ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಿಂದ ಶೌಚಾಲಯದಲ್ಲೇ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

|
Google Oneindia Kannada News

ಪಾಣಿಪತ್, ಅಕ್ಟೋಬರ್ 15: ಒಂದು ವರ್ಷಗಳ ಕಾಲ ಪತ್ನಿಯನ್ನು ಶೌಚಾಲಯದಲ್ಲೇ ಕೂಡಿಹಾಕಿದ್ದ ಘಟನೆ ಹರ್ಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ಮಹಿಳೆಯನ್ನು ಮಹಿಳಾ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿಗಳ ತಂಡ ರಕ್ಷಿಸಿದೆ.ಒಂದು ವರ್ಷದಿಂದ ಮಹಿಳೆಯೊಬ್ಬರನ್ನು ಶೌಚಾಲಯದಲ್ಲಿ ಕೂಡಿಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು ಹಾಗಾಗಿ ಇಲ್ಲಿಗೆ ಬಂದೆವು, ಇಲ್ಲಿ ನೋಡಿದಾಗ ಸುದ್ದಿ ನಿಜವೆಂದು ತಿಳಿದು ಆಘಾತವಾಯಿತು. ಹಲವು ದಿನಗಳಿಂದ ಮಹಿಳೆ ಏನೂ ತಿಂದಿರಲಿಲ್ಲ ಎಂದು ರಜನಿ ಗುಪ್ತಾ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳಾ ಸುರಕ್ಷತೆ ಬಗ್ಗೆ ಎರಡೇ ಪ್ರಶ್ನೆ!ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳಾ ಸುರಕ್ಷತೆ ಬಗ್ಗೆ ಎರಡೇ ಪ್ರಶ್ನೆ!

ಮಹಿಳೆಯರ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿ ರಜನಿ ಗುಪ್ತಾ ಮಾಹಿತಿ ಸಿಕ್ಕಿದ ಕೂಡಲೇ ನಮ್ಮ ತಂಡ ಗ್ರಾಮಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದೆವು ಎಂದು ತಿಳಿಸಿದ್ದಾರೆ.

Haryana Woman, Locked In Toilet For Over A Year By Husband, Rescued

ಮಹಿಳೆಯ ಪತಿ, ಆಕೆ ಮಾನಸಿಕ ಅಸ್ವಸ್ಥಳು ನಮ್ಮ ಮಾತು ಎಂದೂ ಕೇಳುತ್ತಿರಲಿಲ್ಲ ಹಾಗಾಗಿ ಈ ರೀತಿ ಕೂಡಿಹಾಕಿದ್ದೆವು ಎಂದು ಹೇಳಿದ್ದಾರೆ.ವೈದ್ಯರ ಬಳಿಗೆ ಹೋಗಿ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥಳೇ ಎಂದು ವೈದ್ಯರ ಸಲಹೆಯನ್ನು ಪೊಲೀಸರು ಪಡೆಯುತ್ತಾರೆ.

ಮಹಿಳೆ ಮಾನಸಿಕ ಅಸ್ವಸ್ಥತೆ ಎಂದು ಹೇಳುತ್ತಿದ್ದಾರೆ, ಆದರೆ ಅದು ಸುಳ್ಳು.ನಾವು ಆಕೆಯನ್ನು ಮಾತನಾಡಿಸಿದಾಗ ನಮಗೆ ಹಾಗೆ ಅನ್ನಿಸಲಿಲ್ಲ. ಹಾಗಾಗಿ ಆಕೆ ಅಸ್ವಸ್ಥೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಶೌಚಾಲಯದೊಳಗೆ ಆಕೆಯನ್ನು ಕೂಡಿ ಹಾಕಲಾಗಿತ್ತು. ನಾವು ರಕ್ಷಿಸಿ ಆಕೆಯ ತಲೆಗೂದಲು ತೊಳೆದೆವು. ಪೊಲೀಸ್ ದೂರು ದಾಖಲಿಸಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

English summary
A woman, who was allegedly locked inside a toilet for over a year by her husband in Rishpur village, was rescued by Women Protection and Child Marriage Prohibition Officer Rajni Gupta along with her team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X