ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾದಿ ಹೆಸರಲ್ಲಿ ಮೋದಿ ಚಿತ್ರವಿರುವ ನಕಲಿ ಮಾಸ್ಕ್ ಮಾರಾಟ: ದೂರು

|
Google Oneindia Kannada News

ಚಂಡೀಗಢ, ಜುಲೈ 28: ಖಾದಿ ಹೆಸರಿನಲ್ಲಿ ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದ ಮಹಿಳೆ ವಿರುದ್ಧ ಖಾದಿ ಆಯೋಗ ದೂರು ನೀಡಿದೆ.

Recommended Video

Indian Spy Satellite EMISAT Passes Over Tibet To Observe Chinese Army | Oneindia Kannada

ಮೂಲತಃ ಚಂಡೀಗಢದವಳಾಗಿರುವ ಖುಷ್ಬೂ ಯಾರ ಅನುಮತಿಯೂ ಇಲ್ಲದೆ ಖಾದಿ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಳು. ಅಷ್ಟೇ ಅಲ್ಲದೆ ಮಾಸ್ಕ್ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವೂ ಇದೆ.

ಭಾರತದಲ್ಲಿ ಒಂದೇ ದಿನ 47,704 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಒಂದೇ ದಿನ 47,704 ಕೊರೊನಾ ಸೋಂಕಿತರು ಪತ್ತೆ

ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಲೋಗೋವನ್ನು ಅದರ ಮೇಲೆ ಹಾಕಿದ್ದಳು.ಹಾಗೆಯೇ ಅದರ ಮೇಲೆ ಪ್ರಧಾನಿ ಫೋಟೊ ಹಾಕಿ, ಇದು ಖಾದಿ ಉತ್ಪನ್ನ ಎಂದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಳು.

Khadi Commission Files Case Against Woman For Selling Fake Masks

ದೂರಿನ ಕುರಿತು ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಮಾತನಾಡಿ, ಅನುಮತಿ ಇಲ್ಲದೆ ಖಾದಿ ಅಥವಾ ಪ್ರಧಾನಿ ಮೋದಿ ಚಿತ್ರ ಬಳಕೆ ಮಾಡಲು ಯಾವುದೇ ವೈಯುಕ್ತಿಕ ಅಥವಾ ಖಾಸಗಿ ಸಂಸ್ಥೆಗಳನ್ನು ನಾವು ಬಿಡುವುದಿಲ್ಲ. ಇದೊಂದು ಅಪರಾಧ ಕೃತ್ಯ ಎಂದು ಭಾವಿಸಿ ಗಂಭೀರವಾಗಿ ಪಡಿಗಣಿಸುತ್ತೇವೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಚಂಡೀಗಢ ಮಹಿಳೆಯು ಖಾದಿಯಿಂದ ಅನುಮತಿ ಪಡೆಯದೆ ಖಾದಿ ಮಾಸ್ಕ್ ಹೆಸರಿಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದಳು, ಅಷ್ಟೇ ಅಲ್ಲದೆ ಮೋದಿ ಚಿತ್ರವನ್ನೂ ಬಳಕೆ ಮಾಡಿ ಆನ್‌ಲೈನ್ ಗ್ರಾಹಕರನ್ನು ವಂಚಿಸುತ್ತಿದ್ದಳು. ಈಗಾಗಲೇ ಸಾವಿರ ಖಾಸಗಿ ಸಂಸ್ಥೆಗಳಿಗೆ ಕೆವಿಐಸಿ ಲೀಗಲ್ ನೋಟಿಸ್ ನೀಡಿದೆ.

English summary
Taking strict note of "fake" masks being sold in the name of khadi and advertised on the social media, the Khadi and Village Industries Commission (KVIC) on Monday lodged a complaint with the police against a Chandigarh resident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X