ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾಗಿ, ಮಾಂಗಲ್ಯ, ಆಭರಣಗಳೊಂದಿಗೆ ಪರಾರಿಯಾದ ಮಹಿಳೆ

|
Google Oneindia Kannada News

ಜಿಂದ್, ಜೂನ್ 23: ಮದುವೆಯಾಗೋದು ಕೆಲವೇ ದಿನಗಳಲ್ಲಿ ಸಿಕ್ಕಿದ್ದೆಲ್ಲಾ ದೋಚಿಕೊಂಡು ಪರಾರಿಯಾಗುವಂತಹ ಪ್ರಕರಣಗಳು ಹೆಚ್ಚಾಗಿದೆ.

ಇದೇ ರೀತಿಯ ಒಂದು ಘಟನೆ ಹರ್ಯಾಣದ ಜಿಂದ್‌ನಲ್ಲಿ ನಡೆದಿದ್ದು, ಪತಿ ಈಗ ನ್ಯಾಯಕ್ಕಾಗಿ ಸರ್ಕಾರದ ಮೆಟ್ಟಿಲೇರಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸುರೇಂದರ್ ಎಂಬುವವರು ಯುವತಿಯನ್ನು ಮದುವೆಯಾಗಿದ್ದರು, ಮದುವೆಗಾಗಿ 70 ಸಾವಿರ ರೂವನ್ನು ಮಧ್ಯವರ್ತಿಗೆ ಕೂಡ ನೀಡಿದ್ದರು. ಆದರೆ ಪಾಪ ಅವರಿಗೇನು ಗೊತ್ತು ಮಧ್ಯವರ್ತಿ ಕೂಡ ಈ ದಂಧೆಯಿಂದ ಹೊರತಾಗಿ ಇಲ್ಲ.

ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ

ಮಹಿಳೆಯರು ಮದುವೆಯಾಗದ ಗಂಡಸರನ್ನು ಗುರುತಿಸಿ ಮದುವೆಯಾಗಿ ಕೆಲವೇ ದಿನಗಳಲ್ಲಿ ಮಾಂಗಲ್ಯದಿಂದ ಹಿಡಿದು ಆಕೆಗೆ ಆ ಮನೆಯಲ್ಲಿ ನೀಡಿದ್ದ ಆಭರಣವನ್ನೆಲ್ಲಾ ದೋಚಿ ಪರಾರಿಯಾಗುತ್ತಾರೆ. ಅದೇ ಪ್ರದೇಶದಲ್ಲಿ ಇದು 20ನೇ ಪ್ರಕರಣವಾಗಿದೆ.

Marriage him looted and vanished

ಸುರೇಂದರ್ ಅವರ ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು, ಅವರ ತಂದೆ ತಾಯಿಯನ್ನು ನೋಡಿಕೊಳ್ಳಲು ಕೂಡ ಯಾರೂ ಇರಲಿಲ್ಲ. ಹಾಗಾಗಿ ಮದುವೆಯಾಗುವುದಾಗಿ ನಿರ್ಧರಿಸಿದ್ದರು.

ಮೇ 17ರಂದು ಯುವತಿಯನನ್ಉ ಮದುವೆಯಾಗಿದ್ದರು. ಆ ಯುವತಿ ತೀರಾ ಬಡವಳಾಗಿದ್ದಳು ಪರಿಚಯಸ್ಥರ ಮನೆಯಲ್ಲಿ ಇರುತ್ತಿದ್ದಳು. ಲುಧಿಯಾನಾ ಕೋರ್ಟ್‌ಲ್ಲಿ ಮದುವೆ ಸರ್ಟಿಫಿಕೇಟ್ ಕೂಡ ತಯಾರಾಗಿತ್ತು.

ಮದುವೆಯಾಗಿ ಎರಡು ವಾರ ಕಳೆದ ಬಳಿಕ ಅವರ ಮನೆಯಲ್ಲಿ ಜಾಗರಣೆ ಕಾರ್ಯಕ್ರಮವಿದೆ ಹೋಗಿ ಬರುತ್ತೇನೆ ಎಂದು ಹೋದವಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಳು, ತಿರುಗಿ ಬರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

English summary
Marriage him looted and vanished, after staying with him for about a fortnight. he paid Rs 70,000 to a middlemen to marry the 28-year-old woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X