ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜಾಗೊಂಡ ಬಿಎಸ್‌ಎಫ್ ಸೈನಿಕ ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ

|
Google Oneindia Kannada News

Recommended Video

Varanasi Lok Sabha Elections 2019: ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ವಜಾಗೊಂಡ ಯೋಧ ಕಣದಲ್ಲಿ

ಚಂಡೀಗಡ, ಮಾರ್ಚ್ 30: ಅಹಾರದ ಗುಣಮಟ್ಟದ ಬಗ್ಗೆ ದೂರಿ ಅಂತರ್ಜಾಲದಲ್ಲಿ ವಿಡಿಯೋ ಹರಿಬಿಟ್ಟ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್‌ಎಪ್ ಸೈನಿಕ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಸ್ವತಂತ್ರ ಅಭ್ಯರ್ಥಿಯಾಗಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಲಿದ್ದೇನೆ' ಎಂದು ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಹರಿಯಾಣದ ರೇವಾರಿಯಲ್ಲಿ ತಿಳಿಸಿದ್ದಾರೆ.

ಆಹಾರದ ಅವ್ಯವಸ್ಥೆ ಪ್ರಶ್ನಿಸಿದ್ದ ತೇಜ್ ಬಹದ್ದೂರ್ ಸೇನೆಯಿಂದ ಔಟ್ಆಹಾರದ ಅವ್ಯವಸ್ಥೆ ಪ್ರಶ್ನಿಸಿದ್ದ ತೇಜ್ ಬಹದ್ದೂರ್ ಸೇನೆಯಿಂದ ಔಟ್

ಸೇನಾಪಡೆಗಳಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ಯಾದವ್ ಹೇಳಿಕೊಂಡಿದ್ದಾರೆ.

https://kannada.oneindia.com/news/india/bsf-sacks-tej-bahadur-yadav-who-complained-about-bad-food-116506.html

'ಭ್ರಷ್ಟಾಚಾರದ ವಿಚಾರವನ್ನು ನಾನು ಎತ್ತಿದ್ದೆ. ಆದರೆ ನನ್ನನ್ನು ವಜಾಗೊಳಿಸಲಾಯಿತು. ಸೇನಾ ಪಡೆಗಳನ್ನು ಬಲಗೊಳಿಸುವುದು ಮತ್ತು ಅದರಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ನನ್ನ ಮೊದಲ ಗುರಿಯಾಗಿದೆ' ಎಂದು ಅವರು ಹೇಳಿದ್ದಾರೆ.

'ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ 'ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ

2017ರಲ್ಲಿ ಯಾದವ್ ಅಂತರ್ಜಾಲದಲ್ಲಿ ಹರಿಬಿಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಜತೆಗೆ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಹಿಮ, ಬೆಟ್ಟಗುಡ್ಡದ ಪ್ರದೇಶಗಳಲ್ಲಿ ಕಾವಲು ಕಾಯುವ ಸೈನಿಕರಿಗೆ ಒದಗಿಸುವ ಆಹಾರದ ಗುಣಮಟ್ಟದ ಬಗ್ಗೆ ಅವರು ಆರೋಪ ಮಾಡಿದ್ದರು.

ನನ್ನ ಗಂಡನನ್ನು ಹುಡುಕಿಕೊಡಿ.. ತೇಜ್ ಬಹದ್ದೂರ್ ಪತ್ನಿಯ ಅಳಲು ನನ್ನ ಗಂಡನನ್ನು ಹುಡುಕಿಕೊಡಿ.. ತೇಜ್ ಬಹದ್ದೂರ್ ಪತ್ನಿಯ ಅಳಲು

ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಿ ಅಶಿಸ್ತಿನ ವರ್ತನೆಯ ಕಾರಣಕ್ಕೆ ಸೇನೆಯಿಂದ ವಜಾಗೊಳಿಸಲಾಗಿತ್ತು.

English summary
lok sabha elections 2019: Sacked BSF soldier Tej Bahadur Yadav said that he will contest from Varanasi against Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X