ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ನವಜೋತ್

|
Google Oneindia Kannada News

ಛತ್ತೀಸ್‌ಗಢ, ಜೂ.30: ನವಜೋತ್ ಸಿಂಗ್ ಸಿಧು ಜೊತೆಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ ಒಂದು ದಿನದ ನಂತರ, ಪಂಜಾಬ್ ರಾಜಕಾರಣಿ ನವಜೋತ್ ಸಿಂಗ್ ಸಿಧು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ನವದೆಹಲಿಯಲ್ಲಿ ಬುಧವಾರ ಭೇಟಿಯಾದರು.

ಸುಮಾರು ಮೂರು ಗಂಟೆಗಳ ಕಾಲ ಇಬ್ಬರ ಸಭೆ ನಡೆದಿದೆ ಎಂದು ನವಜೋತ್ ಸಿಂಗ್ ಸಿಧು ಆಪ್ತ ಮೂಲಗಳು ತಿಳಿಸಿವೆ. "ಪ್ರಿಯಾಂಕಾ ಗಾಂಧಿ ಜೊತೆಗೆ ಸುದೀರ್ಘ ಸಭೆ ನಡೆಸಿದ್ದೇನೆ" ಎಂದು ಬರೆದು ಚಿತ್ರವೊಂದನ್ನು ನವಜೋತ್ ಸಿಂಗ್ ಟ್ವೀಟ್‌ ಮಾಡಿದ್ದಾರೆ.

ನವ್‌ಜೋತ್‌ಸಿಂಗ್ ಸಿಧು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ! ನವ್‌ಜೋತ್‌ಸಿಂಗ್ ಸಿಧು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ!

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ. ಈ ನಡುವೆ ಪಂಜಾಬ್‌ನ ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ತಾವು ಹಿರಿಯ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

In mid of Punjab Congress crisis, Navjot Singh Sidhu meets Priyanka Gandhi

ಇನ್ನು ಪ್ರಿಯಾಂಕಾ ಗಾಂಧಿ ಜೊತೆಗೆ ನವಜೋತ್ ಮಾತುಕತೆ ನಡೆಸುತ್ತಿದ್ದಂತೆ, ತಾನು ರಾಹುಲ್‌ ಜೊತೆ ಮಾತುಕತೆ ನಡೆಸುವುದು ಇದೆ ಎಂದು ಹೇಳಿ ಮಧ್ಯದಲ್ಲಿ ಹೊರಟರು ಎಂದು ಮೂಲಗಳು ತಿಳಿಸಿವೆ. "ಆದರೆ ಇಬ್ಬರ ನಡುವೆ ಯಾವ ಚರ್ಚೆಗಳು ನಡೆದಿವೆ ಎಂಬುದು ನಮಗೆ ತಿಳಿದಿಲ್ಲ. ಬೆಳಿಗ್ಗೆಯಿಂದ ಮೂರು ಗಂಟೆಗಳ ಕಾಲ ಒಳಗೆ ಇದ್ದರು. ಪ್ರಿಯಾಂಕಾ ಹೊರಟು ಹಿಂತಿರುಗಿ ಬರುತ್ತಿರುವುದನ್ನು ನಾವು ನೋಡಿದ್ದೇವೆ," ಎಂದು ಮೂಲಗಳು ತಿಳಿಸಿವೆ.

ಸಿಧು ತಂಡವು ಸೋಮವಾರ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗುವುದಾಗಿ ಮಾಧ್ಯಮಗಳಿಗೆ ತಿಳಿಸಿತ್ತು. ಮಂಗಳವಾರ ಬೆಳಿಗ್ಗೆ ತಮ್ಮ ಪಟಿಯಾಲ ನಿವಾಸದಿಂದ ತೆರಳಿದ್ದರು. ಆದರೆ, ಯಾವುದೇ ಸಭೆ ನಡೆದಿರಲಿಲ್ಲ. "ಸಿಧು ಜೊತೆಗೆ ಯಾವುದೇ ಸಭೆ ನಡೆದಿಲ್ಲ" ಎಂದು ರಾಹುಲ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದರು.

ಮತ್ತೆ ಅಮರಿಂದರ್ ಸಚಿವ ಸಂಪುಟಕ್ಕೆ ಸೇರುತ್ತಾರಾ ಸಿಧು?ಮತ್ತೆ ಅಮರಿಂದರ್ ಸಚಿವ ಸಂಪುಟಕ್ಕೆ ಸೇರುತ್ತಾರಾ ಸಿಧು?

ಪಂಜಾಬ್ ಘಟಕದಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಹೈಕಮಾಂಡ್‌ ಕಾರ್ಯನಿರ್ವಹಿಸುತ್ತಿರುವುದರಿಂದ, ಪ್ರಿಯಾಂಕ ಗಾಂಧಿ ಜೊತೆಗೆ ನವಜೋತ್ ಸಿಂಗ್‌ ಸಿಧು ಭೇಟಿಯು ಕಾಂಗ್ರೆಸ್ ವಲಯದಲ್ಲಿ ಮಹತ್ವದ್ದಾಗಿದೆ. ಸಭೆಗಳು ಪಕ್ಷದಲ್ಲಿ ಸಿಧು ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ. ಸಿಧು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ದಂಗೆ ಎದ್ದಿದ್ದಾರೆ, ಟ್ವಿಟ್ಟರ್‌ನಲ್ಲಿ ಅಮರಿಂದರ್‌ ಸಿಂಗ್‌ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
A day after Congress leader Rahul Gandhi said he had no meeting scheduled with Navjot Singh Sidhu, the Punjab politician met party general secretary Priyanka Gandhi Vadra in New Delhi on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X