• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫುಲ್ ಟೈಂ ರಾಜಕೀಯ ಅಖಾಡಕ್ಕೆ ಅಂತಾರಾಷ್ಟ್ರೀಯ ಕುಸ್ತಿಪಟು ಎಂಟ್ರಿ

|

ಚಂಡೀಗಢ, ಅ.7: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕುಸ್ತಿ ಪಟು ಬಬಿತಾ ಫೋಗಟ್ ಅವರು ಪೂರ್ಣಾವಧಿ ರಾಜಕೀಯ ವೃತ್ತಿ ಬದುಕು ಮತ್ತೊಮ್ಮೆ ಆರಂಭಿಸಲು ಮುಂದಾಗಿದ್ದಾರೆ. 2019ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಬಬಿತಾ ನಂತರ ಸರ್ಕಾರಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈಗ ತಮ್ಮ ಸರ್ಕಾರಿ ಉದ್ಯೋಗಕ್ಕೆ ಬುಧವಾರದಂದು ರಾಜೀನಾಮೆ ನೀಡಿದ್ದಾರೆ.

ಹರ್ಯಾಣದ ಕ್ರೀಡಾ ಇಲಾಖೆ ಉಪ ನಿರ್ದೇಶಕಿಯಾಗಿದ್ದ ಬಬಿತಾ ಫೋಗಟ್ ಅವರು ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮಕಲು ಸಿದ್ಧರಾಗಿದ್ದಾರೆ. ಈ ಬಾರಿ ಉಪ ಚುನಾವಣೆಯಲ್ಲಿ ಬಬಿತಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ ಎಂಬ ಸುದ್ದಿಯಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಬಿತಾ,

"ನಾನು ಸಕ್ರಿಯ ರಾಜಕಾರಣಿಯಾಗಲು ಬಯಸಿದ್ದೇನೆ. ಹರ್ಯಾಣ ರಾಜ್ಯದ ಬರೋಡಾ ವಿಧಾನಸಭಾ ಉಪ ಚುನಾವಣೆ ಹಾಗೂ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ'' ಎಂದು ಹೇಳಿದ್ದಾರೆ.

ಹರ್ಯಾಣದ ಬರೋಡಾ ಕ್ಷೇತ್ರದಲ್ಲಿ 2009ರಿಂದ ಸತತವಾಗಿ ಜಯಿಸುತ್ತಾ ಬಂದಿದ್ದ ಕಾಂಗ್ರೆಸ್ ಶಾಸಕ ಶ್ರೀಕೃಷ್ಣನ್ ಹೂಡಾ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನವೆಂಬರ್ 03ರಂದು ನಿಗದಿಯಾಗಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.

ಬಬಿತಾ ಫೋಗಟ್:

ಕುಸ್ತಿಪಟು ಬಬಿತಾ ಫೋಗಟ್ ಹಾಗೂ ಕವಿತಾ ದೇವಿ ಇಬ್ಬರು ಜುಲೈ 30ರಂದು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದರು.

2014ರ ಕಾಮನ್ ವೆಲ್ತ್ ಗೇಮ್ಸ್ ವಿಜೇತೆ ಬಬಿತಾ ಅವರು 2019ರಲ್ಲಿ ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮುನ್ನ 2019ರ ಆಗಸ್ಟ್ 13ರಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ದ್ರೋಣಾಚಾರ್ಯ ವಿಜೇತ ತಂದೆ ಮಹಾವೀರ್ ಸಿಂಗ್ ಫೋಗಟ್ ಅವರ ಜೊತೆಗೂಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ದಂಗಲ್ ಚಿತ್ರದಲ್ಲಿ ಮಹಾವೀರ್ ಪಾತ್ರದಲ್ಲಿ ಅಮೀರ್ ಖಾನ್, ಅವರ ಪುತ್ರಿಯರಾದ ಒಲಿಂಪಿಯನ್, ಎರಡು ಬಾರಿ ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತೆ ಬಬಿತಾ ಹಾಗೂ ಅಂತಾರಾಷ್ಟ್ರೀಯ ಕುಸ್ತಿ ಪಟು ಸಂಗೀತಾ ಫೋಗಟ್ ಪಾತ್ರಗಳನ್ನು ತೆರೆಯ ಮೇಲೆ ಮೂಡಿಸಲಾಗಿದೆ.

English summary
International wrestler Babita Phogat, who unsuccessfully contested the 2019 assembly polls, on Wednesday resigned as the Deputy Director in Haryana's Sports Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X