• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Made In China: ರಾಕಿ ಖರೀದಿ ಬಹಿಷ್ಕರಿಸಿದ ವ್ಯಾಪಾರಿಗಳು

|

ಲೂಧಿಯಾನ, ಜುಲೈ.24: ಲಡಾಖ್ ಪೂರ್ವ ಗಡಿಯಲ್ಲಿರುವ ಗಾಲ್ವಾನ್ ನಲ್ಲಿ ಕಾಲ್ಕೆರೆದು ನಿಂತಿರುವ ಚೀನಾಗೆ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಲೂಧಿಯಾನದ ಪುಟ್ಟ ಅಂಗಡಿ ಮಾಲೀಕರ ಕ್ರಮವು ಇದೀಗ ಸಾಕಷ್ಟು ಸುದ್ದಿ ಆಗುತ್ತಿದೆ.

ದೇಶದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಆಗಸ್ಟ್.03ರಂದು ಭಾರತದಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವರ್ಷ ಚೀನಾದಲ್ಲಿ ಸಿದ್ಧಪಡಿಸಿದ ರಾಕಿಗಳನ್ನು ಖರೀದಿಸದಿರಲು ಅಂಗಡಿ ಮಾಲೀಕರು ತೀರ್ಮಾನಿಸಿದ್ದಾರೆ.

ಚೀನಾ ವಿರುದ್ಧ ಭಾರತದ ಬೆನ್ನಿಗೆ ನಿಂತಿದ್ದೇಕೆ ಅಮೆರಿಕಾ?

ಚೀನಾ ಯೋಧರು ಗಾಲ್ವಾನ್ ಗಡಿಯಲ್ಲಿ ನಡೆಸಿದ ದಾಳಿಯಿಂದಾಗಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂಥ ದೇಶದ ಜೊತೆಗೆ ವ್ಯವಹಾರ ನಂಟು ಹೊಂದುವುರನ್ನೆ ನಾವು ಬಯಸುವುದಿಲ್ಲ. ಹೀಗಾಗಿ ಈ ಬಾರಿ ಚೀನಾದ ರಾಕಿಗಳನ್ನು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವುದಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಚೀನಾ ಮೇಡ್ ರಾಕಿ ಬಗ್ಗೆ ವ್ಯಾಪಾರಸ್ಥರು ಹೇಳುವುದೇನು?

ಕಳೆದ ವರ್ಷ ಚೀನಾದಿಂದ ರಕ್ಷಾ ಬಂಧನ ಹಬ್ಬಕ್ಕೆ ರಾಕಿಗಳನ್ನು ಆಮದು ಮಾಡಿಕೊಂಡಿದ್ದೇವೆ. ಇಲ್ಲಿ ಚೀನಾ ತಯಾರಿಸಿದ ರಾಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಭಾರತದ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದು ನಿಂತಿದೆ. ಅಷ್ಟೇ ಅಲ್ಲದೇ ನಮ್ಮ ಯೋಧರನ್ನು ಕೊಂದ ಚೀನೀಯರ ವಸ್ತುಗಳನ್ನು ನಾವು ಖರೀದಿಸುವುದಿಲ್ಲ ಎಂದು ಅಂಗಡಿ ಮಾಲೀಕ ದವೀಂದರ್ ಕೌರ್ ತಿಳಿಸಿದ್ದಾರೆ.

ಚೀನಾ ರಾಕಿಗಳನ್ನು ಜನರೂ ಖರೀದಿಸುತ್ತಿಲ್ಲ:

ಲೂಧಿಯಾನದಲ್ಲಿ ಜನರು ಕೂಡಾ ಈ ಬಾರಿ ಚೀನಾದ ರಾಕಿಗಳನ್ನು ಖರೀದಿಸದಿರಲು ತೀರ್ಮಾನಿಸಿದ್ದಾರೆ. ರಾಕಿ ಖರೀದಿಗೂ ಮೊದಲೇ ಜನರು ಇದು ಚೀನಾದಿಂದ ಆಮದು ಮಾಡಿಕೊಂಡಿರುವುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಚೀನಾ ಮೇಡ್ ರಾಕಿಗಳನ್ನು ಜನರು ಕೂಡಾ ಬಹಿಷ್ಕರಿಸುವುದಕ್ಕೆ ನಿರ್ಧರಿಸಿದ್ದಾರೆ. ಒಂದು ವೇಳೆ ಚೀನಾ ರಾಕಿಗಳನ್ನು ಮಾರಾಟಕ್ಕೆ ವ್ಯಾಪಾರಿಗಳು ಮುಂದಾದರೂ ಅಂಥ ರಾಕಿ ಅಂಗಡಿಗಳಿಗೆ ಸಾರ್ವಜನಿಕರೇ ಹೋಗುತ್ತಿಲ್ಲ ಅಂತಾರೆ ಮತ್ತೊಬ್ಬ ವ್ಯಾಪಾರಿ ಪವನ್ ಕುಮಾರ್.

ಕಳೆದ ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.

English summary
Ludhiana Shopkeepers Boycott Made In China Rakhis Due To China-India Conflict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X