ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹಾಲಿ ರಾಕೆಟ್ ದಾಳಿ ಪ್ರಕರಣ: ಪ್ರಮುಖ ಸಂಚುಕೋರನಿಗೆ ಐಎಸ್‌ಐ ಸಂಪರ್ಕ

|
Google Oneindia Kannada News

ಮೊಹಾಲಿ ಮೇ 13: ಮೊಹಾಲಿ ರಾಕೆಟ್ ದಾಳಿ ಪ್ರಕರಣ: ಮೊಹಾಲಿ ಗ್ರೆನೇಡ್ ದಾಳಿ ಪ್ರಕರಣವನ್ನು ಭೇದಿಸಿರುವುದಾಗಿ ಪಂಜಾಬ್ ಪೊಲೀಸರು ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಜಾಬ್ ಡಿಜಿಬಿ, ಮೊಹಾಲಿ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಲಖ್ಬೀರ್ ಸಿಂಗ್ ಲಾಂಡಾ ತರಣ್ ನಿವಾಸಿಯಾಗಿದ್ದು, ಇವರು 2017 ರಲ್ಲಿ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದರು.

ಹಿಮಾಚಲ: ವಿಧಾನಸಭೆಯ ಮುಖ್ಯ ದ್ವಾರಕ್ಕೆ ಖಲಿಸ್ತಾನ್ ಧ್ವಜ ಹಾರಿಸಿದ ಕಿಡಿಗೇಡಿಗಳುಹಿಮಾಚಲ: ವಿಧಾನಸಭೆಯ ಮುಖ್ಯ ದ್ವಾರಕ್ಕೆ ಖಲಿಸ್ತಾನ್ ಧ್ವಜ ಹಾರಿಸಿದ ಕಿಡಿಗೇಡಿಗಳು

ಲಾಂಡಾ ಹರೀಂದರ್ ಸಿಂಗ್ ರಿಂಡಾ ಅವರ ನಿಕಟ ಸಹವರ್ತಿಯಾಗಿದ್ದು, ರಿಂಡಾ ಅವರು ವಾಧವಾ ಸಿಂಗ್ ಐಎಸ್‌ಐಗೆ ಹತ್ತಿರದಲ್ಲಿದ್ದಾರೆ. ರಿಂಡಾ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಜಿಪಿ ಉಲ್ಲೇಖಿಸಿದ್ದಾರೆ. ಮೊಹಾಲಿ ದಾಳಿಯಲ್ಲಿ ಬಳಸಿದ ಆರ್‌ಪಿಜಿ ರಷ್ಯಾ ಅಥವಾ ಬಲ್ಗೇರಿಯಾದಲ್ಲಿ ತಯಾರಿಸಲ್ಪಟ್ಟಿದೆ ಮತ್ತು ಪಾಕಿಸ್ತಾನದಿಂದ ದೇಶಕ್ಕೆ ತರಲಾಗಿದೆ ಎಂದು ಉನ್ನತ ಪೋಲೀಸ್ ಉಲ್ಲೇಖಿಸಿದ್ದಾರೆ.

Mohali rocket attack case: Key conspirator has ISI link

ಪಂಜಾಬ್‌ನ ಮೊಹಾಲಿಯಲ್ಲಿರುವ ಪೊಲೀಸ್‌ ಗುಪ್ತಚರ ಇಲಾಖೆಯ ಕೇಂದ್ರ ಕಚೇರಿ ಮೇಲೆ ಸೋಮವಾರ ರಾತ್ರಿ ನಡೆಸಿದ ಗ್ರೆನೇಡ್‌ ದಾಳಿಯ ಹೊಣೆಯನ್ನು ಸಿಖ್‌ ಫಾರ್‌ ಜಸ್ಟಿಸ್‌ (ಎಸ್‌ಎಫ್‌ಜೆ) ಖಲಿಸ್ತಾನಿ ಉಗ್ರ ಸಂಘಟನೆ ಹೊತ್ತುಕೊಳ್ಳುವ ಜತೆಗೆ ಶಿಮ್ಲಾ ಪೊಲೀಸ್‌ ಕೇಂದ್ರ ಕಚೇರಿ ಮೇಲೂ ದಾಳಿ ಮಾಡುವ ಎಚ್ಚರಿಕೆ ನೀಡಿದೆ.

ಸೋಮವಾರ ರಾತ್ರಿ ಮೊಹಾಲಿ ಕಚೇರಿ ದಾಳಿ ನಡೆಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Mohali rocket attack case: Key conspirator has ISI link

ಘಟನೆ ಏನು?

ಕಳೆದ ವಾರ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸೌಧ ಕಟ್ಟಡದ ಮುಂಭಾಗದ ಗೇಟ್‌ ಮೇಲೆ ಖಲಿಸ್ತಾನ್‌ ಧ್ವಜ ಹಾರಿಸಿ, ಗೋಡೆಯ ಮೇಲೆ ಖಲಿಸ್ತಾನ್‌ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಇನ್ನು ಮೊಹಾಲಿಯಲ್ಲಿ ಸೋಮವಾರ ಸಂಜೆ ಪೊಲಿಸ್‌ ಗುಪ್ತಚರದ ಕೇಂದ್ರ ಕಚೇರಿ ಮೇಲೆ ಗ್ರೆನೇಡ್‌ ದಾಳಿ ನಡೆಸಲಾಗಿತ್ತು.

English summary
Mohali rocket attack case: Key conspirator has ISI link, says Punjab DGP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X