• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರ್ಯಾಣ ವಿಧಾನಸಭೆಗೆ ಬಿಜೆಪಿಯಿಂದ ಟಿಕ್ ಟಾಕ್ ಸ್ಟಾರ್ ಸ್ಪರ್ಧೆ

|

ಚಂದೀಗಢ, ಅಕ್ಟೋಬರ್ 03: ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಅಚ್ಚರಿ ಮೂಡಿಸುತ್ತಾ ಬಂದಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಹರ್ಯಾಣದಲ್ಲಿ ಟಿಕ್ ಟಾಕ್ ಸ್ಟಾರ್ ರೊಬ್ಬರಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಟಿಕೆಟ್ ನಿಂದ ಸ್ಪರ್ಧಿಸುವ ಅವಕಾಶ ನೀಡಿದ್ದಾರೆ.

ಟಿವಿ ತಾರೆ, ಟಿಕ್ ಟಾಕ್ ಆಪ್ ವಿಡಿಯೋ ಮೂಲಕ ಜನಪ್ರಿಯತೆ ಗಳಿಸಿರುವ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಸೊನಾಲಿ ಸಿಂಗ್ ಫೋಗಟ್ ಗೆ ಅದೃಷ್ಟ ಖುಲಾಯಿಸಿದೆ. ಅದಂಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ನೋಯಿ ವಿರುದ್ಧ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.

ಹರಿಯಾಣ ಚುನಾವಣೆ: ಬಿಜೆಪಿ ಪಟ್ಟಿಯಲ್ಲಿ ಬಬಿತಾ ಪೋಗಟ್, ಯೋಗೇಶ್ವರ್ ದತ್

2014ರ ಚುನಾವಣೆಯಲ್ಲಿ ಹರ್ಯಾಣ ಜನಹಿತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿಷ್ನೋಯಿ ಅವರು 47.1% ಮತಗಳನ್ನು ಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಕುಲವೀರ್ ಸಿಂಗ್ 32.75% ಮತಗಳಿಸಿದ್ದರು. ಕಾಂಗ್ರೆಸ್ಸಿನ ಸತೀಂದರ್ ಸಿಂಗ್ 8.47% ಮತ ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿ ಕರಣ್ ಸಿಂಗ್ 6.9% ಗಳಿಸಿ ನಾಲ್ಕನೆ ಸ್ಥಾನಕ್ಕೆ ದೂಡಲ್ಪಟ್ಟಿದ್ದರು. 2016ರಲ್ಲಿ ಕಾಂಗ್ರೆಸ್ ಜೊತೆಗೆ ಹರ್ಯಾಣ ಜನಹಿತ ಕಾಂಗ್ರೆಸ್ ವಿಲೀನಗೊಂಡಿತ್ತು . ಹೀಗಾಗಿ ಈ ಬಾರಿ ಕಾಂಗ್ರೆಸ್ಸಿನಿಂದ ಕುಲದೀಪ್ ಬಿಷ್ನೋಯಿ ಸ್ಪರ್ಧಿಸುತ್ತಿದ್ದಾರೆ. ಸೊನಾಲಿ ಹಿನ್ನಲೆಯೇನು? ಅದಂಪುರದಲ್ಲಿ ಸೊನಾಲಿ ಗೆಲುವಿನ ಸಾಧ್ಯತೆ ಹೇಗಿದೆ? ಇನ್ನಿತರ ವಿವರಗಳಿಗೆ ಮುಂದೆ ಓದಿ...

ಸೊನಾಲಿ ಸಿಂಗ್ ಹಿನ್ನೆಲೆಯೇನು?

ಸೊನಾಲಿ ಸಿಂಗ್ ಹಿನ್ನೆಲೆಯೇನು?

2019ರಲ್ಲಿ ಬಿಷ್ನೋಯಿಗೆ ಸ್ಪರ್ಧಿಯಾಗಿರುವ ಬಿಜೆಪಿಯ ಸೆಲೆಬ್ರಿಟಿ ಅಭ್ಯರ್ಥಿ ಸೊನಾಲಿ ಅವರು ಫತೇಹಾಬಾದ್ ಜಿಲ್ಲೆಯ ಭೂಥಾನ್ ಗ್ರಾಮದವರು. ಹಿಸಾರ್ ನ ಹರಿತಾದ ಸಂಜಯ್ ಫೋಗಟ್ ರನ್ನು ವರಿಸಿದ್ದು, ಏಳೂವರೆ ವರ್ಷ ವಯಸ್ಸಿನ ಓರ್ವ ಮಗಳನ್ನು ಹೊಂದಿದ್ದಾರೆ. 2016ರಲ್ಲಿ ಮುಂಬೈನಲ್ಲಿ ಸೊನಾಲಿ ಇದ್ದ ವೇಳೆಯಲ್ಲಿ ಸಂಜಯ್ ಅವರು ತಮ್ಮ ತೋಟದ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಸೊನಾಲಿ ಅಕ್ಕ ಕೂಡಾ ಫೋಗಟ್ ಕುಟುಂಬದ ಸೊಸೆಯಾಗಿದ್ದಾರೆ. ಮಿಕ್ಕಂತೆ ಇನ್ನಿಬ್ಬರು ಸೋದರಿಯರು, ಓರ್ವ ಸೋದರನಿಗೂ ಮದುವೆಯಾಗಿದೆ.

ಟಿವಿ ನಿರೂಪಕಿಯಾಗಿದ್ದ ಸೊನಾಲಿ ಸಿಂಗ್

ಟಿವಿ ನಿರೂಪಕಿಯಾಗಿದ್ದ ಸೊನಾಲಿ ಸಿಂಗ್

ನಟಿಯಾಗಬೇಕೆಂಬ ಆಸೆ ಇರಿಸಿಕೊಂಡ ಸೊನಾಲಿಗೆ ಹರ್ಯಾನ್ವಿ ಟಿವಿ ಶೋನಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತು. ದೂರದರ್ಶನದ ಕಾರ್ಯಕ್ರಮದಲ್ಲಿ ಎಂಟು ವರ್ಷಗಳ ಹಿಂದೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಮುಂದೆ ಜೀ ಟಿವಿಯ 'ಅಮ್ಮ' ಧಾರಾವಾಹಿಯಲ್ಲಿ ನವಾಬ್ ಶಾ ಅವರ ಪತ್ನಿಯಾಗಿ ನಡೆಸಿ ಖ್ಯಾತಿ ಗಳಿಸಿದರು. ಭಾರತ -ಪಾಕಿಸ್ತಾನ ವಿಭಜನೆ ಕುರಿತ ಕಥೆಯನ್ನು ಧಾರಾವಾಹಿ ಹೊಂದಿತ್ತು.

ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅ.21 ರಂದು ವಿಧಾನಸಭೆ ಚುನಾವಣೆ

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ ಸೊನಾಲಿ

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ ಸೊನಾಲಿ

ಆದರೆ ಸೊನಾಲಿಗೆ ಜನಪ್ರಿಯತೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದು ಟಿಕ್ ಟಾಕ್ ಅಪ್ಲಿಕೇಷನ್. ಟಿಕ್ ಟಾಕ್ ಮೂಲಕ ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುತ್ತಿದ್ದಂತೆ ಜನಪ್ರಿಯಿತೆ ಹೆಚ್ಚಾಗತೊಡಗಿತು. ಹಳೆ ಹಿಂದಿ, ಹರ್ಯಾನ್ವಿ ಹಾಡುಗಳಿಗೆ ನೃತ್ಯ, ಅಭಿನಯದ ಮೂಲಕ ಸೊನಾಲಿ ಎಲ್ಲರ ಮೆಚ್ಚುಗೆಗಳನ್ನು ಗಳಿಸಿದ್ದಾರೆ. ಹಳೆ ಚಿತ್ರಗಳ ಡೈಲಾಗ್ ಗಳಿಗೂ ಕೂಡಾ ಅಭಿನಯಿಸಿರುವ ಸೊನಾಲಿ ಗ್ಲಾಮರ್ ಲುಕ್ ನಲ್ಲೂ ಕಾಣಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಪ್ರಭಾವಿ ನಾಯಕಿಯಾದ ಸೊನಾಲಿ

ಬಿಜೆಪಿಯಲ್ಲಿ ಪ್ರಭಾವಿ ನಾಯಕಿಯಾದ ಸೊನಾಲಿ

ಸ್ಥಳೀಯ ಬಿಜೆಪಿ ಮುಖಂಡರ ಪಕ್ಷದಲ್ಲಿ ಹಂತ ಹಂತದಲ್ಲಿ ಬೆಳೆದು ಪರಿಶಿಷ್ಟ ಪಂಗಡದ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸ್ಥಾನಕ್ಕೇರಿದರು. ಹರ್ಯಾಣ, ನವದೆಹಲಿ, ಚಂಡೀಗಢ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ಹರ್ಯಾಣ ಚುನಾವಣೆಗೂ ಮುನ್ನವೇ ಬಿಜೆಪಿಗೆ ಗೆಲುವಿನ ಮುನ್ಸೂಚನೆ

ಅದಂಪುರದಲ್ಲಿ ಸೊನಾಲಿಗೆ ಗೆಲುವು ಸುಲಭವಲ್ಲ

ಅದಂಪುರದಲ್ಲಿ ಸೊನಾಲಿಗೆ ಗೆಲುವು ಸುಲಭವಲ್ಲ

ಕಾಂಗ್ರೆಸ್ ಹಾಗೂ ಲಾಲ್ ಕುಟುಂಬದವರ ಪ್ರಾಬಲ್ಯ ಹೆಚ್ಚಾಗಿರುವ ಅದಂಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ 2000 ಹಾಗೂ 2005ರಲ್ಲಿ ಗೆಲುವು ಸಾಧಿಸಿದ್ದರು. ಭಜನ್ ಲಾಲ್ ಪುತ್ರ ಕುಲದೀಪ್ ಬಿಷ್ನೋಯಿ ಸತತ ಎರಡು ಬಾರಿ ಜಯ ದಾಖಲಿಸಿದ್ದಾರೆ. 2011ರಲ್ಲಿ ಉಪ ಚುನಾವಣೆಯಲ್ಲಿ ಕುಲದೀಪ್ ಪತ್ನಿ ರೇಣುಕಾ ಬಿಷ್ನೋಯಿ ಕೂಡಾ ಇಲ್ಲಿ ಗೆಲುವಿನ ರುಚಿ ಕಂಡಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಠಿಣ ಪರಿಶ್ರಮ ಅಗತ್ಯ ಎಂದು ವಿಶ್ಲೇಷಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP has fielded Tik Tok sensation, TV actress Sonali Singh Phogat from Adampur constituency against Kuldeep Bishnoi of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more