ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣಕ್ಕೆ ಬರಲು ಅರ್ಜಿ ಸಲ್ಲಿಸಿದ 1 ಲಕ್ಷ ವಲಸೆ ಕಾರ್ಮಿಕರು

|
Google Oneindia Kannada News

ಚಂಡೀಗಡ, ಮೇ 9: ಲಾಕ್‌ಡೌನ್‌ನಿಂದ ಸಿಕ್ಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರನ್ನು ಊರಿಗೆ ಬಿಡುವ ವ್ಯವಸ್ಥೆ ಮಾಡುತ್ತಿದೆ. ಹರಿಯಾಣದಿಂದ ಹೊರ ಹೋಗಿದ್ದ ಕಾರ್ಮಿಕರು ಇದೀಗ ಹರಿಯಾಣಕ್ಕೆ ವಾಪಸ್‌ ಬರಲು ಅರ್ಜಿ ಸಲ್ಲಿಸಿದ್ದಾರೆ.

Recommended Video

ನಮ್ಮ ರಾಜ್ಯದಲ್ಲಿ ಎಷ್ಟು ಜನ ಬಿಹಾರದ ವಲಸೆ ಕಾರ್ಮಿಕರಿದ್ದಾರೆ ನೀವೇ ನೋಡಿ | Bihar | Oneindia Kannada

ಬೇರೆ ಬೇರೆ ರಾಜ್ಯದಿಂದ ಹರಿಯಾಣಕ್ಕೆ 1 ಲಕ್ಷ ವಲಸೆ ಕಾರ್ಮಿಕರು ತಮ್ಮ ಊರುಗಳಿಂದ ವಾಪಸ್‌ ಬರುತ್ತಿದ್ದಾರೆ. ಹರಿಯಾಣ ಸರ್ಕಾರದ ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ 1.09 ಲಕ್ಷ ಜನರು ಅರ್ಜಿ ಹಾಕಿದ್ದಾರೆ.

6 ದಿನದ ವಲಸೆ ಕಾರ್ಮಿಕರ ಕಾರ್ಯಾಚರಣೆ ಅಂತ್ಯಗೊಳಿಸಿದ ಕೆಎಸ್ಆರ್‌ಟಿಸಿ6 ದಿನದ ವಲಸೆ ಕಾರ್ಮಿಕರ ಕಾರ್ಯಾಚರಣೆ ಅಂತ್ಯಗೊಳಿಸಿದ ಕೆಎಸ್ಆರ್‌ಟಿಸಿ

ಹರಿಯಾಣ ಪ್ರಧಾನ ಕಾರ್ಯದರ್ಶಿ ಅನುರಾಗ್ ರಸ್ತೋಗಿ, ''ವಲಸೆ ಕಾರ್ಮಿಕರು ಹರಿಯಾಣಕ್ಕೆ ಬರಲು ಬಯಸಿದರೆ, ಅವರನ್ನು ಮರಳಿ ಕರೆತರಲು ನಾವು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ. ಈಗಾಗಲೇ ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಪ್ರಾರಂಭವಾಗಿವೆ.'' ಎಂದು ತಿಳಿಸಿದ್ದಾರೆ.

1.09 Lakh Migrant Workers Applied On Haryana Government Web Portal To Come Back

ಗುರಗಾಂವ್, ಫರಿದಾಬಾದ್, ಪಾಣಿಪತ್, ಸೋನಿಪತ್, ಯಮುನಾ ನಗರ್ ಮತ್ತು ರೇವರಿಗಳಿಗೆ ಬರಲು 79.29% ಜನರು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 50,000 ಕ್ಕಿಂತಲೂ ಹೆಚ್ಚು ಜನರು ಗುರಗಾಂವ್ ಜಿಲ್ಲೆಗೆ ಬರಲು ಬಯಸುತ್ತಾರೆ. ಇವು ರಾಜ್ಯದಲ್ಲಿ ಗರಿಷ್ಠ ಕೈಗಾರಿಕಾ ಚಟುವಟಿಕೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಹೊಂದಿರುವ ಜಿಲ್ಲೆಗಳು.

ಅಂದಹಾಗೆ, ಶುಕ್ರವಾರದವರೆಗೆ, ಹರಿಯಾಣದಲ್ಲಿ 14 ಇಟಾಲಿಯನ್ ಪ್ರಜೆಗಳು ಸೇರಿದಂತೆ, 647 ಪಾಸಿಟಿವ್ ಪ್ರಕರಣಗಳಿವೆ. 647 ಪ್ರಕರಣಗಳಲ್ಲಿ 279 ಪ್ರಕರಣಗಳು ಚೇತರಿಸಿಕೊಂಡಿವೆ. ಎಂಟು ಮಂದಿ ಸಾವನಪ್ಪಿದ್ದಾರೆ.

English summary
Over 1.09 lakh migrant workers from Bihar and Uttar Pradesh have applied on a Haryana government web portal to come to the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X