ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಬೆಟ್ಟದಷ್ಟು ನಿರೀಕ್ಷೆ ಹುಸಿ: ಅತಂತ್ರದತ್ತ ಹರಿಯಾಣ ವಿಧಾನಸಭೆ

|
Google Oneindia Kannada News

ಚಂಡೀಘಡ, ಅಕ್ಟೋಬರ್ 24: ಹರಿಯಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದೇ ಎಣಿಸಲಾಗಿತ್ತು. ವಿಪಕ್ಷ ಕಾಂಗ್ರೆಸ್‌ಗೆ ಐದಕ್ಕಿಂತಲೂ ಕಡಿಮೆ ಸೀಟುಗಳಷ್ಟೆ ಬರುತ್ತವೆಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ ಇವೆಲ್ಲ ಸುಳ್ಳಾಗಿವೆ.

ಮತ ಎಣಿಕೆ ಪ್ರಾರಂಭವಾಗಿ ಎರಡು ಗಂಟೆ ವೇಳೆಗೆ ಹರಿಯಾಣದ 90 ಕ್ಷೇತ್ರಗಳ ಮುನ್ನಡೆಯೂ ಹೊರಗೆ ಬಿದ್ದಿದ್ದು, 90 ರಲ್ಲಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್‌ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಐಎನ್‌ಎಲ್‌ಡಿ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಉಳಿದ ಕ್ಷೇತ್ರಗಳಲ್ಲಿ ಜನನಾಯಕ ಜನತಾ ಪಕ್ಷ ಮುನ್ನಡೆಯಲ್ಲಿವೆ.

Results 2019 Live: ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಬಹುಮತ ಸಿಗೋದು ಡೌಟ್!Results 2019 Live: ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಬಹುಮತ ಸಿಗೋದು ಡೌಟ್!

ಹರಿಯಾಣದಲ್ಲಿ ವಿಪಕ್ಷವಾದ ಕಾಂಗ್ರೆಸ್ ಒಳಜಗಳಗಳಿಂದ ತತ್ತರಿಸಿತ್ತು. ಆಡಳಿತಾರೂಢ ಬಿಜೆಪಿಗೆ ಈ ವಿಧಾನಸಭೆ ಚುನಾವಣೆ ಸುಲಭದ ಗೆಲುವು ಎಂದೇ ಹೇಳಲಾಗಿತ್ತು. ಆದರೆ ಮತದಾರನ ಮನಸ್ಸಿನಲ್ಲಿ ಬೇರೆಯೇ ಇದ್ದಂತಿದೆ.

Haryana Towards Hung Assembly, JJP May Be King Maker

ಮತ ಎಣಿಕೆಯ ಈವರೆಗಿನ (ಬೆಳಿಗ್ಗೆ 10 ಗಂಟೆ) ಟ್ರೆಂಡ್‌ ಪ್ರಕಾರ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈಗಿನ ಮುನ್ನಡೆಯೇ ಮುಂದುವರೆದರೆ ಬಿಜೆಪಿಗೆ ಈ ಸಂಖ್ಯೆ ದೊರಕದು. ಕಾಂಗ್ರೆಸ್‌ ಸಹ ಗುರಿ ಮುಟ್ಟಲು ಸಾಧ್ಯವಾಗದು. ಹರಿಯಾಣದಲ್ಲಿ ಜನನಾಯಕ ಜನತಾ ಪಕ್ಷ ನಿರ್ಣಾಯಕ ಸ್ಥಾನ ವಹಿಸಲಿದೆ.

Exit Poll of Polls: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವುExit Poll of Polls: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 47 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ಕೇವಲ 15 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತ್ತು. ಐಎನ್‌ಎಲ್‌ಡಿ ಪಕ್ಷವು 19 ಸ್ಥಾನಗಳಲ್ಲಷ್ಟೆ ಗೆದ್ದಿತ್ತು.

English summary
BJP lagging behind in Haryana assembly elections. Expected that BJP is going to win by big margin in Haryana but its not happening. JJP may emerge as king maker in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X