ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ, ಗುಜರಾತ್ ಮಾದರಿಯಲ್ಲೇ ಪಂಜಾಬ್‌ಗೂ ಅಚ್ಚರಿಯ ಸಿಎಂ

|
Google Oneindia Kannada News

ಕರ್ನಾಟಕ ಹಾಗೂ ಗುಜರಾತ್ ರೀತಿಯಲ್ಲೇ ಪಂಜಾಬ್‌ನಲ್ಲಿಯೂ ಮುಖ್ಯಮಂತ್ರಿಯ ಅಚ್ಚರಿ ಆಯ್ಕೆ ಆಗಿದೆ.

ಆದರೆ ಈ ಬಾರಿ ಬದಲು ಕಾಂಗ್ರೆಸ್ ಇಂತಹದೊಂದು ಅಚ್ಚರಿ ತೀರ್ಮಾನ ಮಾಡಿದೆ. ಮುಖ್ಯಮಂತ್ರಿ ರೇಸ್‌ನಲ್ಲಿಯೇ ಇಲ್ಲದ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದೆ.

ಪಂಜಾಬ್ ಸಿಎಂ ರಾಜೀನಾಮೆ ಸುತ್ತ: ತಿಳಿಯಲೇ ಬೇಕಾದ 10 ಅಂಶಗಳುಪಂಜಾಬ್ ಸಿಎಂ ರಾಜೀನಾಮೆ ಸುತ್ತ: ತಿಳಿಯಲೇ ಬೇಕಾದ 10 ಅಂಶಗಳು

ಪಂಜಾಬ್ ಕಾಂಗ್ರೆಸ್‌ನ ಆಂತರಿಮ ಗೊಂದಲ ಹಾಗೂ ಇತರೆ ಭಿನ್ನಾಭಿಪ್ರಾಯಗಳ ಮಧ್ಯೆ ಚುನಾವಣೆ ಸಂದರ್ಭದಲ್ಲಿ ಹೊಸ ಹೆಸರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿಯ ನಿರ್ಧಾರ ಮಾಡಿದೆ.

How Sidhu Scotched Jakhar’s & Randhawa’s Chance Before Agreeing On Channi

ಮುಖ್ಯಮಂತ್ರಿ ಹುದ್ದೆಗಾಗಿ ಸುನಿಲ್ ಜಾಖರ್, ರಂಧಾವಾಲಾ ಹೆಸರು ಪ್ರಮುಖವಾಗಿತ್ತು, ಜಾಖರ್ ಹೆಸರಿಗೆ ಕೆಲ ಹಿರಿಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಸಿಧು ಕೂಡ ಜಾಖರ್ ಬೆಂಬಲಕ್ಕೆ ನಿಂತಿಲ್ಲ ಎನ್ನಲಾಗಿದೆ. ಬಳಿಕ ಜಾಖರ್ ಬದಲಿಗೆ ಅಂಬಿಕಾ ಸೋನಿಯನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ತೋರಿತ್ತು. ಆದರೆ ರಾಹುಲ್ ಗಾಂಧಿಯನ್ನು ಭೇಟಿಯಾದ ಅಂಬಿಕಾ ಸೋನಿ ತನಗೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆ ಬೇಡ ಯಾವುದಾದರೂ ಸಿಖ್ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಮನವಿ ಮಾಡಿದ್ದರು.

ಇತ್ತೀಚಿನ ಬೆಳವಣಿಗೆ ಬಳಿಕ ರಾಂಧಾವಾಲಾ ಹೆಸರು ಮುನ್ನೆಲೆಗೆ ಬಂದಿತ್ತು, ಹಾಗೆಯೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧುಗಿಂತ ಹೆಚ್ಚು ಶಾಸಕರ ಬೆಂಬಲವನ್ನೂ ಹೊಂದಿದ್ದರು ಎನ್ನಲಾಗಿದೆ.

ಆದರೆ ರಾಂಧಾವಾಲಾ ಅಯ್ಕೆಗೆ ಸಿಧು ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ದಲಿತ ಸಿಖ್ ನಾಯಕರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಶಾಸಕಾಂಗ ಸಭೆ ಹಾಗೂ ಹೈಮಾಂಡ್ ರಾಂಧಾವಾಲಾ ಹೆಸರನ್ನು ಬಹುತೇಕ ಅಂತಿಮಗೊಳಿಸಿತ್ತು ಎನ್ನಲಾಗಿದೆ, ಹೀಗಾಗಿ ಜಾಖರ್ ಹಾಗೂ ಇನ್ನಿತರೆ ಹಿರಿಯ ಶಾಸಕರು ಕಾಂಗ್ರೆಸ್ ಮುಖಂಡರು ರಾಂಧಾವಾಲಾ ಅವರ ಮನೆಗೆ ತೆರಳಿ ಶುಭಾಶಯ ಕೋರಿದ್ದರು. ಆದರೆ ಶನಿವಾರ ತಡೆರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಾಂಧಾವಾಲಾ ಹೆಸರನ್ನು ಕೂಡ ಕೈಬಿಡಲಾಗಿತ್ತು.

ರಾಂಧಾವಾಲಾ ಬದಲಿಗೆ ಚರಂಜಿತ್ ಸಿಂಗ್ ಚನ್ನಿ ಹೆಸರನ್ನು ಅಂತಿಮಗೊಳಿಸಲಾಗಿದೆ. ವಿಶೇಷವೆಂದರೆ ಚನ್ನಿ ಹೆಸರು ಅಂತಿಮವಾಗುವ ವೇಳೆಯಲ್ಲಿ ರಾಂಧಾವಾಲಾ ಮನೆಯಲ್ಲಿದ್ದ ಚನ್ನಿ ರಾಂಧಾವಾಲಾಗೆ ಶುಭಾಶಯವನ್ನು ಕೋರುತ್ತಿದ್ದರು.

ಚನ್ನಿ ಹೆಸರನ್ನು ಆಯ್ಕೆ ಮಾಡುವಲ್ಲಿ ಸಿಧು ಪಾತ್ರ ಪ್ರಮುಖವಾಗಿದೆ. ಅಖಾಲಿದಳ ಹಾಗೂ ಬಿಜೆಪಿಗೆ ಟಕ್ಕರ್ ನೀಡುವ ಸಲುವಾಗಿ ದಲಿತ ಸಿಖ್ ನಾಯಕರನ್ನು ಹುದ್ದೆಗೆ ತಂದರೆ ದಲಿತದರ ಮತಗಳನ್ನು ಸೆಳೆಯಬಹುದು ಎನ್ನುವುದು ದಲಿತ ಹಾಗೂ ಸಿಖ್ ಲೆಕ್ಕಾಚಾರವಾಗಿದೆ.

ಸಿಧು ಜತೆಗೆ ಚನ್ನಿ ಆಯ್ಕೆಯಲ್ಲಿ ಅಮರಿಂದರ್ ಸಿಂಗ್ ಸರ್ಕಾರದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಮನ್‌ಪ್ರೀತ್ ಸಿಂಗ್ ಅವರ ಪಾತ್ರ ದೊಡ್ಡದಿದೆ ಎನ್ನಲಾಗಿದೆ. ಹೈಕಾಂಡ್‌ಗೆ ಚನ್ನಿ ಹೆಸರನ್ನು ಸೂಚಿಸಿ ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರ ಬೆಂಬಲಿಗರನ್ನೂ ಸರ್ಕಾರದಿಂದ ದೂರವಿಟ್ಟಿರುವ ಸಿಧು ಚುನಾವಣೆಗೂ ಮುನ್ನ ತಮ್ಮ ಪಾರುಪತ್ಯವನ್ನು ಸಾಧಿಸಿದ್ದಾರೆ. ಈಗಿರುವ ಮುಖ್ಯಮಂತ್ರಿ ಆಯ್ಕೆ ಕೇವಲ ತಾತ್ಕಾಲಿಕ ಎನ್ನುವುದು ಈಗಾಗಲೇ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಮುಂದಿನ ಚುನಾವಣೆಯನ್ನು ಸಿಧು ನೇತೃತ್ವದಲ್ಲಿಯೇ ಕಾಂಗ್ರೆಸ್ ಎದುರಿಸಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ತಂದು ಪಂಜಾಬ್‌ನಲ್ಲಿ ಮುಖ್ಯಮಂತ್ರಿಯಾಗುವ ಕನಸಲ್ಲಿ ಸಿಧು ಇದ್ದಾರೆ. (ಮಾಹಿತಿ ಕೃಪೆ- ದಿ ಪ್ರಿಂಟ್).

English summary
It was a tumultuous day in Punjab as the Congress high command met to decide on the new Punjab CM but was unable to reach a consensus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X