುವುದು, ಜನರು ಐದು ವರ್ಷಗಳಿಂದ ಕಾಂಗ್ರೆಸ್ ಅನ್ನು ನೋಡಿದ್ದಾರೆ, ಆದರೆ ಆ ಸರ್ಕಾರ ಬಡವರಿಗೆ ಏನನ್ನೂ ಮಾಡಿಲ್ಲ' ಎಂದು ಹೇಳಿದರು.

ಪಕ್ಷಕ್ಕೆ ಒಂದು ವೇಳೆ ಕಡಿಮೆ ಸಂಖ್ಯೆ ಬಂದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಿರುವ ಅವರು, ನಮಗೆ ಗೆಲುವಿನ ವಿಶ್ವಾಸವಿದೆ. ಪಂಜಾಬ್‌ನಲ್ಲಿ ಅಕಾಲಿದಳ-ಬಿಎಸ್‌ಪಿ ಮುಂದಿನ ಸರ್ಕಾರ ರಚನೆ ಮಾಡಲಿದೆ.

ಸಂಖ್ಯೆ ಕಡಿಮೆಯಾದರೆ ಬಿಜೆಪಿ ಬೆಂಬಲ ಪಡೆಯಲು ಪಕ್ಷ ನಿರ್ಧರಿಸಲಿದೆ. ಅದು ಸಂಖ್ಯಾಬಲದ ಮೇಲೆ ಅವಲಂಬಿತವಾಗಿದೆ. ಆದರೆ ಕಾಂಗ್ರೆಸ್ ನಮ್ಮ ನಂಬರ್-1 ರಾಜಕೀಯ ಶತ್ರು ಎಂದು ಹೇಳಿದ್ದಾರೆ.

ಈ ಬಾರಿ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಮಜಿತಾ ಮತ್ತು ಅಮೃತಸರ ಪೂರ್ವದಿಂದ ಸ್ಪರ್ಧಿಸುತ್ತಿದ್ದಾರೆ. ಅಮೃತಸರ ಪೂರ್ವ ಕ್ಷೇತ್ರದಿಂದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಅವರು ಕಣಕ್ಕಿಳಿದಿದ್ದಾರೆ.

Recommended Video

ವಿರಾಟ್ ನ ವೇದಿಕೆ ಮೇಲೆ ನೆನೆದು ಭಾವುಕರಾದ ಸಿರಾಜ್! | Oneindia Kannada

ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎಸ್‌ಎಡಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳ ಪೈಕಿ 20ರಲ್ಲಿ ಬಿಎಸ್‌ಪಿ ಸ್ಪರ್ಧಿಸುತ್ತಿದೆ.

English summary
Congress MP Gurjeet Singh Aujla on Sunday said the party's chief in Punjab Navjot Singh Sidhu has not been among people in the last five years and his use of sharp language against leaders has upset people, which are likely to affect his chances of victory in the assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X