ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಮತ ಕದ್ದ ಬಿಜೆಪಿ ಏಜೆಂಟ್‌: ದಲಿತ ಮಹಿಳೆಯರ ಆರೋಪ

|
Google Oneindia Kannada News

ಫರೀದಾಬಾದ್, ಮೇ 15: ಮೇ 12ರಂದು ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಏಜೆಂಟ್ ತಮ್ಮ ಮತಗಳನ್ನು 'ಕಮಲ'ದ ಗುರುತಿಗೆ ಹಾಕಿಸಿಕೊಂಡಿದ್ದಾರೆ ಎಂದು ದಲಿತ ಮಹಿಳೆಯರು ಆರೋಪಿಸಿದ್ದಾರೆ.

ಮತದಾರರ ಬದಲು ತಾನೇ ವೋಟ್ ಹಾಕುತ್ತಿದ್ದ ಏಜೆಂಟ್: ವೈರಲ್ ವಿಡಿಯೋ ಮತದಾರರ ಬದಲು ತಾನೇ ವೋಟ್ ಹಾಕುತ್ತಿದ್ದ ಏಜೆಂಟ್: ವೈರಲ್ ವಿಡಿಯೋ

ಅಸೌಟಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮತದಾನ ನಡೆಯುತ್ತಿತ್ತು. ಆಗ ಬಿಜೆಪಿ ಏಜೆಂಟ್ ಗಿರಿರಾಜ್ ಸಿಂಗ್ ಎಂಬಾತ ಮಹಿಳಾ ಮತದಾರರು ಮತ ಚಲಾಯಿಸುವ ಸಂದರ್ಭದಲ್ಲಿ ಇವಿಎಂ ಬಟನ್ ಒತ್ತಲು ನೆರವಾಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅದು ಹರಿದಾಡುತ್ತಿದ್ದಂತೆಯೇ ಆತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಪ. ಬಂಗಾಳ ಹಿಂಸಾಚಾರ: ಬಿಜೆಪಿ-ಟಿಎಂಸಿಯಲ್ಲಿ ಹೊಣೆಗಾರರು ಯಾರು? ಪ. ಬಂಗಾಳ ಹಿಂಸಾಚಾರ: ಬಿಜೆಪಿ-ಟಿಎಂಸಿಯಲ್ಲಿ ಹೊಣೆಗಾರರು ಯಾರು?

ಗಿರಿರಾಜ್ ಸಿಂಗ್, ನನ್ನ ಮತವನ್ನು ಬಿಜೆಪಿಗೆ ಹಾಕಿಸಿಕೊಂಡಿದ್ದಾರೆ. ನಾನು ಮತ ಹಾಕಲು ಹೋದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗಿರಿರಾಜ್ ಸಿಂಗ್, ಬಿಜೆಪಿ ಗುರುತಿನ ಎದುರಿನ ಬಟನ್ ಒತ್ತಿದ್ದಾರೆ. ಇದರಿಂದ ಆಘಾತ ಉಂಟಾಯಿತು. ಕೂಡಲೇ ನಾನು ಬಿಎಸ್‌ಪಿ ಗುರುತಿನ ಎದುರಿನ ಬಟನ್ ಒತ್ತಿದೆ. ಆದರೆ ಅದು ಕೆಲಸ ಮಾಡಲಿಲ್ಲ. ನನ್ನ ಮತ ಆಗಲೇ ಹೊರಟುಹೋಗಿತ್ತು ಎಂದು ವಿವೇಚನಾ ಎಂಬ ಮಹಿಳೆ ಆರೋಪಿಸಿದ್ದಾರೆ.

ಮತ್ತೊಬ್ಬ ಮಹಿಳೆ ಶೋಭಾ, ಗಿರಿರಾಜ್ ಕಮಲ ಚಿಹ್ನೆಯ ಮುಂದಿರುವ ಬಟನ್ ಒತ್ತುವಂತೆ ಹೇಳಿದ. ಆದರೆ, ನಾನು ಬಯಸಿದ ಪಕ್ಷಕ್ಕೆ ಹಾಕುತ್ತೇನೆ ಎಂದು ತಿರುಗೇಟು ನೀಡಿದೆ. ಮತ ಚಲಾಯಿಸಿ ಅಲ್ಲಿಂದ ನಡೆದೆ ಎಂದು ತಿಳಿಸಿದ್ದಾರೆ.

Lok Sabha elections 2019 haryana faridabad bjp agent influence dalit women vote allegation

'ನಾವು ಹಲವು ವರ್ಷಗಳಿಂದ ಬಿಎಸ್‌ಪಿಗೆ ಮತ ಹಾಕುತ್ತಿದ್ದೇವೆ. ಇದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನಮ್ಮ ಮೇಲೆ ಯಾವಾಗಲೂ ಒತ್ತಡ ಇರುತ್ತದೆ. ಆದರೆ, ಹಿಂದೆಂದೂ ಈ ರೀತಿ ಆಗಿರಲಿಲ್ಲ. ಬೂತ್‌ನಲ್ಲಿದ್ದ ವ್ಯಕ್ತಿಗೆನಾವು ಯಾರಿಗೆ ಮತ ಹಾಕುತ್ತೇವೆ ಎನ್ನುವುದು ತಿಳಿದಿತ್ತು. ಅದಕ್ಕಾಗಿಯೇ ನಮ್ಮನ್ನು ಗುರಿಯಾಗಿಸಿಕೊಂಡಿದ್ದ' ಎಂದು ವಿದ್ಯಾ ಎಂಬುವವರು ಆರೋಪಿಸಿದ್ದಾರೆ.

ಆದರೆ, ಗಿರಿರಾಜ್ ಸಿಂಗ್ ತನ್ನ ವಿರುದ್ಧ ಆರೋಪವನ್ನು ತಳ್ಳಿಹಾಕಿದ್ದಾನೆ. ಮತದಾನ ಮಾಡಲು ಬರುವ ಅನಕ್ಷರಸ್ಥ ಮಹಿಳೆಯರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಮತಚಲಾಯಿಸುವ ಯಂತ್ರದ ಬಳಿ ಹೋಗುವುದು ಅಪರಾಧ ಎಂಬುದು ಸಹ ತಿಳಿದಿರಲಿಲ್ಲ ಎಂದಿದ್ದಾನೆ.

ಈ ಘಟನೆ ನಡೆದ ಕೂಡಲೇ ಚುನಾವಣಾ ವೀಕ್ಷಕಿ ಸೋನಲ್ ಗುಲಾಟಿ ಮತ್ತು ಮತಗಟ್ಟೆ ಅಧಿಕಾರಿ ಅಮಿತ್ ಅತ್ರಿ ಅವರನ್ನು ಚುನಾವಣಾ ಕರ್ತವ್ಯದಿಂದ ಅಮಾನತುಗೊಳಿಸಿದೆ. ಅಲ್ಲದೆ ಈ ಮತಗಟ್ಟೆಯಲ್ಲಿ ಮೇ 19ರಂದು ಮರು ಮತದಾನಕ್ಕೆ ಸೂಚನೆ ನೀಡಿದೆ.

English summary
Lok Sabha elections 2019: Dalit women of asouti village in Faridabad, Haryana accused BJP booth agent Giriraj Singh stoled our votes by pressing Lotus button during 6th phase election on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X