ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಿಂದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದ ಸಿಧು

|
Google Oneindia Kannada News

ಪಟಿಯಾಲ ಮೇ 23: ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಜೈಲು ಪಲಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುರನ್ನು ಬಿಗಿ ಭದ್ರತೆಯಲ್ಲಿ ಸೋಮವಾರ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ಸಿಧು, 1988ರ ಡಿ.27ರಂದು ಪಂಜಾಬ್‌ನ ಪಟಿಯಾಲದ ರಸ್ತೆ ರಂಪಾಟದಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದೇ 65 ವರ್ಷದ ಗುರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 34 ವರ್ಷಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 19ರಂದು ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು.

ನವಜೋತ್ ಸಿಂಗ್ ಸಿಧು ಈಗ ಕೈದಿ ನಂ. 241383 ಜೈಲಿನ ಸೌಲಭ್ಯ ಹೀಗಿವೆ..ನವಜೋತ್ ಸಿಂಗ್ ಸಿಧು ಈಗ ಕೈದಿ ನಂ. 241383 ಜೈಲಿನ ಸೌಲಭ್ಯ ಹೀಗಿವೆ..

ಮೇ 20ರಂದು ಸಿಧು ಅವರು ಪಟಿಯಾಲ ನ್ಯಾಯಾಲಯಕ್ಕೆ ಶರಣಾದರು. ಅಲ್ಲಿಂದ ಅವರನ್ನು ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

Jailed Navjot Singh Sidhu Taken to Hospital for Check Up

"ಅನಾರೋಗ್ಯದ ಹಿನ್ನಲೆಯಲ್ಲಿ ನವಜೋತ್ ಸಿಂಗ್ ಸಿಧು ತಮಗೆ ಜೈಲಿನಲ್ಲಿ ವಿಶೇಷ ಆಹಾರ ಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವೈದ್ಯರ ತಂಡವು ಸಿಧು ಆರೋಗ್ಯದ ಸಂಪೂರ್ಣ ತಪಾಸಣೆ ನಡೆಸಲಿದೆ'' ಎಂದು ಸಿಧು ಪರ ವಕೀಲ ಎಚ್‌ಪಿಎಸ್ ವರ್ಮಾ ತಿಳಿಸಿದರು.

"ಸಿಧು ಅವರು ಯಾವ ರೀತಿಯ ಆಹಾರ ಸೇವಿಸಿದರೆ ಉತ್ತಮ ಎಂಬುದನ್ನು ವೈದ್ಯರ ತಂಡ ನಿರ್ಧರಿಸಲಿದೆ ಹಾಗೂ ಈ ಸಂಬಂಧ ಪಟಿಯಾಲ ನ್ಯಾಯಾಲಕ್ಕೆ ವರದಿಯನ್ನು ಸಲ್ಲಿಸಲಿದೆ'' ಎಂದರು.

ಪಟಿಯಾಲ ಕೋರ್ಟ್‌ಗೆ ಶರಣಾದ ನವಜೋತ್‌ ಸಿಂಗ್ ಸಿಧು ಪಟಿಯಾಲ ಕೋರ್ಟ್‌ಗೆ ಶರಣಾದ ನವಜೋತ್‌ ಸಿಂಗ್ ಸಿಧು

"ಸಿಧು ಅವರು ಗೋಧಿ, ಸಕ್ಕರೆ, ಮೈದಾ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ. ಅವರು ಹಣ್ಣುಗಳು, ಪಪ್ಪಾಯ, ಪೇರಲೆ, ಡಬಲ್ ಟೋನ್ಡ್ ಹಾಲು ಹಾಗೂ ಫೈಬರ್‌ ಮತ್ತು ಕಾರ್ಬೋಹೈಡ್ರೇಟ್ ಗಳು ಹೊಂದಿರದ ಪದಾರ್ಥಗಳನ್ನು ಸೇವಿಸಬಹುದು'' ಎಂದು ವರ್ಮಾ ತಿಳಿಸಿದರು.

Jailed Navjot Singh Sidhu Taken to Hospital for Check Up

ಸಿಧು ಅವರು ಎಂಬಾಲಿಸಮ್ ಹಾಗೂ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. 2015ರಲ್ಲಿ ಅವರು ದೆಹಲಿಯ ಆಸ್ಪತ್ರೆಯಲ್ಲಿ ಅಕ್ಯೂಟ್ ಡೀಪ್ ವೀನ್ ಥ್ರಂಬೋಸಿಸ್(ಡಿವಿಟಿ) ಚಿಕಿತ್ಸೆಗೆ ಒಳಗಾಗಿದ್ದರು.

ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಬೆಂಬಲಿಗರು ಅವರನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ್ದರು.

English summary
Panjab Congress leader Navjot Singh Sidhu taken to Patiala Rajindra hospital for check up, seeks special diet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X