ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ ನೋಡಿ ವಿದೇಶಿಗರೆಂದು ಜರಿದು ಪಾಸ್‌ಪೋರ್ಟ್‌ ನಿರಾಕರಣೆ

|
Google Oneindia Kannada News

ಚಂಡೀಘಡ, ಜನವರಿ 02: ಪಾಸ್‌ಪೋರ್ಟ್‌ ನೀಡಲು ದಾಖಲೆಗಳು ಕಡ್ಡಾಯ, ದಾಖಲೆಗಳನ್ನು ಮೂಲವಾಗಿ ಪರಿಗಣಿಸಿ ಪಾಸ್‌ಪೋರ್ಟ್ ನೀಡಲಾಗುತ್ತದೆ ಆದರೆ ಮುಖ ನೋಡಿ ಪಾಸ್‌ಪೋರ್ಟ್‌ ನಿರಾಕರಿಸಿದ ಘಟನೆ ಹರ್ಯಾಣಾದಲ್ಲಿ ನಡೆದಿದೆ.

ಹರ್ಯಾಣಾದ ಇಬ್ಬರು ಸಹೋದರಿಯರು ಪಾಸ್‌ಪೋರ್ಟ್‌ ಮಾಡಿಸಲೆಂದು ಪಾಸ್‌ಪೋರ್ಟ್‌ ಕಚೇರಿಗೆ ಹೋದಾಗ ಸಂದರ್ಶನ ಮಾಡಿದ ಅಧಿಕಾರಿಗಳು ಸಹೋದರಿಯರು ನೋಡಲು ನೇಪಾಳ ದೇಶದವರಂತೆ ಇದ್ದಾರೆಂದು ಹೇಳಿ ಪಾಸ್‌ಪೋರ್ಟ್ ಕೊಡಲು ನಿರಾಕರಿಸಿದ್ದಾರೆ.

ಪಾಸ್‌ಪೋರ್ಟ್‌ನಲ್ಲಿ ಬಿಜೆಪಿಯ ಕಮಲ ಚಿಹ್ನೆ ಬಳಸಿದ್ದೇಕೆ?ಪಾಸ್‌ಪೋರ್ಟ್‌ನಲ್ಲಿ ಬಿಜೆಪಿಯ ಕಮಲ ಚಿಹ್ನೆ ಬಳಸಿದ್ದೇಕೆ?

ಹರಿಯಾಣಾದ ಹೀನಾ ಮತ್ತು ಸಂತೋಶ್ ಎಂಬ ಇಬ್ಬರು ಸಹೋದರಿಯರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಎಲ್ಲಾ ದಾಖಲೆಗಳನ್ನೂ ನೀಡಿದ್ದರೂ, ಅವರು ನೇಪಾಳಿಯರಂತೆ ಕಾಣುತ್ತಾರೆಂದು ಪಾಸ್‌ಪೋರ್ಟ್ ಅಧಿಕಾರಿಗಳು ಅವರಿಗೆ ಪಾಸ್‌ಪೋರ್ಟ್ ನೀಡಿಲ್ಲ ಜೊತೆಗೆ ಇಬ್ಬರೂ ತಮ್ಮ ಪೌರತ್ವ ಸಾಬೀತುಪಡಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.

Haryana Sisters Denied Passport Doubting They Are From Nepal

ಸಹೋದರಿಯರು ಇದೇ ವಿಷಯವಾಗಿ ಹರಿಯಾಣಾದ ಸಚಿವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಪಾಸ್‌ಪೋರ್ಟ್ ನೀಡಲಾಗುವುದು ಎಂದಿದ್ದಾರೆ.

ಹೀನಾ ಹೇಳುವಂತೆ, ಅವರ ತಾತ ನೇಪಾಳಿಯವರಾಗಿದ್ದರು. ಅವರ ತಂದೆ ಇಲ್ಲಿಯೇ ಭಾರತದಲ್ಲಿ ಹುಟ್ಟಿದವರು, ಪಾಸ್‌ಪೋರ್ಟ್ ನಿರಾಕರಿಸಲ್ಪಟ್ಟ ಸಹೋದರಿಯರಿಬ್ಬರೂ ಭಾರತದಲ್ಲೇ ಹುಟ್ಟಿದ್ದಾರೆ, ಶಿಕ್ಷಣ ಪಡೆದಿದ್ದಾರೆ. ಆ ದಾಖಲೆಗಳನ್ನೂ ನೀಡಿದ್ದಾರೆ. ಆದರೂ ಸಹ ಅವರನ್ನು ನೇಪಾಳಿಯರೆಂದು ಕರೆಯಲಾಗಿದೆ.

ನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆ

ಘಟನೆ ನಡೆದಿರುವ ಹರಿಯಾಣಾದ ಅಂಬಾಲ ಜಿಲ್ಲೆಯ ಜಿಲ್ಲಾಧಿಕಾರಿ ಅಶೋಕ್ ಶರ್ಮಾ ಮಾತನಾಡಿ, 'ಪಾಸ್‌ಪೋರ್ಟ್ ನಿರಾಕರಿಸಲು 'ನೇಪಾಳಿಯರಂತೆ ಕಾಣುತ್ತಾರೆ' ಎಂಬ ಕಾರಣವನ್ನು ಆ ಅಧಿಕಾರಿಗಳು ಅರ್ಜಿಯ ಮೇಲೆ ಬರೆದಿದ್ದರು. ಇದು ನನ್ನ ಗಮನಕ್ಕೆ ಬಂದ ಕೂಡಲೇ ಸಹೋದರಿಯರಿಬ್ಬರನ್ನೂ ಸಂಪರ್ಕಿಸಿ ಅಗತ್ಯ ಭರವಸೆ ನೀಡಿದ್ದೆ, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ' ಎಂದಿದ್ದಾರೆ.

English summary
Haryana's two sisters denied passport. Officers write not on the application that applicants seem to be Nepalis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X