ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಾಲಿ ಫೋಗಟ್ ಹತ್ಯೆ: ಸಿಬಿಐಗೆ ವಹಿಸುವಂತೆ ಹರ್ಯಾಣದಲ್ಲಿ ಖಾಪ್ ಮಹಾಪಂಚಾಯತ್

|
Google Oneindia Kannada News

ಚಂಡಿಗಢ, ಸೆ. 11: ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಭಾನುವಾರ ಹರ್ಯಾಣದ ಹಿಸಾರ್‌ನಲ್ಲಿ ಖಾಪ್ ಮಹಾಪಂಚಾಯತ್ ನಡೆಯಿತು.

ಇದಕ್ಕೂ ಮುನ್ನ ಶುಕ್ರವಾರ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಜೊತೆಗೆ ವಸ್ತುನಿಷ್ಠ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದರು.

ರೆಡ್‌ ಡೈರಿ ರಹಸ್ಯ: ಸೋನಾಲಿ ಫೋಗಟ್ ಪಿಎ ಸುಧೀರ್ ಸಂಗ್ವಾನ್ ಸಂಚು ರೂಪಿಸಿದ್ದು ಯಾಕೆ?ರೆಡ್‌ ಡೈರಿ ರಹಸ್ಯ: ಸೋನಾಲಿ ಫೋಗಟ್ ಪಿಎ ಸುಧೀರ್ ಸಂಗ್ವಾನ್ ಸಂಚು ರೂಪಿಸಿದ್ದು ಯಾಕೆ?

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನಾಲಿ ಫೋಗಟ್ ಕುಟುಂಬ ಸದಸ್ಯರು ಸಿಬಿಐ ತನಿಖೆಗೆ ಹಲವು ಬಾರಿ ಒತ್ತಾಯಿಸಿದ್ದಾರೆ. ಸೋನಾಲಿ ಫೋಗಟ್ ಅವರ ಸೋದರಳಿಯ ವಿಕಾಸ್ ಸಿಂಗ್, ಸಿಬಿಐ ತನಿಖೆಗಾಗಿ ಕುಟುಂಬವು ಗೋವಾ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಿದೆ. ಇದಕ್ಕಾಗಿ ಕುಟುಂಬದವರು ಈಗಾಗಲೇ ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

Khap mahapanchayat held in Haryana demanding a CBI inquiry in Sonali Phogat case

ಗೋವಾ ಪೊಲೀಸರ ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸೋನಾಲಿ ಫೋಗಟ್ ಅವರ ಕುಟುಂಬವು ಕೇಂದ್ರೀಯ ಸಂಸ್ಥೆಯಿಂದ ತನಿಖೆಗೆ ಕೋರಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿತ್ತು. ಮುಖ್ಯಮಂತ್ರಿಗಳೂ ಇದೇ ಭರವಸೆ ನೀಡಿದ್ದರು.

ಶುಕ್ರವಾರ, ಗೋವಾ ಪೊಲೀಸರ ತಂಡವು ಹರಿಯಾಣದ ಹಿಸಾರ್ ಜಿಲ್ಲೆಯ ಫೋಗಟ್ ಅವರ ಸಂತ ನಗರ ನಿವಾಸಕ್ಕೆ ಭೇಟಿ ನೀಡಿ ಮೂರು ಡೈರಿಗಳನ್ನು ವಶಪಡಿಸಿಕೊಂಡಿದೆ. ಸೋನಾಲಿಯ ಮಲಗುವ ಕೋಣೆ, ವಾರ್ಡ್‌ರೋಬ್ ಮತ್ತು ಪಾಸ್‌ವರ್ಡ್-ರಕ್ಷಿತ ಲಾಕರ್ ಅನ್ನು ಪೊಲೀಸ್ ಶೋಧ ತಂಡವು ಪರಿಶೀಲಿಸಿದೆ ಎಂದು ವರದಿಯಾಗಿದೆ. ಪೊಲೀಸರು ಸೋನಾಲಿ ಫೋಗಟ್ ಅವರ ನಿವಾಸದ ಲಾಕರ್ ಅನ್ನು ಸಹ ಸೀಲ್ ಮಾಡಿದ್ದಾರೆ.

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರು ಆಗಸ್ಟ್ 23 ರಂದು ಉತ್ತರ ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ದೇಹದ ಮೇಲೆ ಗಾಯಗಳಿರುವುದನ್ನು ಬಹಿರಂಗಪಡಿಸಿತು, ನಂತರ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

Khap mahapanchayat held in Haryana demanding a CBI inquiry in Sonali Phogat case

ಸೋನಾಲಿ ಫೋಗಟ್‌ಗೆ ಆಕೆಯ ಇಬ್ಬರು ಸಹಚರರು ಬಲವಂತವಾಗಿ ಮಾದಕ ದ್ರವ್ಯ ಸೇವಿಸುವಂತೆ ಮ ಮಾಡಿದ್ದಾರೆ ಎಂದು ಗೋವಾ ಪೊಲೀಸರು ಹೇಳಿದ್ದರು. ಸಹಚರರು ಮತ್ತು ಪ್ರಕರಣದ ಪ್ರಮುಖ ಆರೋಪಿಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದರೆ, ರೆಸ್ಟೋರೆಂಟ್ ಮಾಲೀಕರು ಮತ್ತು ಡ್ರಗ್ ಡೀಲರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Khap mahapanchayat was held in Haryana's Hisar demanding a CBI inquiry into BJP leader Sonali Phogat's death case. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X