• search
 • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರ್ಯಾಣ ಸಿಎಂ ಮನೋಹರ್ ಲಾಲ್‌ ಖಟ್ಟರ್‌ಗೆ ಕೊರೊನಾ ಸೋಂಕು

|

ಚಂಡೀಗಢ, ಆಗಸ್ಟ್ 24: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.

   Unlock 4.0 : ಚಿತ್ರಮಂದಿರ , ಮೆಟ್ರೋ , ಶಾಲಾ ಕಾಲೇಜು ಸೆಪ್ಟೆಂಬರ್‌ನಿಂದ ಪುನರಾರಂಭ ಸಾಧ್ಯತೆ | Oneindia Kannada

   ಈ ಕುರಿತು ಟ್ವೀಟ್ ಮಾಡಿರುವ ಅವರು' ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದು ವಾರದಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಆಸ್ಪತ್ರೆಗೆ ತೆರಳಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ, ಹಾಗೆಯೇ ನನ್ನೊಂದಿಗೆ ಹತ್ತಿರದ ಸಂಪರ್ಕ ಹೊಂದಿರುವವರು ಕ್ವಾರಂಟೈನ್ ಆಗಿ ಎಂದು ಹೇಳಿದ್ದಾರೆ'.

   ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಕೊರೊನಾ ಸೋಂಕು

   ಮನೋಹರ್ ಲಾಲ್ ಅವರಿಗೆ ಗುರುವಾರ ನಡೆಸಿದ ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು, ಆದರೆ ಮುಂಜಾಗ್ರತಾ ಕ್ರಮವಾಗಿ ಅವರು ಮೂರು ದಿನಗಳು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿಕೊಂಡಿದ್ದರು.

   ಹರ್ಯಾಣದ ವಿಧಾನಸಭೆ ಸ್ಪೀಕರ್ ಜ್ಞಾನ ಚಂದ್ ಗುಪ್ತ ಹಾಗೂ ಇಬ್ಬರು ಬಿಜೆಪಿ ಎಂಎಲ್‌ಎ ಗಳಿಗೂ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಗಾರು ಅಧಿವೇಶನ ಶುರುವಾಗಲು ಎರಡು ದಿನಗಳು ಬಾಕಿ ಇರುವಾಗ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ.

   ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ದೆಹಲಿಯಲ್ಲಿ ಆರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಗಜೇಂದ್ರ ಸಿಂಗ್ ಅವರಿಗೂ ಸೋಂಕು ದೃಢಪಟ್ಟಿದೆ.

   English summary
   Haryana Chief Minister Manohar Lal Khattar today joined the list of politicians who got infected with the deadly coronavirus. In a tweet, he informed that he has tested positive for the illness.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X