ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಅಧಿಕಾರಿಗಳನ್ನು ಟ್ಯ್ರಾಕ್‌ ಮಾಡಲು ಸ್ಮಾರ್ಟ್ ವಾಚ್‌: ಹರಿಯಾಣ ಸಿಎಂ

|
Google Oneindia Kannada News

ಚಂಡೀಗಢ, ಅಕ್ಟೋಬರ್‌ 24: ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸದ ಅವಧಿಯಲ್ಲಿ ಎಲ್ಲಿ ಇರುತ್ತಾರೆ ಎಂಬುವುದನ್ನು ಪತ್ತೆ ಹಚ್ಚಲು ಸ್ಮಾರ್ಟ್ ವಾಚ್‌ ಬಳಕೆಯ ಪ್ರಸ್ತಾಪವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಮಾಡಿದ್ದಾರೆ.

ಶನಿವಾರ ಸೊಹ್ನಾದ ಸರ್ಮತ್ಲಾ ಗ್ರಾಮದಲ್ಲಿ ವಿಕಾಸ್‌ ರ್‍ಯಾಲಿ ಸಂದರ್ಭದಲ್ಲಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, "ಹರಿಯಾಣದ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಸ್ಮಾರ್ಟ್ ಫೋನ್‌ ವಾಚ್‌ ಅನ್ನು ಧರಿಸಬೇಕು. ಕೆಲಸದ ಅವಧಿಯ ಸಂದರ್ಭದಲ್ಲಿ ಈ ಸರ್ಕಾರಿ ಅಧಿಕಾರಿಗಳು ಎಲ್ಲಿ ಇರುತ್ತಾರೆ ಎಂದು ಪತ್ತೆಹಚ್ಚಲು ಈ ಸ್ಮಾರ್ಟ್ ವಾಚ್‌ ಅನ್ನು ಹಾಜರಾತಿಯನ್ನು ಗುರುತಿಸಲು ಬಳಸಲಾಗುತ್ತದೆ," ಎಂದು ತಿಳಿಸಿದರು.

ಹೋಂ ಕ್ವಾರಂಟೇನ್ ಗಳಿಂದ ಗಂಟೆಗೊಂದು ಸೆಲ್ಫೀ; ರಾಮನಗರ ಡಿಸಿ ಸೂಚನೆ
"ಸರ್ಕಾರಿ ಅಧಿಕಾರಿಗಳು ಕೆಲಸದ ಅವಧಿಯಲ್ಲಿ ಎಲ್ಲಿ ಹೋಗುತ್ತಾರೆ, ಎಲ್ಲಿ ಇರುತ್ತಾರೆ ಎಂದು ಟ್ಯ್ರಾಕ್‌ ಮಾಡುವ ಸ್ಮಾರ್ಟ್ ವಾಚ್‌ ಅನ್ನು ಎಲ್ಲಾ ಸರ್ಕಾರಿ ಅಧಿಕಾರಿಗಳು ಧರಿಸಬೇಕು. ಇದನ್ನು ಹಾಜರಾತಿ ಇರುತ್ತಿಸಲು ಬಳಸಲಾಗುತ್ತದೆ," ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದರು.

 Haryana to provide smartwatches to officials to track their attendance

"ಈ ಸ್ಮಾರ್ಟ್ ವಾಚ್‌ ಧರಿಸುವ ಕ್ರಮವು ಹಿಂದಿನ ಕಾರ್ಯ ವೈಖರಿ ಹಾಗೂ ವ್ಯವಸ್ಥೆಯಲ್ಲಿ ಪ್ರಗತಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದು ಸರ್ಕಾರಿ ಅಧಿಕಾರಿಗಳ ಹಾಜರಾತಿಯಲ್ಲಿ ಉಂಟಾಗುವ ಕೆಲವು ಲೋಪದೋಷಗಳನ್ನು ನಿವಾರಣೆ ಮಾಡುತ್ತದೆ," ಎಂದಿದ್ದಾರೆ.

"ಈ ಹೊಸ ವ್ಯವಸ್ಥೆಯು ಸರ್ಕಾರಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ತರುತ್ತದೆ ಮತ್ತು ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಸರ್ಕಾರಿ ಅಧಿಕಾರಿಗಳು ನಕಲಿ ಹಾಜರಾತಿಯನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಿಲ್ಲ. ನಕಲಿ, ಸುಳ್ಳು ಹಾಜರಾತಿಯನ್ನು ಈ ಸ್ಮಾರ್ಟ್ ವಾಚ್‌ ಬಯಲಿಗೆ ಎಳೆಯುತ್ತದೆ," ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅಭಿಪ್ರಾಯಿಸಿದ್ದಾರೆ.

ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ನೋಡಿದರೆ ಕಾಣುತ್ತಿತ್ತು ಉತ್ತರಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ನೋಡಿದರೆ ಕಾಣುತ್ತಿತ್ತು ಉತ್ತರ

"ನಾವು ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳಿಗಾಗಿ ಸ್ಮಾರ್ಟ್ ವಾಚ್‌ ಅನ್ನು ಪರಿಚಯ ಮಾಡುತ್ತಿದ್ದೇವೆ. ಇದು ನಾವು ಯಾವ ಅಧಿಕಾರಿಯನ್ನು ಗುರುತು ಮಾಡಿರುತ್ತೇವೋ ಆ ಅಧಿಕಾರಿಯನ್ನು ಮಾತ್ರ ಟ್ಯ್ರಾಕ್‌ ಮಾಡುತ್ತದೆ. ಒಂದು ವೇಳೆ ಈ ಸ್ಮಾರ್ಟ್ ವಾಚ್‌ ಅನ್ನು ಆ ನಿರ್ದಿಷ್ಟ ಅಧಿಕಾರಿ ಹೊರತಾಗಿ ಬೇರೆ ಯಾರಾದರೂ ಬಳಕೆ ಮಾಡಿದರೆ, ಅದು ಕಾರ್ಯ ನಿರ್ವಹಣೆ ಮಾಡುವುದನ್ನು ಸ್ಥಗಿತಗೊಳಿಸುತ್ತದೆ. ನಿರ್ದಿಷ್ಟ ಸರ್ಕಾರಿ ಅಧಿಕಾರಿ ಹೊರತಾಗಿ ಬೇರೆ ಯಾರ ಕೈಯಲ್ಲೂ ಈ ಸ್ಮಾರ್ಟ್ ವಾಚ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ಮುಖಾಂತರ ಹರಿಯಾಣದ ಎಲ್ಲಾ ಸರ್ಕಾರಿ ಅಧಿಕಾರಿಗಳು ಎಲ್ಲಿ ಹೋಗುತ್ತಾರೆ, ಎಲ್ಲಿ ಬರುತ್ತಾರೆ ಎಂದು ನಾವು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ," ಎಂದು ವಿವರಿಸಿದರು.

ಬಿಜೆಪಿ ಅಧಿಕಾರ ಬಂದ ಬಳಿಕ ಬಯೋಮೆಟ್ರಿಕ್ ವ್ಯವಸ್ಥೆ

2014 ರಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಪಡೆಯುವ ಮುನ್ನ ಇದ್ದ ರಿಜಿಸ್ಟರ್‌ನಲ್ಲಿ ಹಾಜರಾತಿಯನ್ನು ಹಾಕುವ ವ್ಯವಸ್ಥೆಯನ್ನು ಉಲ್ಲೇಖ ಮಾಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, "ಈ ಹಿಂದೆ 2014 ಕ್ಕಿಂತ ಮೊದಲು ಸರ್ಕಾರಿ ಅಧಿಕಾರಿಗಳು ಒಂದು ವಾರದ ಬೇರೆ ಎಲ್ಲೋ ಇದ್ದು ಕಚೇರಿಗೆ ಬಂದ ಬಳಿಕ ಎಲ್ಲಾ ದಿನಗಳಲ್ಲಿ ತಾನು ಹಾಜರಾಗಿದ್ದೇನೆ ಎಂದು ಟಿಕ್‌ ಮಾರ್ಕ್ ಹಾಕುತ್ತಾನೆ. ಆದರೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ಇದನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಸರ್ಕಾರಿ ಅಧಿಕಾರಿಗಳಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ನೌಕರರ ಹಾಜರಾತಿಯನ್ನು ಕ್ರಮಬದ್ಧಗೊಳಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ," ಎಂದು ತಿಳಿಸಿದರು.

ಪ್ರಸ್ತುತ, ಸ್ಮಾರ್ಟ್ ವಾಚ್ ಹಾಜರಾತಿ ವ್ಯವಸ್ಥೆಯನ್ನು ಪಂಚಕುಲ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಚಂಡೀಗಢ ಆಡಳಿತವು ಅಳವಡಿಸಿಕೊಂಡಿದೆ. ಆದರೆ ಅಧಿಕಾರಿಗಳು ಇದಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. "ಈ ರೀತಿಯಾಗಿ ಜಿಪಿಎಸ್‌ ಮೇಲ್ವಿಚಾರಣಾ ವ್ಯವಸ್ಥೆಯು ನಮ್ಮ ಗೌಪ್ಯತೆಯ ಉಲ್ಲಂಘನೆಯನ್ನು ಮಾಡುತ್ತದೆ," ಎಂದು ಆರೋಪ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Smartwatches to track movement of govt officials during office hours said Haryana CM Manohar Lal Khattar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X