ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದನದ ನಂತರ ಗಂಡನ ಸಂಬಳ ಹೆಚ್ಚಾದರೆ, ಹೆಂಡತಿ ಜೀವನಾಂಶವೂ ಹೆಚ್ಚಾಗಬೇಕು

|
Google Oneindia Kannada News

ಹರಿಯಾಣ, ಫೆಬ್ರುವರಿ 10: ವಿಚ್ಛೇದನದ ನಂತರ ಗಂಡನ ಸಂಬಳ ಏರಿಕೆಯಾದರೆ ಹೆಂಡತಿಗೆ ಆತ ನೀಡುವ ಜೀವನಾಂಶದ ಹಣವನ್ನೂ ಹೆಚ್ಚಿಸಬೇಕು ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.

ವ್ಯಕ್ತಿಯೊಬ್ಬರು ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನ್ಯಾಯಾಧೀಶ ಎಚ್.ಎಸ್. ಮದನ್, ಮಂಗಳವಾರ ಈ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

ಪ್ರತಿ ತಿಂಗಳು ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶಪ್ರತಿ ತಿಂಗಳು ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ

ಹರಿಯಾಣದ ಪಂಚಕುಳ ನಿವಾಸಿ ವರುಣ್ ಜಗೋತಾ ಎಂಬುವರು ಪಂಚಕುಳದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಿಮ್ಮ ಸಂಬಳ ಹೆಚ್ಚಾದ್ದರಿಂದ ನೀವು ನಿಮ್ಮ ಪತ್ನಿಗೆ ನೀಡುತ್ತಿರುವ ಜೀವನಾಂಶವನ್ನೂ ಹೆಚ್ಚಿಗೆ ನೀಡಬೇಕು ಎಂದು ಹೇಳಿ 20 ಸಾವಿರದಿಂದ 28 ಸಾವಿರ ರೂಪಾಯಿಗೆ ಜೀವನಾಂಶವನ್ನು ಏರಿಕೆ ಮಾಡಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಪರ ತೀರ್ಪು ಬರದಿದ್ದರಿಂದ ವರುಣ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

 If Husbands Salary Increases Wife Can Also Entitled To Increase In Alimony

ತನ್ನ ಸಂಬಳ 95 ಸಾವಿರದಿಂದ 1,14,000ಕ್ಕೆ ಏರಿಸಿದ್ದು, ಎಲ್ಲಾ ಕಡಿತಗೊಂಡು 92,175 ರೂಪಾಯಿ ಬರುತ್ತದೆ. ಹೀಗಿದ್ದಾಗ ಹೆಂಡತಿಗೆ 28 ಸಾವಿರ ರೂಪಾಯಿಯನ್ನು ಹೇಗೆ ನೀಡುವುದು ಎಂದು ವರುಣ್ ವಾದ ಮಾಡಿದ್ದರು. ಆದರೆ, ಆದೇಶ ಕಾನೂನಿಗೆ ವಿರುದ್ಧವಾಗಿದ್ದಾಗ ಹಾಗೂ ಪಕ್ಷಪಾತಿಯಾಗಿದ್ದ ಸಂದರ್ಭದಲ್ಲಿ ಮಾತ್ರ ಮಧ್ಯ ಪ್ರವೇಶಿಸಬಹುದು ಎಂದಿರುವ ಹೈಕೋರ್ಟ್, ಅರ್ಜಿದಾರರ ವಾದವನ್ನು ತಿರಸ್ಕರಿಸಿದೆ.

ಪ್ರಕರಣವನ್ನು ವಜಾಗೊಳಿಸಿ ಗಂಡನ ಸಂಬಳ ಹೆಚ್ಚಳವಾದರೆ ಜೀವನಾಂಶವನ್ನು ಹೆಚ್ಚಿಗೆ ಪಡೆಯಲೂ ಹೆಂಡತಿ ಅರ್ಹಳು ಎಂದು ಸ್ಪಷ್ಟಪಡಿಸಿದೆ.

English summary
Haryana High Court made it clear that if husband’s salary increases, the wife is entitled to an increase in alimony
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X