ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಲವು ಪ್ರಥಮ'ಗಳ ನಾಯಕಿ ಚಂದ್ರವತಿ ದೇವಿ ನಿಧನ

|
Google Oneindia Kannada News

ಚಂಡೀಗಡ, ನವೆಂಬರ್ 16: ಹರಿಯಾಣದ ಮೊದಲ ಮಹಿಳಾ ಸಂಸದರು ಮತ್ತು ಶಾಸಕಿ ಹೆಗ್ಗಳಿಕೆಗೆ ಪಾತ್ರರಾಗಿದ್ದ ಚಂದ್ರವತಿ ದೇವಿ ಭಾನುವಾರ ರಾತ್ರಿ (92) ನಿಧನರಾದರು. ಅವರು ಕೋವಿಡ್ 19ನಿಂದಾಗಿ ಮೃತಪಟ್ಟಿದ್ದಾರೆ.

ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿದ್ದ ಅವರು ಕೆಲವುದಿನಗಳಿಂದ ರೋಹ್ಟಕ್‌ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಾದ್ರಿ ಜಿಲ್ಲೆಯ ಡಲಾವಸ್ ಗ್ರಾಮದಲ್ಲಿ ಕೋವಿಡ್ 19 ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ವೈದ್ಯರೇ ಅವರ ಅಂತ್ಯಸಂಸ್ಕಾರ ನೆರವೇರಿಸಿದರು.

ಹರಿಯಾಣ ಭಾಗದ ಮೊದಲ ಮಹಿಳಾ ವಕೀಲರು ಕೂಡ ಎನಿಸಿಕೊಂಡಿದ್ದ ಚಂದ್ರವತಿ ದೇವಿ, ಬಾಧ್ರಾ ಕ್ಷೇತ್ರದಿಂದ (ಆಗ ಮಹೇಂದ್ರಗಡ) 1954ರಲ್ಲಿ ಪಿಇಪಿಎಸ್‌ಯು ವಿಧಾನಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು.

Haryanas First Woman MP Chandravati Devi Dies Of Covid At 92

1977ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ರಾಜ್ಯದ ಆಗಿನ ಪ್ರಬಲ ರಾಜಕಾರಣಿ ಚೌಧರಿ ಬನ್ಸಿ ಲಾಲ್ ಅವರನ್ನು ಸೋಲಿಸುವ ಮೂಲಕ ಹರಿಯಾಣದ ಪ್ರಥಮ ಮಹಿಳಾ ಸಂಸದರೆಂಬ ಕೀರ್ತಿಗೂ ಪಾತ್ರರಾಗಿದ್ದರು.

Recommended Video

ಹಾಗಾದ್ರೆ ಈ ಆಟಗಾರರ ಭವಿಷ್ಯ !! | RCB | Oneindia Kannada

ವಿರೋಧಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ತೋಷಮ್ ಶಾಸಕ ಕಿರಣ್ ಚೌಧರಿ, ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಓಪಿ ಧನಕರ್ ಹಾಗೂ ಮುಂತಾದ ನಾಯಕರು ಚಂದ್ರವತಿ ದೇವಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

English summary
Haryana's first woman MP and MLA, former lieutenant governor of Puducherry Chandravati Devi (92) died of Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X