ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸಚಿವ ಅನಿಲ್ ವಿಜ್

|
Google Oneindia Kannada News

ಚಂಡೀಗಡ, ನವೆಂಬರ್ 20: ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವತಃ ಕೋವಿಡ್ ಲಸಿಕೆಯ ಪ್ರಯೋಗಕ್ಕೆ ಒಳಪಡುವ ಮೂಲಕ ಮಾದರಿಯಾಗಿದ್ದಾರೆ. ಭಾರತದ ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಅವರು ಒಳಗಾಗಿದ್ದಾರೆ.

ಅಂಬಾಲ ಕಂಟೋನ್ಮೆಂಟ್‌ನಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಅವರು ಕೋವ್ಯಾಕ್ಸಿನ್ ಪ್ರಯೋಗದ ಡೋಸ್ ಅನ್ನು ಪಡೆದುಕೊಂಡರು. ರಾಜ್ಯದಲ್ಲಿ ಶುಕ್ರವಾರ ಶುರುವಾದ ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗದ ಮೊದಲ ಪ್ರಾಯೋಗಿತ ಸ್ವಯಂ ಸೇವಕರಾಗಿ ವಿಜ್ ಅವರು ಪಾಲ್ಗೊಂಡರು.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣವೇನು?ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣವೇನು?

ಆರೋಗ್ಯ ಇಲಾಖೆ ಮತ್ತು ಪಿಜಿಐ ರೋಹ್ಟಕ್‌ನ ವೈದ್ಯರ ತಂಡದ ಉಸ್ತುವಾರಿಯಲ್ಲಿ 67 ವರ್ಷದ ಹಿರಿಯ ಬಿಜೆಪಿ ನಾಯಕ ವಿಜ್ ಅವರು ಲಸಿಕೆ ಪಡೆದುಕೊಂಡರು. ಅಂಬಾಲ ಕಂಟೋನ್ಮೆಂಟ್‌ನ ಶಾಸಕರಾಗಿರುವ ವಿಜ್, ರಾಜ್ಯದಲ್ಲಿ ನವೆಂಬರ್ 20ರಿಂದ ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ಶುರುವಾಗಲಿದೆ ಎಂದು ಬುಧವಾರ ತಿಳಿಸಿದ್ದರು.

 Haryana Minister Anil Vij Gets First Covaxin Shot For Phase 3 Trails Of Bharat Biotech

ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ತಯಾರಿಸಿರುವ ಕೋವ್ಯಾಕ್ಸಿನ್, ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ. ಕಳೆದ ತಿಂಗಳು ಲಸಿಕೆ ತಯಾರಕ ಸಂಸ್ಥೆಯು 1 ಮತ್ತು ಎರಡನೆಯ ಹಂತದ ಪ್ರಯೋಗದ ಮಧ್ಯಂತರ ವಿಶ್ಲೇಷಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ತಿಳಿಸಿತ್ತು.

ಆಸ್ಟ್ರಾಜೆನೆಕಾ ಲಸಿಕೆ: ವೃದ್ಧರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆಆಸ್ಟ್ರಾಜೆನೆಕಾ ಲಸಿಕೆ: ವೃದ್ಧರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

Recommended Video

ICC World Test Championship : ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಭಾರತ ತಂಡ !! | Oneindia Kannada

ಭಾರತದ 25 ವಿವಿಧ ಕೇಂದ್ರಗಳಲ್ಲಿ ಸುಮಾರು 26,000 ಸ್ವಯಂ ಸೇವಕರನ್ನು ಫೇಸ್ 3 ಪ್ರಯೋಗಕ್ಕೆ ಒಳಪಡಿಸಲಾಗುವುದು. ಇದು ಈವರೆಗಿನ ಪರೀಕ್ಷೆಗಳಲ್ಲಿ ಅತಿ ದೊಡ್ಡ ಪ್ರಯೋಗವಾಗಿರಲಿದೆ.

English summary
Haryana health minister Anil Vij gets a trial dose of Bharat Biotech's Covid-19 vaccine for the 3rd phase trial on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X