ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಪ್ರಯೋಗ: ಹರ್ಯಾಣ ಆರೋಗ್ಯ ಸಚಿವರಿಗೆ ಮೊದಲ ಲಸಿಕೆ

|
Google Oneindia Kannada News

ಹರ್ಯಾಣ, ನವೆಂಬರ್ 18: ಹರ್ಯಾಣದಲ್ಲಿ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯಲಿದೆ.

ಪ್ರಯೋಗದಲ್ಲಿ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಪಾಲ್ಗೊಳ್ಳಲಿದ್ದು ಮೊದಲ ಲಸಿಕೆಯನ್ನು ಪಡೆಯಲಿದ್ದಾರೆ. ಭಾರತ್ ಬಯೋಟೆಕ್ ಹರ್ಯಾಣದಲ್ಲಿ ನವೆಂಬರ್ 20 ರಂದು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಲಿದ್ದಾರೆ.

ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ

ಈ ಕುರಿತು ಸ್ವತಃ ಸಚಿವ ಅನಿಲ್ ಟ್ವೀಟ್ ಮಾಡಿದ್ದು, ಮೊದಲ ಲಸಿಕೆ ನನಗೇ ನೀಡುವಂತೆ ಕಂಪನಿ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

 Haryana Minister Anil Vij Offers Himself As First Volunteer For Covaxin Phase-3 Trial

ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಬಗ್ಗೆ ಸೋಮವಾರ ತಿಳಿಸಿದ್ದರು. ಪ್ರಯೋಗದಲ್ಲಿ 20 ಸಾವಿರ ಮಂದಿ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.

28 ದಿನಗಳ ಅಂತರದಲ್ಲಿ ಸ್ವಯಂ ಸೇವಕರಿಗೆ 2 ಡೋಸ್‌ಗಳನ್ನು ನೀಡಲಾಗುತ್ತದೆ. ಇನ್ನು ಕೊವಿಡ್ ಲಸಿಕೆ ಅಭಿವೃದ್ಧಿ ಕುರಿತು ಮಾಡೆರ್ನಾ ಜತೆ ಭಾರತ ಮಾತುಕತೆ ನಡೆಸಿದೆ.

ಕೊವಿಡ್- ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಅಧ್ಯಯನಕ್ಕಾಗಿ ಸ್ವತಂತ್ರ ರಾಷ್ಟ್ರೀಯ ಆರೋಗ್ಯ ರಚಿಸಿರುವ ದತ್ತಾಂಶ ಸುರಕ್ಷತಾ ಮಾನಿಟರಿಂಗ್ ಮಂಡಳಿ ಲಸಿಕೆ 94.5 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಹಿಡಿದಿದೆ ಎಂದು ಮಾಡರ್ನ ಸಂಸ್ಥೆ ತಿಳಿಸಿದೆ.

ವೈದ್ಯಕೀಯ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿರುವ ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡೆರ್ನಾ ಸಂಸ್ಥೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಕೊವಿಡ್ - ಲಸಿಕೆಯ ಕ್ಲಿನಿಕಲ್ ಪ್ರಯೋಗದ ಬಗ್ಗೆ ಮಾಡೆರ್ನಾ ಸಂಸ್ಥೆಯೊಂದಿಗೆ ಮಾತ್ರವಲ್ಲದೇ, ಪಿಫೈಜರ್, ಸೀರಮ್ ಇನ್ಸಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಸಂಸ್ಥೆಗಳೊಂದಿಗೆ ಲಸಿಕೆಯ ಸುರಕ್ಷತೆ, ರೋಗ ನಿರೋಧಕ ಶಕ್ತಿ ವೃದ್ಧಿ, ದಕ್ಷತೆ , ನಿಯಂತ್ರಣ ಕುರಿತಂತೆ ಮಾತುಕತೆ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

English summary
The third phase of clinical trials for the coronavirus vaccine, Covaxin, will begin in Haryana on 20 November. Haryana Health Minister Anil Vij has offered himself as first volunteer to get vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X