ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮತ ಸಿಗದಿದ್ದರೂ ಮನೋಹರ್ ಲಾಲ್ ಖಟ್ಟರ್ ಪ್ರಮಾಣವಚನ

|
Google Oneindia Kannada News

Recommended Video

Manohar Lal Kattar May Take Oath As Haryana CM Today | Oneindia Kannada

ಚಂಡಿಗಢ, ಅಕ್ಟೋಬರ್ 25: ಹರ್ಯಾಣದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹಾಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಆಯ್ಕೆ ಮಾಡಲಾಗುತ್ತಿದ್ದು, ಅವರು ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 4:30 ಕ್ಕೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ದೀಪಾವಳಿ ನಂತರ ವಿಶ್ವಾಸಮತ ಯಾಚಿಸಲಿದ್ದಾರೆ.

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರುಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ 40 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿರುವ ಬಿಜೆಪಿಗೆ ಬಹುಮತಕ್ಕೆ ಇನ್ನೂ 6 (46) ಶಾಸಕರ ಅಗತ್ಯವಿದೆ. ಹರ್ಯಾಣದಲ್ಲಿ ಕಾಂಗ್ರೆಸ್ 31 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 10 ಕ್ಷೇತ್ರಗಳಲ್ಲಿ ಜೆಜೆಪಿ ಜಯಗಳಿಸಿದೆ. ಬಿಜೆಪಿ ಈಗಾಗಲೇ ಪಕ್ಷೇತರರ ಬೆಂಬಲ ಕೇಳಿದ್ದು, ಅಕಸ್ಮಾತ್ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಲು ಒಪ್ಪಿದರೆ ಮತ್ತೆ ಬಿಜೆಪಿ ಸರ್ಕಾರ ರಚಿಸಲಿದೆ.

Manohar Lal Kattar May Take Oath As Haryana CM Today

ಅಕಸ್ಮಾತ್ ವಿಶ್ವಾಸಮತ ಸಾಧಿಸಲು ಖಟ್ಟರ್ ವಿಫಲರಾದರೆ ಜೆಜೆಪಿ, ಕಾಂಗ್ರೆಸ್ ಮತ್ತು ಇತರರು ಸೇರಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಗುತ್ತದೆ. ಒಟ್ಟಿನಲ್ಲಿ ಹರ್ಯಾಣದಲ್ಲಿ ಮುಂದಿನ ಸರ್ಕಾರ ಯಾವುದು ಎಂಬುದರ ಸ್ಪಷ್ಟ ಚಿತ್ರಣ ತಿಳಿಯಬೇಕಾದರೆ ದೀಪಾವಳಿ ಮುಗಿಯಬೇಕಿದೆ!

English summary
Manohar Lal Kattar May Take Oath As Haryana CM Today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X