ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ: ಮದುವೆಯಲ್ಲಿ ಕುದುರೆ ಮೇಲೆ ವಧುವಿನ ಮೆರವಣಿಗೆ

|
Google Oneindia Kannada News

ಹರಿಯಾಣ, ಏಪ್ರಿಲ್ 20: ಮದುವೆಯ ಸ್ಥಳಕ್ಕೆ ವರನೊಬ್ಬ ಕುದುರೆ ಸವಾರಿ ಮಾಡುವುದು ಭಾರತದಲ್ಲಿ ಬಹಳ ಸಾಮಾನ್ಯವಾದ ಸಂಪ್ರದಾಯವಾಗಿದೆ. ವರನು ತನ್ನ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮದುವೆ ಸ್ಥಳವನ್ನು ಅತ್ಯಂತ ಸಡಗರದಿಂದ ತಲುಪುತ್ತಾನೆ. ಸ್ನೇಹಿತರು ಸಂಬಂಧಿಕರು ನೃತ್ಯ ಮತ್ತು ಉತ್ತಮ ಸಂಗೀತದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಹರಿಯಾಣದ ಜಜ್ಜರ್‌ನ ಮಜ್ರಿ ಗ್ರಾಮದಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. ಹರಿಯಾಣದಲ್ಲಿ ವಧು ಕುದುರೆ ಮೇಲೆ ಮೆರವಣಿಗೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ. ಇಲ್ಲಿ ರಮೇಶ್ ಕುಮಾರ್ ಅವರು ತಮ್ಮ ಮಗಳ ಮದುವೆಯಲ್ಲಿ ಪುತ್ರರಂತೆ ಮಗಳನ್ನು ಕುದುರೆ ಮೇಲೆ ಮೆರವಣಿಗೆ ಮಾಡಿಸಿದ್ದಾರೆ. ಇದರ ಮೂಲಕ ಪುತ್ರರಿಗಿಂತ ಹೆಣ್ಣು ಮಕ್ಕಳು ಕಡಿಮೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ.

ಅಳಿಯ ಕುದುರೆಯ ಮೇಲೆ ಸವಾರಿ ಮಾಡುವಂತೆ ತಾನೂ ಕೂಡ ಕುದುರೆಯ ಮೇಲೆ ಸವಾರಿ ಮಾಡಬೇಕು ಎಂಬುದು ಮಗಳು ಪೂಜಾ ಬಯಕೆಯಾಗಿತ್ತು. ಹೀಗಾಗಿ ತಂದೆ ಮಗಳ ಆಸೆಯನ್ನು ಈಡೇರಿಸಿದ್ದಾರೆ. ಸಾವಿರಾರು ಜನರು ಇದನ್ನು ನೋಡಿ ಸಂತೋಷಪಟ್ಟಿದ್ದಾರೆ.

'ಮದುಮಗನಿಗೆ ಕುದುರೆ ಇದ್ದರೆ ಮದುಮಗನೇ ಏಕೆ ಬೇಡ? ಇದೊಂದು ಉತ್ತಮ ಪ್ರಯತ್ನ. ಅವರ ಕುಟುಂಬ ಮತ್ತು ಮಗಳು ಅಂತಹ ಆಶಯವನ್ನು ಹೊಂದಿರುವುದು ತಪ್ಪಿಲ್ಲ. ನಮ್ಮನ್ನು ನೋಡಿ ಈ ಸಂಪ್ರದಾಯವನ್ನು ಅನೇಕರು ಅನುಸರಿಸಬೇಕು' ಎಂದು ವಧುವಿನ ಮನೆಯವರು ಹೇಳುತ್ತಾರೆ.

Haryana: Bride marches on horseback

ಹೆಂಗಸರು, ಮಕ್ಕಳು, ಯುವಕರು, ಗ್ರಾಮಸ್ಥರು ಎಲ್ಲರೂ ಹಳ್ಳಿಯ ಬೀದಿಗಳಲ್ಲಿ ತಮ್ಮ ಮನೆಗಳ ಮುಂದೆ ಅಥವಾ ಮನೆಯ ಮೇಲ್ಛಾವಣಿಯ ಮೇಲೆ ಕತ್ತಿಯ ಮೇಲೆ ಸವಾರಿ ಮಾಡುವ ವಧುವನ್ನು ನೋಡಲು ನೆರೆದರು. ಬದ್ಲಿ ಉಪವಿಭಾಗದ ಸಮೀಪದ ಗ್ರಾಮವಾದ ಮಜ್ರಿಯಲ್ಲಿ ಹಲವಾರು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ಕುದುರೆ ಮೇಲೆ ಕತ್ತಿ ಹಿಡಿದು ಸವಾರಿ ಮಾಡುವ ಪೂಜಾ ತನ್ನ ಹಳ್ಳಿಯ ಆರಾಧ್ಯ ದೈವಗಳ ದೇವಸ್ಥಾನಗಳಿಗೆ ತಲುಪಿ ಪೂಜೆ ಸಲ್ಲಿಸಿದರು.

ಹರಿಯಾಣದ ಅಂಬಾಲ ಪ್ರದೇಶದಲ್ಲೂ ಇಂಥದ್ದೊಂದು ಮದುವೆ ನಡೆದಿದೆ. ಮದುವೆಯಲ್ಲಿ ವಧು ತನ್ನ ಕೈಯಲ್ಲಿ ಕತ್ತಿಯನ್ನು ತೆಗೆದುಕೊಂಡು ಕುದುರೆಯ ಮೇಲೆ ಸವಾರಿ ಮಾಡಿದ್ದಳು. ಕುದುರೆ ಮೇಲೆ ಕುಳಿತು ವಧು ಮೆರವಣಿಗೆಯೊಂದಿಗೆ ವರನ ಮನೆಗೆ ಹೋಗಿದ್ದಳು. ವಧು ತನ್ನ ತಂದೆ, ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಬೃಹತ್ ಮೆರವಣಿಗೆ ಮೂಲಕ ವರನ ಮನೆಗೆ ಹೋಗಿದ್ದ ಫೋಟೋಗಳು ವೈರಲ್ ಆಗಿದ್ದವು.

Haryana: Bride marches on horseback

ಕಳೆದ ವರ್ಷ ಡಿಸೆಂಬರ್‌ ನಲ್ಲಿ ಬಿಹಾರದ ಗಯಾದಲ್ಲಿ ವಿವಾಹದ ಸಂದರ್ಭದಲ್ಲಿ ವಧುವನ್ನು ಕುದುರೆ ಮೇಲೆ ಮೆರವಣಿಗೆ ಮಾಡಲಾಯಿತು. ಅನುಷ್ಕಾ ಗುಹಾ ಎಂಬ ವಧು ತನ್ನ ಮದುವೆಗೆ ಕುದುರೆ ಸವಾರಿ ಮಾಡುವ ಮೂಲಕ ಪಿತೃ ಪ್ರಭುತ್ವಕ್ಕೆ ಸವಾಲು ಹಾಕಿದರು.

Recommended Video

ಆರೊನ್ ಫಿಂಚ್-ಪ್ರಸಿದ್ಧ್ ಕೃಷ್ಣ ಮೈದಾನದಲ್ಲೇ ಮಾತಿನ‌ ಚಕಮಕಿಯ ವಿಡಿಯೋ ವೈರಲ್ | Oneindia Kannada

English summary
A special wedding took place in the Jhajjar in Haryana. The bride is paraded on horseback. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X